ಕಿರುತೆರೆಗೆ ಎಂಟ್ರಿ ಕೊಟ್ಟ ಕಲಾ ಸಾಮ್ರಾಟ್ ಎಸ್.ನಾರಾಯಣ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.13-ಪಾರ್ವತಿ, ಅಂಬಿಕಾ, ದುರ್ಗ ಧಾರಾವಾಹಿಗಳನ್ನು ನಿರ್ದೇಶನ ಮಾಡಿ ಮನೆ ಮಾತಾಗಿದ್ದ ಎಸ್.ನಾರಾಯಣ್ ಬಹಳ ವರ್ಷಗಳ ನಂತರ ಮತ್ತೆ ಕಿರುತೆರೆಗೆ ಆಗಮಿಸಲಿದ್ದಾರೆ.  ಈ ಹಿಂದೆ ಕಿರುತೆರೆ ಧಾರವಾಹಿಗಳನ್ನು ನಿರ್ದೇಶನ ಮಾಡಿ ಜನರ ಮನಸ್ಸು ಗೆದ್ದ ನಾರಾಯಣ್ ಚಿತ್ರರಂಗಕ್ಕೆ ಪಾದಾರ್ಪಾಣೆ ಮಾಡಿ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಪ್ರಸಿದ್ದಿಯಾಗಿದ್ದು, ಈಗ ಮತ್ತೆ ಪಾರು ಧಾರವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರತಿ ಹಂತದಲ್ಲೂ ವಿನೂತನ ಸಾಹಸಕ್ಕೆ ಕೈ ಹಾಕಿ ವೀಕ್ಷಕರನ್ನು ಮನರಂಜಿಸುವ ಜೀಕನ್ನಡ ವಾಹಿನಿಯಲ್ಲಿ ಈಗ ಪಾರು ಧಾರಾವಾಹಿಯಲ್ಲಿ ಆರಂಭವಾಗಿರುವ ಹೊಸ ಕಥೆ ಎಳೆಯಲ್ಲಿ ವಿಭಿನ್ನ ಪಾತ್ರವೊಂದಕ್ಕೆ ಎಸ್.ನಾರಾಯಣ್ ಬಣ್ಣ ಹಚ್ಚುತ್ತಿದ್ದಾರೆ.  ಈಗಾಗಲೇ ಪಾರು ಧಾರಾವಾಹಿ ಅಪಾರ ಜನಮೆಚ್ಚುಗೆ ಪಡೆದಿದ್ದು, ಅರಸನಕೋಟೆ ಅಖಿಲಾಂಡೇಶ್ವರಿಯ ದಿಟ್ಟ ಮಾತುಗಳು, ಪಾರುವಿನ ಮುಗ್ಧತೆ, ಆದಿತ್ಯನ ಶಿಸ್ತು, ಪ್ರೀತಮ್ ಮಾಡುವ ತರಲೆ ಕನ್ನಡಿಗರ ಮನೆ-ಮನಗಳನ್ನು ಆವರಿಸಿದೆ.

ಅಖಿಲಾಂಡೇಶ್ವರಿ ಪಾತ್ರ ನಿರ್ವಹಿಸುತ್ತಿರುವ ವಿನಯಾ ಪ್ರಸಾದ್‍ರಿಂದ ಹಿಡಿದು ನಟರ ಸ್ಟಾರ್ ಕಾಸ್ಟಿಂಗ್ ಹೊಂದಿರೋ ಪಾರು ಧಾರಾವಾಹಿಗೆ ವಿಶಿಷ್ಟ ಪಾತ್ರವೊಂದರ ಮೂಲಕ ಎಸ್ ನಾರಾಯಣ್ ಆಗಮಿಸುತ್ತಿರುವುದು ವೀಕ್ಷಕರಲ್ಲಿ ಮತ್ತಷ್ಟು ಕುತೂಹಲ ಸೃಷ್ಟಿಸಿದೆ.  ಅಖಿಲಾಂಡೇಶ್ವರಿ ತನ್ನ ಇಬ್ಬರು ಮಕ್ಕಳ ಮದುವೆಗೆ ಅದ್ದೂರಿಯಾಗಿ ತಯಾರಿ ನಡೆಸಿದ್ದರೆ, ಪ್ರೀತಮ್ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಸಜ್ಜಾಗಿದ್ದರೆ, ಅಣ್ಣ ಆದಿತ್ಯ ಮತ್ತು ಪಾರುವಿನ ಸಹಾಯದಿಂದ ಅಮ್ಮನ ಮನವೊಲಿಸಿ ಪ್ರೀತಿಯನ್ನು ಗೆಲ್ಲಲು ನಿಂತಿದ್ದಾನೆ.

ಆದಿ-ಪಾರು ಅಖಿಲಾಂಡೇಶ್ವರಿಯ ಒಪ್ಪುಗೆ ಪಡೆದು ಪ್ರೀತುವಿನ ಪ್ರೀತಿಯನ್ನ ಉಳಿಸ್ತಾರಾ? ಆ ಪ್ರೀತಿಯನ್ನ ಉಳಿಸಲು ಅವರು ಯಾವೆಲ್ಲ ಸವಾಲುಗಳನ್ನು ಎದುರಿಸಬೇಕು ಎನ್ನುವುದು ವೀಕ್ಷಕರಲ್ಲಿ ಕುತೂಹಲ ಸೃಷ್ಟಿಸಿದೆ.  ಈ ಹಂತದಲ್ಲಿ ಕನ್ನಡಿಗರಿಗೆ ಹಲವಾರು ಉತ್ತಮ ಧಾರಾವಾಹಿ ಹಾಗೂ ಚಿತ್ರಗಳನ್ನು ನೀಡಿರುವ ನಟ, ನಿರ್ದೇಶಕ ಎಸ್.ನಾರಾಯಣ್ ಮುಖ್ಯಭೂಮಿಕೆಯನ್ನು ನಿಭಾಯಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಅವರ ಪಾತ್ರದ ಪ್ರಾಮುಖ್ಯತೆ ಏನು? ಎನ್ನುವಂತಹ ಪ್ರಶ್ನೆಗಳು ಕುತೂಹಲ ಹುಟ್ಟಿಸಿವೆ.

ಈ ಎಲ್ಲಾ ಪ್ರಶ್ನೆಗಳಿಗೂ ಪಾರು ಧಾರಾಹಿಯ ಪ್ರತಿಯೊಂದು ಸಂಚಿಕೆಗಳೂ ಉತ್ತರ ನೀಡಲಿವೆ. ಪಾರುಧಾರಾವಾಹಿ ಜೀಕನ್ನಡ ವಾಹಿನಿಯಲ್ಲಿ ಸೋಮವಾರದಿಂದ – ಶುಕ್ರವಾರ ರಾತ್ರಿ 9:30ಕ್ಕೆ ಪ್ರಸಾರವಾಗುತ್ತಿದೆ.

Facebook Comments