ಗುಂಡ್ ನ್ಯೂಸ್ : ಆ.10ರೊಳಗೆ ಸಾರ್ವಜನಿಕರಿಗೆ ಸಿಗಲಿದೆ ರಷ್ಯಾದ ಕೊರೋನಾ ಲಸಿಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ಮಾಸ್ಕೋ, ಆ.2- ಕೋವಿಡ್ ಲಸಿಕೆಯನ್ನು ಆಗಸ್ಟ್ 10ರೊಳಗೆ ಸಾರ್ವಜನಿಕವಾಗಿ ಬಿಡುಗಡೆ ಮಾಡಲು ರಷ್ಯಾ ಮುಂದಾಗಿದೆ.ವಿಶ್ವಾದ್ಯಂತ ಕಾಡುತ್ತಿರುವ ಕೋವಿಡ್‍ಅನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈಗಾಗಲೇ ಸಾಕಷ್ಟು ಪರಿಶ್ರಮ ಪಟ್ಟು ಲಸಿಕೆ ಕಂಡುಹಿಡಿಯುವ ನಿಟ್ಟಿನಲ್ಲಿ ರಷ್ಯಾ ವಿಜ್ಞಾನಿಗಳು ಸಾಕಷ್ಟು ಯಶಸ್ಸು ಸಾಧಿಸಿದ್ದಾರೆ.

ಈಗಾಗಲೇ ಸೇನಾ ಯೋಧರು ಹಾಗೂ ಸಾರ್ವಜನಿಕರ ಮೇಲೆ ಈ ಲಸಿಕೆ ಪ್ರಯೋಗ ನಡೆಸಿ ಅದು ಫಲ ನೀಡಿರುವ ಹಿನ್ನೆಲೆಯಲ್ಲಿ ಮುಂದಿನ 15 ದಿನಗಳೊಳಗೆ ಲಸಿಕೆಯನ್ನು ಬಿಡುಗಡೆ ಮಾಡಲು ರಷ್ಯಾ ಅಧ್ಯಕ್ಷ ಬ್ಲಾಡಿಮಿರ್ ಪುಟಿನ್ ಹೇಳಿಕೆ ನೀಡಿದ್ದಾರೆ.

ಆದರೆ, ಆ.10ರ ವೇಳೆಗೆ ಲಸಿಕೆ ಸಿಗುವ ಸಾಧ್ಯತೆ ಇದೆ ಎಂದು ರಷ್ಯಾದ ಹಿರಿಯ ಅಧಿಕಾರಿಗಳು ಹೇಳುತ್ತಿದ್ದಾರೆ.ಈ ಹಿಂದೆ ಅಮೆರಿಕ ಅಧ್ಯಕ್ಷ ಟ್ರಂಪ್ ರಷ್ಯಾಗಿಂತ ಮೊದಲು ನಾವು ಮದ್ದು ಕಂಡುಹಿಡಿದು ಅಚ್ಚರಿ ಮೂಡಿಸುತ್ತೇವೆ ಎಂದು ಹೇಳಿದ್ದರು.

ಆದರೆ, ನಾವು ನಮ್ಮ ಕಾರ್ಯವ್ಯಾಪ್ತಿಯನುಸಾರ ಆಗಸ್ಟ್‍ನಲ್ಲಿ ಲಸಿಕೆ ಕಂಡುಹಿಡಿಯುವ ಗುರಿ ಹೊಂದಿದ್ದೆವು. ಅದರಂತೆಯೇ ಪ್ರಗತಿ ಸಾಧಿಸಿದ್ದೇವೆ ಎಂದು ರಷ್ಯಾ ಅಧ್ಯಕ್ಷ ತಿಳಿಸಿದ್ದಾರೆ.

ವಿಶ್ವದಲ್ಲಿ ಪ್ರಸ್ತುತ ಕೋವಿಡ್ ಪೀಡಿತ ದೇಶಗಳಲ್ಲಿ 4ನೆ ಸ್ಥಾನದಲ್ಲಿರುವ ರಷ್ಯಾ ಲಸಿಕೆ ಕಂಡುಹಿಡಿಯುವ ನಿಟ್ಟಿನಲ್ಲಿ ಭಾರೀ ಯಶಸ್ಸು ಕಂಡಿದೆ ಎಂದು ಈಗಾಗಲೇ ವಿಶ್ವದ ಹಲವು ವಿಜ್ಞಾನಿಗಳು ಅಂದಾಜಿಸಿದ್ದಾರೆ.

Facebook Comments

Sri Raghav

Admin