ವಿದೇಶಾಂಗ ಸಚಿವ ಜೈಶಂಕರ್ ಕುವೈತ್‍ ಭೇಟಿ, ಮಹತ್ವದ ಮಾತುಕತೆ

ಈ ಸುದ್ದಿಯನ್ನು ಶೇರ್ ಮಾಡಿ

ಕುವೈತ್,ಜೂ.10-ತೈಲ ಸಂಪತ್ಬರಿತ ರಾಷ್ಟ್ರ ಕುವೈತ್‍ಗೆ ಭೇಟಿ ನೀಡಿರುವ ವಿದೇಶಾಂಗ ಸಚಿವ ಜೈಶಂಕರ್ ಅವರು ಅಲ್ಲಿನ ವಿದೇಶಾಂಗ ಸಚಿವರೊಂದಿಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಮಾತ್ರವಲ್ಲ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವೈಯಕ್ತಿಕ ಪತ್ರವನ್ನು ಅಲ್ಲಿನ ಮುಖ್ಯಸ್ಥರಿಗೆ ತಲುಪಿಸಲಿದ್ದಾರೆ.

ಕುವೈತ್ ವಿದೇಶಾಂಗ ಸಚಿವ ಶೇಕ್ ಆಹಮ್ಮದ್ ನಾಸೀರ್ ಅಲ್ ಮಹಮ್ಮದ್ ಅಲ್ ಸಾಬ್ ಆಮಂತ್ರಣದ ಮೇರೆಗೆ ಜೈಶಂಕರ್ ಅಲ್ಲಿಗೆ ತೆರಳಿದ್ದಾರೆ.

ಇದೇ ಮೊದಲ ಭಾರಿಗೆ ವಿದೇಶಾಂಗ ಸಚಿವರು ಕುವೈತ್ ಪ್ರವಾಸ ಕೈಗೊಂಡಿದ್ದು ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದೇವೆ ಎಂದು ಕುವೈತ್‍ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಟ್ವಿಟ್ ಮಾಡಿದೆ.

ಕುವೈತ್ ವಿದೇಶಾಂಗ ಸಚಿವರು ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಇಂಧನ, ವ್ಯಾಪಾರ, ಬಂಡವಾಳ, ಮಾಹಿತಿ ತಂತ್ರಜ್ಞಾನ, ಮಾನವ ಸಂಪನ್ಮೂಲ ಬಗ್ಗೆ ಜಂಟಿ ಸಚಿವಾಲಯದ ಆಯೋಗ ರಚನೆಗೆ ಸಮ್ಮತಿಸಲಾಗಿತ್ತು.

ಆಯೋಗ ರಚನೆ ತೀರ್ಮಾನದ ಬೆನ್ನಲ್ಲೇ ಕುವೈತ್‍ಗೆ ತೆರಳಿರುವ ಜೈಶಂಕರ್ ಅವರು ಅಲ್ಲಿನ ರಾಜತಾಂತ್ರಿಕ ಮುಖಂಡರೊಂದಿಗೆ ಮಹತ್ವದ ಸಭೆ ನಡೆಸುವುದರ ಜತೆಗೆ ಕುವೈತ್‍ನಲ್ಲಿರುವ ಭಾರತೀಯರನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ.

ಕುವೈತ್ ಶೇಕ್ ನವಾಫ್ ಅಲ್ ಅಹಮ್ಮದ್ ಅವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಳುಹಿಸಿರುವ ವೈಯಕ್ತಿಕ ಪತ್ರವನ್ನು ಜೈಶಂಕರ್ ಅವರು ನೀಡಲಿದ್ದಾರೆ ಎಂದು ತಿಳಿದುಬಂದಿದೆ.

Facebook Comments

Sri Raghav

Admin