ನಾಲ್ವರು ಸಾರಿಗೆ ಅಧಿಕಾರಿಗಳ ವರ್ಗಾವಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.5- ನಾಲ್ವರು ಹಿರಿಯ ಸಾರಿಗೆ ಉಪ ಆಯುಕ್ತರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.  ಮೈಸೂರು ಪಶ್ಚಿಮ ವಿಭಾಗಕ್ಕೆ ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿದ್ದ ಸಿದ್ದಪ್ಪ.ಎಚ್.ಕಲ್ಲೇರ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ಎನ್.ಜಿ.ಗಾಯಿತ್ರಿ ದೇವಿ ಅವರನ್ನು ಮಂಗಳೂರಿನ ಉಪ ಸಾರಿಗೆ ಆಯುಕ್ತರಾಗಿ , ಎ.ಬಿ.ಯೋಮಕೇಶಪ್ಪ ಅವರನ್ನು ಬೆಂಗಳೂರು ಕೇಂದ್ರದ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ಹಾಗೂ ಆರ್.ಎಂ.ವರ್ಣೇಕರ್ ಅವರನ್ನು ಬೆಂಗಳೂರು ದಕ್ಷಿಣ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

Facebook Comments