ರಷ್ಯಾದಿಂದ ಎಸ್-400 ಕ್ಷಿಪಣಿ ಖರೀದಿಗೆ ಮುಂದಾದ ಭಾರತಕ್ಕೆ ಮತ್ತೊಮ್ಮೆ ದೊಡ್ಡಣ್ಣ ವಾರ್ನಿಂಗ್..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಜು.18- ಭಾರತದೊಂದಿಗೆ ಅಮೆರಿಕ ಉತ್ತಮ ರಕ್ಷಣಾ ಬಾಂಧವ್ಯ ಬಲವರ್ಧನೆಯನ್ನು ಬಯಸುತ್ತದೆ ಎಂದು ಪುನರುಚ್ಚರಿಸಿರುವ ಅಮೆರಿಕ, ರಷ್ಯಾದಿಂದ ಅತ್ಯಂತ ಪ್ರಬಲ ಎಸ್-400 ಕ್ಷಿಪಣಿ ಖರೀದಿಸಲು ಒಪ್ಪಂದ ಮಾಡಿಕೊಂಡಿರುವ ಭಾರತದ ವಿರುದ್ಧ ಮತ್ತೊಮ್ಮೆ ಗರಂ ಆಗಿದೆ.

ಭಾರತ ಸೇರಿದಂತೆ ಯಾವುದೇ ದೇಶ ರಷ್ಯಾದಿಂದ ಎಸ್-400 ಕ್ಷಿಪಣಿ ಖರೀದಿಸುವುದಕ್ಕೆ ತಾನು ತೀವ್ರ ವಿರೋಧ ವ್ಯಕ್ತಪಡಿಸುವುದಾಗಿ ಅಮೆರಿಕ ರಕ್ಷಣಾ ಇಲಾಖೆ-ಪೆಂಟಗನ್ ಹೇಳಿದೆ.

ವಾಷಿಂಗ್ಟನ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪೆಂಟಗನ್‍ನ ರಕ್ಷಣಾ ನೀತಿ ಕುರಿತ ಉಪ ಅಧೀನ ಕಾರ್ಯದರ್ಶಿ ಡೇವಿಡ್ ಜೆ.ಟ್ರಷ್‍ಟಿಂಗ್‍ಟನ್ ಭಾರತದೊಂದಿಗೆ ಅಮೆರಿಕ ಯಾವಾಗಲೂ ಉತ್ತಮ ರಕ್ಷಣಾ ಬಾಂಧವ್ಯ ಹೊಂದಲು ಬಯಸುತ್ತದೆ. ಆದರೆ, ಅದು ರಷ್ಯಾದಿಂದ ಅತ್ಯಂತ ಸುಧಾರಿತ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಹೊಂದಲು ಒಡಂಬಡಿಕೆ ಮಾಡಿಕೊಂಡಿರುವುದು ವಾಷಿಂಗ್ಟನ್‍ಗೆ ಅಸಮಾಧಾನವಾಗಿದ್ದು, ಈ ಒಪ್ಪಂದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುವುದಾಗಿ ತಿಳಿಸಿದ್ದಾರೆ.

ಭಾರತ ಅಕ್ಟೋಬರ್‍ನಲ್ಲಿ ರಷ್ಯಾದೊಂದಿಗೆ 40,000 ಕೋಟಿ ರೂ. ವೆಚ್ಚದ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಹೊಂದಲು ಒಪ್ಪಂದಕ್ಕೆ ಸಹಿ ಹಾಕಿತ್ತು.
ಅಮೆರಿಕದ ಅತ್ಯಂತ ಶಕ್ತಿಶಾಲಿ ಸಮರ ವಿಮಾನಗಳನ್ನು ಹೊಡೆದುರುಳಿಸುವ ಸಾಮಥ್ರ್ಯವನ್ನು ಎಸ್-400 ಕ್ಷಿಪಣಿಗಳು ಬಂದಿರುವುದೇ ಅಮೆರಿಕದ ಈ ವಿರೋಧಕ್ಕೆ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ.

Facebook Comments