ನಟ, ನಿರ್ದೇಶಕ ಎಸ್.ನಾರಾಯಣ್‍ಗೆ 57ನೇ ಹುಟ್ಟುಹಬ್ಬದ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.5- ಚಂದನವನದ ನಟ, ನಿರ್ದೇಶಕ ಎಸ್.ನಾರಾಯಣ್‍ಗೆ ಇಂದು 57ರ ಸಂಭ್ರಮವಾದರೂ ಕೊರೊನಾ ಹಿನ್ನೆಲೆಯಲ್ಲಿ ಅವರು ತಮ್ಮ ಜನ್ಮದಿನಾಚರಣೆಯನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.

ಚೈತ್ರದ ಪ್ರೇಮಾಂಜಲಿ ಚಿತ್ರದ ಮೂಲಕ ನಿರ್ದೇಶಕರಾದ ಎಸ್.ನಾರಾಯಣ್ ಕನ್ನಡ ಚಿತ್ರರಂಗದ ಸ್ಟಾರ್ ನಟರಾದ ಡಾ.ರಾಜ್‍ಕುಮಾರ್, ಡಾ.ವಿಷ್ಣುವರ್ಧನ್, ಡಾ.ಅಂಬರೀಷ್, ರವಿಚಂದ್ರನ್, ಗಣೇಶ್, ದುನಿಯಾ ವಿಜಯ್, ಶ್ರೀಮುರಳಿ, ವಿಜಯರಾಘವೇಂದ್ರ ಮುಂತಾದ ನಟರುಗಳ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಸಿಂಗೀತಂ ಶ್ರೀನಿವಾಸ್ ನಂತರ ಅಣ್ಣಾವ್ರು ಹಾಗೂ ಅವರ ಮಕ್ಕಳಾದ ಶಿವರಾಜ್‍ಕುಮಾರ್, ರಾಘವೇಂದ್ರರಾಜ್‍ಕುಮಾರ್, ಪುನೀತ್‍ರಾಜ್‍ಕುಮಾರ್‍ರ ಚಿತ್ರಗಳನ್ನು ನಿರ್ದೇಶಿಸಿದ ಎರಡನೇ ನಿರ್ದೇಶಕರೆಂಬ ಖ್ಯಾತಿಗೆ ಭಾಜನರಾಗಿದ್ದಾರೆ.

ಓಹೋ ಚಿತ್ರದ ಮೂಲಕ ನಾಯಕನಟರಾದ ಎಸ್.ನಾರಾಯಣ್ ಅಂಜಲಿ ಗೀತಾಂಜಲಿ,ಕುರಿಗಳು ಸಾರ್ ಕುರಿಗಳು, ಕೋತಿಗಳು ಸಾರ್ ಕೋತಿಗಳು ಮುಂತಾದ ಚಿತ್ರಗಳಲ್ಲಿ ನಟಿಸಿ ತಮ್ಮ ಅಭಿನಯ ಕೌಶಲ್ಯವನ್ನು ಮೆರೆದಿರುವ ಅವರು, ಹಲವು ಚಿತ್ರಗಳ ನಿರ್ಮಾಣದ ಜೊತೆಗೆ ಗೀತೆ, ಸಂಗೀತವನ್ನು ನೀಡುವ ಮೂಲಕ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.

ಎಸ್.ನಾರಾಯಣ್ ನಿರ್ದೇಶನದ ಚೈತ್ರದ ಪ್ರೇಮಾಂಜಲಿ, ಶಬ್ದವೇದಿ, ಸೂರ್ಯವಂಶ, ಚೆಲುವಿನ ಚಿತ್ತಾರ, ವೀರಪ್ಪ ನಾಯಕ, ಚಂದ್ರಚಕೋರಿ, ಗಲಾಟೆ ಅಳಿಯಂದ್ರು ಸೇರಿದಂತೆ ಹಲವು ಚಿತ್ರಗಳು ಅವರಿಗೆ ಹೆಸರು ತಂದುಕೊಟ್ಟಿವೆ.

ಎಸ್.ನಾರಾಯಣ್‍ರ ಮಕ್ಕಳಾದ ಪಂಕಜ್ ಹಾಗೂ ಪವನ್ ಕೂಡ ಚಿತ್ರರಂಗದೊಂದಿಗೆ ಗುರುತಿಸಿಕೊಂಡಿದ್ದಾರೆ. ಕಲಾಸಾಮ್ರಾಟ್‍ನ ಹುಟ್ಟುಹಬ್ಬಕ್ಕೆÀ ಚಿತ್ರರಂಗದ ಹಲವು ನಟರು, ತಂತ್ರಜ್ಞರು ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

Facebook Comments