ಸಾರಿಗೆ ಅಧಿಕಾರಿಗಳ ಕಾರ್ಯಾಚರಣೆ, ಅನಧಿಕೃತ ನೋಂದಣಿ ಫಲಕ ತೆರವು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.29- ನೆಲಮಂಗಲ ಪ್ರಾದೇಶಿಕ ಸಾರಿಗೆ ಕಚೇರಿಯ ಹಿರಿಯ ಮೋಟಾರು ವಾಹನ ನಿರೀಕ್ಷಕ ಡಾ.ಧನ್ವಂತರಿ ಎಸ್.ವೊಡೆಯರ್ ಮತ್ತು ಮಲ್ಲೇಶ್ ಅವರ ನೇತೃತ್ವದ ತಂಡ ಇಂದು ತಾಲೂಕಿನಾದ್ಯಂತ ಕಾರ್ಯಾಚರಣೆ ನಡೆಸಿ ವಾಹನಗಳ ನೊಂದಣಿ ಫಲಕದ ಮೇಲೆ ವಿವಿಧ ಸಂಘ-ಸಂಸ್ಥೆಗಳು ಹೆಸರು, ದೇವರ ಹೆಸರು ಬರೆಸಿರುವುದನ್ನು ತೆರವುಗೊಳಿಸಿ ವಾಹನ ಮಾಲೀಕರುಗಳಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.

ನೂರಕ್ಕೂ ಹೆಚ್ಚು ವಾಹನಗಳನ್ನು ತಪಾಸಣೆ ನಡೆಸಲಾಯಿತು ಹಾಗೂ ವಾಹನ ಮಾಲೀಕರಿಗೆ ನೋಟಿಸ್ ನೀಡಿದ ಅಧಿಕಾರಿಗಳು, ಕೇಂದ್ರ ಮೋಟಾರು ವಾಹನಗಳ ನಿಯಮ 1989ರ 50/51ರ ಪ್ರಕಾರ ನೊಂದಣಿ ಫಲಕಗಳ ಮೇಲೆ ಹೆಸರು ಅಥವಾ ಚಿನ್ಹೆಗಳನ್ನು ಬಳಸುವುದು ಕಾನೂನಿಗೆ ವಿರುದ್ದವಾದುದ್ದು, ಸಾರ್ವಜನಿಕರು ಈ ನಿಯಮಗಳನ್ನು ಪಾಲಿಸಬೇಕು, ಇಲ್ಲದಿದ್ದಲ್ಲಿ ದಂಡ ಕಟ್ಟಬೇಕಾಗುತ್ತದೆ ಅಧಿಕಾರಿಗಳು ತಿಳಿಸಿದರು.

Facebook Comments