ರಷ್ಯಾದಲ್ಲಿ 10 ಲಕ್ಷ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

ಮಾಸ್ಕೋ, ಸೆ.1- ರಷ್ಯಾದಲ್ಲಿ ಕೋವಿಡ್ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗಿದ್ದು, ಈವರೆಗೆ ಸೋಂಕಿತರ ಸಂಖ್ಯೆ 10 ಲಕ್ಷ ದಾಟಿದೆ. ಇಡೀ ವಿಶ್ವದಲ್ಲಿ ಅಮೆರಿಕ, ಬ್ರೆಜಿಲ್, ಭಾರತ ನಂತರದ ಸ್ಥಾನದಲ್ಲಿರುವ ರಷ್ಯಾದಲ್ಲಿ ಕೋವಿಡ್‍ಗೆ ಲಸಿಕೆ ಕಂಡುಹಿಡಿಯಲಾಗಿದೆ ಎಂದು ಸ್ವತಃ ರಾಷ್ಟ್ರದ ಅಧ್ಯಕ್ಷ ವ್ಲ್ಯಾಡಿಮಿರ್ ಪುಟೀನ್ ಅವರು ಪ್ರಕಟಿಸಿದ್ದಾರೆ.

ಅದರಂತೆ ಸೇನಾ ಆಸ್ಪತ್ರೆಗಳು ಸೇರಿದಂತೆ ವಿವಿಧೆಡೆ ಲಸಿಕೆಯನ್ನು ಬಳಸಲಾಗುತ್ತಿದೆ. ಆದರೆ, ಸೋಂಕಿತರ ಪ್ರಮಾಣ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ದೇಶಾದ್ಯಂತ ಜನರನ್ನು ತಪಾಸಣೆಗೊಳಪಡಿಸಿದರೆ ಕೊರೊನಾ ಸ್ಫೋಟಗೊಳ್ಳುವ ಮಾಹಿತಿ ಹೊರಹೊಮ್ಮುತ್ತದೆ.

ಆದರೆ, ಈಗ ಕೇವಲ ಕಡಿಮೆ ಸಂಖ್ಯೆಯಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇಂದು ರಷ್ಯಾದ ಹಲವು ನಗರಗಳಲ್ಲಿ ಲಾಕ್‍ಡೌನ್ ಹಿಂಪಡೆಯಲಾಗಿದ್ದು, ಬಹುತೇಕ ವಾಣಿಜ್ಯ ಪ್ರದೇಶಗಳಲ್ಲಿ ವ್ಯಾಪಾರ-ವಹಿವಾಟನ್ನು ಆರಂಭಿಸಲಾಗಿದೆ.

Facebook Comments