ಎಸ್.ನಾರಾಯಣ್‍ಗೆ ಗೌರವ ಡಾಕ್ಟರೇಟ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.19- ಕಲಾ ಸಾಮ್ರಾಟ, ನಟ, ನಿರ್ದೇಶಕ ಎಸ್.ನಾರಾಯಣ್ ಅವರಿಗೆ ಯೂನಿವರ್ಸಲ್ ಡೆವಲಪ್‍ಮೆಂಟ್ ಕೌನ್ಸಿಲ್ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿದೆ. ಕನ್ನಡ ಚಿತ್ರರಂಗದಲ್ಲಿ ನಾರಾಯಣ್ ಅವರ ಸೇವೆಯನ್ನು ಗುರುತಿಸಿರುವ  ಯೂನಿವರ್ಸ್‍ಲ್ ಡೆವಲಪ್‍ಮೆಂಟ್ ಕೌನ್ಸಿಲ್ ಗೌರವ ಡಾಕ್ಟರೇಟನ್ನು ಘೋಷಿಸಿದ್ದು, ಹೊಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಿರ್ದೇಶಕರಾಗಿ, ನಟರಾಗಿ, ನಿರ್ಮಾಪಕರಾಗಿ ಎಸ್. ನಾರಾಯಣ್ ಚಿತ್ರರಂಗದಲ್ಲಿ ಅಗ್ರಮಾನ್ಯ ಸೇವೆ ಸಲ್ಲಿಸಿದ್ದಾರೆ. ಹಳೆ ಪೀಳಿಗೆ ಹಾಗೂ ಹೊಸ ಪೀಳಿಗೆ ಎರಡರ ಜತೆಯಲ್ಲೂ ಕೆಲಸ ಮಾಡುವ ಮೂಲಕ ಹಲವಾರು ಹಿಟ್ ಚಿತ್ರಗಳನ್ನು ನೀಡಿ ಪ್ರತಿಭಾನ್ವಿತ ನಿರ್ದೇಶಕರು ಎನಿಸಿಕೊಂಡಿದ್ದಾರೆ.

ನಟಸಾರ್ವಭೌಮ ಡಾ.ರಾಜ್‍ಕುಮಾರ್ ನಟನೆಯ ಶಬ್ಧವೇದಿ, ಸಾಹಸಿಂಹ ಡಾ.ವಿಷ್ಣುವರ್ಧನ್ ಅವರ ಸೂರ್ಯವಂಶ, ರವಿಚಂದ್ರನ್ ಅವರ ರವಿಮಾಮ ಸೇರಿದಂತೆ ಹಲವಾರು ಖ್ಯಾತ ನಟ-ನಟಿಯರ ಅನೇಕ ಚಿತ್ರಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದಾರೆ.

ರಘುವೀರ್ ನಟನೆಯ ಚೈತದ ಪ್ರೇಮಾಂಜಲಿ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಎಸ್.ನಾರಾಯಣ್ ಅವರು ಹಲವಾರು ಚಿತ್ರಗಳಲ್ಲಿ ನಟಿಸಿದ್ದು, 49ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇತ್ತೀಚೆಗೆ ಕಿರುತೆರೆಯಲ್ಲೂ ಕಾಣಿಸಿಕೊಳ್ಳುತ್ತಿದ್ದ ನಾರಾಯಣ್ ಅವರು ಮತ್ತೆ ಹಿರಿ ತೆರೆಗೂ ಮರಳಿದ್ದಾರೆ.

Facebook Comments