26 ಟನ್ ತೂಕದ ಟ್ರಕ್ ಎಳೆದ ರಷ್ಯಾದ ಬಲಿಷ್ಠ ವ್ಯಕ್ತಿ..!

ಈ ಸುದ್ದಿಯನ್ನು ಶೇರ್ ಮಾಡಿ

TRUK PUULLಮಾನವ ಶಕ್ತಿ-ಸಾಮಥ್ರ್ಯ ಊಹೆಗೂ ನಿಲುಕುವುದಿಲ್ಲ. ಈ ಭೂಮಂಡಲದ ಅತ್ಯಂತ ಬಲಿಷ್ಠ ವ್ಯಕ್ತಿ ಎಂದೇ ಹೆಸರಾದ ರಷ್ಯಾದ ಎಲ್‍ಬ್ರುಸ್ ಮತ್ತೊಮ್ಮೆ ತಮ್ಮ ಅಗಾಧ ಬಲ ಪ್ರದರ್ಶಿಸಿದ್ದಾರೆ. ಈ ಬಲಭೀಮನ ಶಕ್ತಿ ಎಂಥದ್ದು..? ನೀವೇ ನೋಡಿ..!!

ರಷ್ಯಾದ ಎಲ್‍ಬ್ರುಸ್ ನಿಗ್‍ಮ್ಯಾಟುಲಿನ್ ಭೂಮಂಡಲದ ಅತ್ಯಂತ ಬಲಿಷ್ಠ ಪುರುಷ ಎಂಬ ಜಗದ್ವಿಖ್ಯಾತಿ ಪಡೆದಿದ್ದಾರೆ. ಇವರು ಮಾನವನಿಗೆ ಅಸಾಧ್ಯ ಎಂದೇ ಪರಿಗಣಿಸಲಾದ ಅಗಾಧ ಶಕ್ತಿ ಸಾಮಥ್ರ್ಯ ಪ್ರದರ್ಶಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 41 ಸೆಕೆಂಡ್‍ಗಳ ಕಾಲ 26 ಟನ್‍ಗಳಷ್ಟು ತೂಕದ ಬೃಹತ್ ಟ್ರಕ್‍ನನ್ನು ಎಳೆದು ಎಲ್ಲರನ್ನು ಚಕಿತಗೊಳಿಸಿದರು. ಇದು ರಷ್ಯಾದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಾಖಲೆಯೂ ಆಗಿದೆ ಎಂದು ಈ ಶಕ್ತಿ ಪ್ರದರ್ಶನದ ನಂತರ ಎಲ್‍ಬ್ರುಸ್ ಸುದ್ದಿಗಾರರಿಗೆ ತಿಳಿಸಿದರು.

ರಷ್ಯಾದಲ್ಲಿರುವ ಟರ್ಕಿಕ್ ಭಾಷೆ ಮಾತನಾಡುವ ಜನರಿಗಾಗಿ ನಡೆದ ಪ್ರಥಮ ರಾಷ್ಟ್ರೀಯ ಒಲಿಂಪಿಕ್ಸ್ ಕ್ರೀಡಾಕೂಟದ ಭಾಗವಾಗಿ ಈ ದಾಖಲೆ ಸೃಷ್ಟಿಯಾಯಿತು.
ಎಲ್‍ಬ್ರುಸ್ ನಿಗ್‍ಮಟುಲಿನ್ ರಷ್ಯಾದ ಅಥ್ಲೇಟ್ ಮತ್ತು ಜನಪ್ರಿಯ ವ್ಯಕ್ತಿ. ಪವರ್‍ಲಿಫ್ಟಿಂಗ್ ಮತ್ತು ಕುಸ್ತಿಯಲ್ಲಿ ಅಪಾರ ಪ್ರಾವೀಣ್ಯತೆ ಪಡೆದಿರುವ ಇವರು ತಮ್ಮ ಅಗಾಧ ಶಕ್ತಿ-ಸಾಮಥ್ರ್ಯ ಪ್ರದರ್ಶನಕ್ಕಾಗಿ ಹಲವಾರು ಪ್ರಶಸ್ತಿ-ಪುರಸ್ಕಾರಗಳನ್ನು ಗೆದ್ದಿದ್ದಾರೆ. ಈತ ರಷ್ಯಾದ ಹಕ್ರ್ಯೂಲಸ್ ಎಂದೇ ವಿಶ್ವವಿಖ್ಯಾತಿ ಪಡೆದಿದ್ದಾರೆ.

Facebook Comments