“ಚಾಮುಂಡಿಬೆಟ್ಟದ ತಪ್ಪಲಿಗೆ ಬರ್ತೀನಿ” : ಎಚ್.ವಿಶ್ವನಾಥ್ ಸವಾಲ್ ಸ್ವೀಕರಿಸಿದ ಸಾ.ರಾ.ಮಹೇಶ್

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಅ.16-ಶಾಸಕ ಎಚ್.ವಿಶ್ವನಾಥ್ ಹಾಕಿರುವ ಬಹಿರಂಗ ಸವಾಲನ್ನು ನಾನು ಒಪ್ಪಿಕೊಂಡಿದ್ದೇನೆ. ನಾನು ನಾಳೆ ಬೆಳಿಗ್ಗೆ 9 ಗಂಟೆಗೆ ಚಾಮುಂಡಿಬೆಟ್ಟದ ತಪ್ಪಲಿಗೆ ಬರುತ್ತೇನೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ಯಾವುದೇ ಆಮಿಷಗಳಿಗೆ ಬಲಿಯಾಗಿಲ್ಲ, ಯಾರಿಂದಲೂ ಹಣ ಪಡೆದಿಲ್ಲ ಎಂದು ವಿಶ್ವನಾಥ್ ಅವರು ನಾಳೆ ಬಹಿರಂಗವಾಗಿ ಹೇಳಲಿ. ಆಗ ನಾನು ಸಾರ್ವಜನಿಕರಲ್ಲಿ ಬೇಷರತ್ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದರು.

ವಿಶ್ವನಾಥ್ ಅವರು ನಿನ್ನೆ ತಮ್ಮನ್ನು ಕೊಂಡುಕೊಂಡವರನ್ನು ಕರೆತರುವಂತೆ ಹೇಳಿದ್ದಾರೆ. ಆದರೆ ಅವರು ಬಿಜೆಪಿಗೆ ಮಾರಾಟವಾಗಿರುವುದು ಜಗಜ್ಜಾಹೀರವಾಗಿದೆ. ಹಾಗಾಗಿ ನಾನು ಯಾರನ್ನೂ ಕರೆದುಕೊಂಡು ಹೋಗುವ ಅಗತ್ಯವಿಲ್ಲ. ಹಣಪಡೆದಿಲ್ಲ, ಆಮಿಷಗಳಿಗೆ ಬಲಿಯಾಗಿಲ್ಲ ಎಂದು ನಾಳೆ ಅವರು ಹೇಳಿಬಿಡಲಿ ಸಾಕು ಎಂದು ಸಾ.ರಾ.ಮಹೇಶ್ ತಿಳಿಸಿದರು. ವಿಶ್ವನಾಥ್ ಅವರು ಹಿಂದೆ ನನ್ನ ಬಳಿ ಹಣ ಕೇಳಿದ್ದರು. ಆಗ ನಾನು ಪ್ರತಿ ತಿಂಗಳು ನೀಡುತ್ತೇನೆ ಎಂದು ಹೇಳಿದ್ದೆ. ಅದರ ಬಗ್ಗೆ ದಾಖಲಾತಿಯನ್ನು ಒದಗಿಸುತ್ತೇನೆ ಎಂದು ಹೇಳಿದರು.

ಇಷ್ಟೆ ಅಲ್ಲ ವಿಶ್ವನಾಥ್ ಅವರು ಎಚ್.ಡಿ.ಕುಮಾರಸ್ವಾಮಿಯವರು ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯ ಮಂತ್ರಿಯಾಗಿದ್ದಾಗ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದನ್ನೆಲ್ಲ ನಾಳೆ ನಾನು ಬಹಿರಂಗಪಡಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

Facebook Comments