“ವಿಶ್ವನಾಥ್ ಒಬ್ಬ ಅತೃಪ್ತ ಪ್ರೇತಾತ್ಮ” : ಸಾ.ರಾ.ಮಹೇಶ್

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಸೆ.23-ವಿಶ್ವನಾಥ್ ಅತೃಪ್ತ ಪ್ರೇತಾತ್ಮ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಟೀಕಿಸಿದ್ದಾರೆ. ವಿಶ್ವನಾಥ್ ನಿನ್ನೆ ಸಾ.ರಾ.ಮಹೇಶ್ ವಿರುದ್ಧ ಕೆಲ ಆರೋಪ ಮಾಡಿದ ಹಿನ್ನೆಲೆಯಲ್ಲಿ ಇಂದು ಅವರು ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ರೀತಿ ಹೇಳಿಕೆ ನೀಡಿದ್ದಾರೆ. ವಿಶ್ವನಾಥ್ ಅವರು ತಾವು ಮಾಡಿದ ತಪ್ಪನ್ನು ಬೇರೆಯವರ ಮೇಲೆ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ವೈಯಕ್ತಿಕವಾಗಿ ನನ್ನ ವಿರುದ್ಧ ತೇಜೋವಧೆ ಮಾಡುತ್ತಿದ್ದಾರೆ. ಈ ಬಗ್ಗೆ ಬಹಿರಂಗ ಕ್ಷಮೆ ಕೇಳಬೇಕು ಎಂದರು.

ತಮ್ಮ ತಪ್ಪಿದ್ದರೆ ತಾವು ರಾಜಕೀಯ ನಿವೃತ್ತಿ ಹೊಂದುತ್ತೇವೆ. ನಾನು ಶ್ರದ್ಧೆ ಹಾಗೂ ಕರ್ತವ್ಯಕ್ಕೆ ಬದ್ಧರಾಗಿ ಕೆಲಸ ಮಾಡುವುದಾಗಿ ಪ್ರಮಾಣ ಮಾಡಿದ್ದೆ. ಅದೇ ರೀತಿ ವಿಶ್ವನಾಥ್ ಸಹ ಪ್ರಮಾಣ ಮಾಡಿದ್ದರು ಎಂದರು. ವಿಶ್ವನಾಥ್ ಬಾಯ್ಬಿಟ್ಟರೆ ಸುಳ್ಳೇ ಹೇಳುತ್ತಾರೆ. ಅವರ ಬಗ್ಗೆ ಎಲ್ಲರಿಗೂ ತಿಳಿದಿದೆ ಎಂದ ಅವರು, ವಿಶ್ವನಾಥ್‍ರವರು 25 ಲಕ್ಷ ರೂ. ದುಡ್ಡು ಪಡೆದಿದ್ದೇನೆ ಎಂದು ಹೇಳಿ.

ವರ್ಗಾವಣೆ ಮಾಡಿಕೊಡುವಂತೆ ನನ್ನನ್ನು ಕೇಳಿದ್ದರು. ಅದನ್ನು ನಾನು ಮಾಡಿಕೊಡಲಿಲ್ಲ.  ಹಾಗಾಗಿ ವಿಶ್ವನಾಥ್ ನನ್ನ ವಿರುದ್ದ ಹೀಗೆ ಮಾತನಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ನನ್ನ ರಾಜಕೀಯ ಇತಿಹಾಸದಲ್ಲಿ ಯಾರ ಬಗ್ಗೆಯೂ ನಾನು ವೈಯಕ್ತಿಕ ಟೀಕೆ ಮಾಡಿಲ್ಲ. ಆದರೆ ವಿಶ್ವನಾಥ್ ಅವರು ಕಾಂಗ್ರೆಸ್‍ನಿಂದ ತಿರಸ್ಕøತರಾದ ಮೇಲೆ ನಮ್ಮ ಪಕ್ಷಕ್ಕೆ ಕರೆತಂದೆ. ಆದರೆ ಅವರು ಅತೃಪ್ತ ಪ್ರೇತಾತ್ಮ ನನ್ನ ವಿರುದ್ಧ ಸುದ್ದಿಗೋಷ್ಠಿ ನಡೆಸಿ ಈ ರೀತಿ ಆರೋಪ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು.

ಸಂವಿಧಾನದ ಬಗ್ಗೆ ಬದ್ದತೆ, ಶ್ರದ್ದೆ ನಿಮಗೆಲ್ಲಿದೆ. ಜನ ನೀರಿನಲ್ಲಿ ಮುಳುಗುವಾಗ ಎಲ್ಲಿ ಹೋಗಿದ್ದಿರಿ ಎಂದು ಪ್ರಶ್ನಿಸಿದರು. ಬನ್ನಿ ಚಾಮುಂಡಿ ಬೆಟ್ಟದಲ್ಲಿ ಪ್ರಮಾಣ ಮಾಡಿ ಎಂದು ವಿಶ್ವನಾಥ್‍ಗೆ ಸವಾಲು ಹಾಕಿದರು. ನೀವು ಬ್ಲೂ ಬಾಯ್ ಇದ್ದಂತೆ. ನೀವು ಯಾವ ಹಿರೋಯಿನ್ ಜೊತೆ ಮಾತನಾಡಿದ್ದೀರ ಎಂಬುದು ಗೊತ್ತಿದೆ. ನೀವು ಚಳಿಗಾಲದಲ್ಲಿ ಒಂದು ಗೂಡು, ಮಳೆಗಾಲದಲ್ಲಿ ಒಂದು ಗೂಡು, ಬೇಸಿಗೆಯಲ್ಲಿ ಒಂದು ಗೂಡಿನಲ್ಲಿ ಇರುತ್ತೀರ. ಈ ರೀತಿಯ ಹಲವು ಸಾಧನೆಗಳು ನಿಮ್ಮದಿವೆ. ಅದನ್ನೆಲ್ಲ ಹೇಳೋಣವೇ ಎಂದು ಸಾ.ರಾ.ಮಹೇಶ್ ಪ್ರಶ್ನಿಸಿದರು.

ಇದೇ ಸಂದರ್ಭದಲ್ಲಿ ಸಾ.ರಾ.ಮಹೇಶ್ ಒಂದು ವಿಡಿಯೋ ಪ್ರದರ್ಶಿಸಿ ನಿಮ್ಮ ಬ್ಲೂ ಫಿಲ್ಮ್ ವಿಡಿಯೋ ಇದು ಎಂದರು. ಕೋತಿ ಮೊಸರನ್ನು ತಿಂದು ಮೇಕೆ ಬಾಯಿಗೆ ಒರೆಸಲು ಹೋಗ್ತಿರಲ್ಲಾ ಎಂದು ವ್ಯಂಗ್ಯವಾಡಿದರು. ನಿಮಗಿಂತ ಹೆಚ್ಚಾಗಿ ನಾನು ಏಕವಚನದಲ್ಲಿ ಮಾತನಾಡಬಹುದು. ಆದರೆ ನನಗೆ ನಮ್ಮ ತಂದೆ ಸಂಸ್ಕಾರ ಕಲಿಸಿದ್ದಾರೆ. ನೀವು ಹಿರಿಯರು ಎಂಬ ಕಾರಣಕ್ಕೆ ನಾನು ಏಕವಚನದಲ್ಲಿ ಮಾತನಾಡುತ್ತಿಲ್ಲ. ನಾನು ನಿಮ್ಮಷ್ಟು ಕೀಳುಮಟ್ಟಕ್ಕೆ ಇಳಿದಿಲ್ಲ ಎಂದು ಹೇಳಿದರು.

Facebook Comments

Sri Raghav

Admin