ಶಿವಣ್ಣನ ಅಭಿಮಾನಿಗಳಿಗೆ ಈ ವಾರ ‘ರುಸ್ತುಂ’  ಹಬ್ಬ

ಈ ಸುದ್ದಿಯನ್ನು ಶೇರ್ ಮಾಡಿ

ಬಹಳಷ್ಟು ಸದ್ದು ಮಾಡಿ ಈ ವಾರ ರಾಜ್ಯಾದ್ಯಂತ ಅದ್ಧೂರಿಯಾಗಿ ಬೆಳ್ಳಿ ಪರದೆ ಮೇಲೆ ಬರಲು ಸಜ್ಜಾಗಿ ನಿಂತಿರುವ ಚಿತ್ರವೇ ರುಸ್ತುಂ. ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಮತ್ತೊಮ್ಮೆ ಖಾಕಿ ಖದರ್‍ನಲ್ಲಿ ಮಿಂಚಲು ಸಿದ್ಧರಾಗಿದ್ದಾರೆ.

ಸಾಹಸ ನಿರ್ದೇಶಕ ರವಿವರ್ಮ ಈಗ ಸ್ಟಾರ್ ಚಿತ್ರದ ಮೂಲಕವೇ ನಿರ್ದೇಶಕರಾಗಿ ಚಿತ್ರರಂಗದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಸೆಂಚುರಿ ಸ್ಟಾರ್ ಶಿವರಾಜ್‍ಕುಮಾರ್, ಬಾಲಿವುಡ್ ನಟ ವಿವೇಕ್ ಒಬೆರಾಯ್ ಅಭಿನಯದ ರುಸ್ತುಂ ಮೂಲಕ ರವಿವರ್ಮ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ರುಸ್ತುಂ ಜಯಣ್ಣ ಪ್ರೊಡಕ್ಷನ್ ಬ್ಯಾನರ್‍ನಲ್ಲಿ ಜಯಣ್ಣ ಹಾಗೂ ಬೋಗೇಂದ್ರ ಅವರು ನಿರ್ಮಿಸಿದ್ದಾರೆ.

ಹಲವಾರು ಚಿತ್ರಗಳಿಗೆ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿರುವ ರವಿವರ್ಮ ಮೊದಲ ಬಾರಿಗೆ ಈ ಚಿತ್ರದ ನಿರ್ದೇಶಕರಾಗಿ ಆ್ಯಕ್ಷನ್-ಕಟ್ ಹೇಳಿದ್ದಾರೆ. ರವಿವರ್ಮ ಚಿತ್ರ ನಿರ್ದೇಶಕನಾಗಬೇಕೆಂದು ದಶಕದ ಹಿಂದೆಯೇ ನಿರ್ಧರಿಸಿದ್ದರು. ಅದಕ್ಕಾಗಿ ಒಂದು ಅಪರೂಪದ ಪೊಲೀಸ್ ಕಥೆಯನ್ನು ರೆಡಿ ಮಾಡಿಕೊಂಡು ಶಿವಣ್ಣ ಬಳಿ ಹೇಳಿದ್ದಾರೆ. ಶಿವಣ್ಣ ಗ್ರೀನ್ ಸಿಗ್ನಲ್ ಕೊಟ್ಟ ನಂತರ ನಿರ್ಮಾಪಕ ಜಯಣ್ಣ ಅವರನ್ನು ಒಪ್ಪಿಸಿ ಚಿತ್ರ ಆರಂಭಿಸಿದ್ದಾರೆ.

ಇದು ಹೊರ ರಾಜ್ಯ ಬಿಹಾರದಲ್ಲಿ ನಡೆಯುವ ಒಂದು ಐಎಎಸ್ ಆಫೀಸರ್ ಕುಟುಂಬದ ಕಥೆ. ಶಿವಣ್ಣ ಒಬ್ಬ ಐಎಎಸ್ ಆಫೀಸರ್ ರೋಲ್ ಮಾಡಿದ್ದಾರೆ. ವಿವೇಕ್ ಒಬೆರಾಯ್ ಶಿವಣ್ಣ ಆಫೋಸಿಟ್ ಆಗಿ ಕಾಣಿಸಿಕೊಂಡಿದ್ದಾರೆ. ಒಬ್ಬ ನಿರ್ದೇಶಕನಾಗಿ ನಾನು ಕೊನೆಯ ಹಂತದ ವರೆಗೆ ಕೆಲಸ ಮಾಡಿದ್ದೇನೆ, ಇಡೀ ಚಿತ್ರತಂಡದ ಪರಿಶ್ರಮದಿಂದ ನಮ್ಮ ಸಿನಿಮಾ ಬೇಗನೇ ಪೂರ್ಣವಾಗಿ ಬಿಡುಗಡೆಯಾಗಲು ಸಾಧ್ಯವಾಯಿತು ಎಂದು ನಿರ್ದೇಶಕ ರವಿವರ್ಮ ಅವರು ಹೇಳಿದ್ದಾರೆ.

ಈ ಚಿತ್ರದ ಕಥೆ ಪ್ರತಿಯೊಬ್ಬರಿಗೂ ರೀಚ್ ಆಗುತ್ತದೆ. ರುಸ್ತುಂ ಒಂದು ಕಂಪ್ಲೀಟ್ ಎಂಟರ್‍ಟೈನರ್ ಪ್ಯಾಕೇಜ್ ಇರುವ ಚಿತ್ರವಾಗಿದ್ದು, ಚಿತ್ರದ ಟ್ರೇಲರ್ ಕೂಡ ಈಗಾಗಲೇ ಎಲ್ಲಾ ವರ್ಗದ ವೀಕ್ಷಕರನ್ನೂ ಸೆಳೆಯತ್ತಿದೆ. ನಾನು ವಿವಿಧ ಭಾಷೆಗಳ ಜನರ ಜೊತೆ ಕೆಲಸ ಮಾಡಿದ್ದೇನೆ, ನನ್ನ ತಂದೆ ಕೂಡ ಒಬ್ಬ ಸಬ್‍ಇನ್ಸ್‍ಪೆಕ್ಟರ್ ಆಗಿದ್ದವರು,

ನನ್ನ ಕುಟುಂಬದ ಬಹುತೇಕರು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಾನು ಕೂಡ ಈ ಮೊದಲು ಒಬ್ಬ ಪೊಲೀಸ್ ಆಗಬೇಕೆಂದುಕೊಂಡಿದ್ದಾ. ಆದರೆ, ಸಿನಿಮಾ ಆಕರ್ಷಣೆ ಎನ್ನುವುದು ನನ್ನನ್ನು ಇಲ್ಲಿಗೆ ಕರೆತಂದಿತು ಎಂದು ನಿರ್ದೇಶಕರು ಹೇಳಿದ್ದಾರೆ. ಸೆಂಚುರಿ ಸ್ಟಾರ್ ಎಂದು ಕರೆಸಿಕೊಳ್ಳುವ ಡಾ. ಶಿವರಾಜ್ ಕುಮಾರ್ ಅವರ ಅಭಿನಯದಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ಶ್ರದ್ಧಾ ಶ್ರೀನಾಥ್, ರಚಿತಾ ರಾಮ್ ಹಾಗೂ ಮಯೂರಿ ಎಂಬ ಮೂವರು ಬೆಡಗಿಯರು ನಟಿಸಿದ್ದಾರೆ.

ಮತ್ತೊಮ್ಮೆಪೊಲೀಸ್ ಕ್ಯಾಪ್ ಆಗಿ ಕಾಣಿಸಿಕೊಂಡಿರುವ ನಟ ಶಿವಣ್ಣ ಚಿತ್ರದ ಬಗ್ಗೆ ಮಾತನಾಡುತ್ತ ಚಿತ್ರ ಲುಕ್‍ವೈಸ್ ವಿಭಿನ್ನವಾಗಿ ಮೂಡಿಬಂದಿದೆ. ಸುಮಾರು 6-7 ಪಿಲ್ಲರ್‍ಗಳ ಸುತ್ತ ನಡೆಯುವ ಕಥೆಯಿದು. ಚಿತ್ರದಲ್ಲಿ ಆ್ಯಕ್ಷನ್ ಜೊತೆಗೆ ಎಮೋಷನ್ ನನಗೆ ತುಂಬಾ ಕನೆಕ್ಟ್ ಆಗುತ್ತದೆ. ಚಿತ್ರದ ಮೂರು ಫೈಟ್ ಹಾಗೂ ಒಂದು ಚೇಸಿಂಗ್ ಭಾಗ ಬಹಳ ವಿಭಿನ್ನವಾಗಿ ಚಿತ್ರೀಕರಿಸಿದ್ದಾರೆ ನಿರ್ದೇಶಕರು.

ಚಿತ್ರದ ಪ್ರತಿಯೊಬ್ಬ ಕಲಾವಿದರೂ ಕೂಡ ಕಥೆಗೆ ಪೂರಕವಾಗಿ ಸಾಗುತ್ತಾರೆ. ಬಹುತೇಕ ಭಾಗದ ಕಥೆ ನಡೆಯುವುದು ಬಿಹಾರದಲ್ಲೇ ಆಗಿರುವುದರಿಂದ ಅಲ್ಲಿನ ಭಾಷೆ ಚಿತ್ರದಲ್ಲಿ ಕಾಣುತ್ತದೆ. ಅದಕ್ಕಾಗಿ ಇಂಗ್ಲಿಷ್ ಸಬ್‍ಟೈಟಲ್‍ಅನ್ನು ಕೂಡ ನಿರ್ದೇಶಕರು ಹಾಕಿದ್ದಾರೆ. ಖಂಡಿತ ಈ ಚಿತ್ರಕ್ಕೆ ಒಂದು ದೊಡ್ಡ ಮಟ್ಟದ ಯಶಸ್ಸು ಸಿಗುತ್ತದೆ ಎಂದು ಹೇಳಿದರು.

ಉಳಿದ ಕಲಾವಿದರಾದ ಅರ್ಜುನ್‍ಗೌಡ, ಬೇಬಿ ಲೈಲಾ, ತಮಿಳುನಾಡಿನ ಹರೀಶ್ ಉತ್ತಮನ್, ಸಿದ್ಲಿಂಗು ಶ್ರೀಧರ್ ತಮ್ಮ ತಮ್ಮ ಪಾತ್ರಗಳ ಬಗ್ಗೆ ಹೇಳಿಕೊಂಡರು.

ಈ ಚಿತ್ರಕ್ಕೆ ಮಹೀನ್‍ಸಿಂಹ ಛಾಯಾಗ್ರಹಣ ಮಾಡಿದ್ದು, ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು. ಅದೇ ರೀತಿ ಚಿತ್ರಕ್ಕೆ ಸಂಗೀತ ನೀಡಿರುವ ಅನೂಪ್ ಸೀಳಿನ್ ಅವರ ವಿಶೇಷವಾದ ಹಾಡುಗಳು ಈ ಚಿತ್ರದಲ್ಲಿ ಕಾಣಸಿಗಲಿವೆ. ಸ್ಟಾರ್ ನಟನ ಚಿತ್ರಕ್ಕೆ ಸಂಗೀತ ನೀಡಿರುವುದು ನನಗೆ ಹೆಮ್ಮೆ ತಂದಿದೆ ಎಂದು ಹೇಳಿಕೊಂಡರು. ದೀಪು ಎಸ್.ಕುಮಾರ್ ಸಂಕಲನವಿರುವ ಈ ಚಿತ್ರ ಬಹಳಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದ್ದು, 200 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರುಸ್ತುಂ ತನ್ನ ಖದರ್ ತೋರಿಸಲು ಪರದೆಯ ಮೇಲೆ ಬರುತ್ತಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ