“ಮೈಸೂರು ಮೇಯರ್ ಗೊಂದಲಕ್ಕೆ ಸಿದ್ದರಾಮಯ್ಯನವರೇ ನೇರ ಕಾರಣ”

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಫೆ.28- ಮೈಸೂರು ಮೇಯರ್ ಗೊಂದಲಕ್ಕೆ ಸಿದ್ದರಾಮಯ್ಯನವರೇ ನೇರ ಕಾರಣ ಎಂದು ಮಾಜಿ ಸಚಿವ-ಶಾಸಕ ಸಾ.ರಾ.ಮಹೇಶ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಮೇಯರ್ ಆಯ್ಕೆಗೆ ನಡೆದ ಚುನಾವಣೆಗೆ ಸಂಬಂಸಿದಂತೆ ಆದ ಬೆಳವಣಿಗೆಗಳ ಬಗ್ಗೆ ಎಳೆ ಎಳೆಯಾಗಿ ಹೇಳಿದರು.

ಸಿದ್ದರಾಮಯ್ಯ ಜೆಡಿಎಸ್‍ಅನ್ನು ಟೀಕಿಸಿದ್ದರಿಂದ ಇಂದು ನಮಗೆ ಮೇಯರ್ ಸ್ಥಾನ ಲಭಿಸಿದೆ. ನಾವಾಗಿ ಮೇಯರ್ ಸ್ಥಾನ ಬಯಸಿರಲಿಲ್ಲ. ಜೆಡಿಎಸ್‍ಆನ್ನು ಹಗುರವಾಗಿ ಕಂಡಿದ್ದರಿಂದ ನಾವು ನಮ್ಮ ಪಕ್ಷದ ಅಭ್ಯರ್ಥಿ ಹಾಕಿ ಸ್ವತಂತ್ರವಾಗಿ ನಿಲ್ಲಿಸಿ ಜಯ ಗಳಿಸಿದ್ದೇವೆ. ಕಾಂಗ್ರೆಸ್‍ನಿಂದ ಜಯ ಗಳಿಸಿಲ್ಲ. ಅವರ ಬೆಂಬಲವನ್ನು ನಾವು ಬಯಸಿರಲಿಲ್ಲ ಎಂದರು.

ಅಂತಿಮ ಗಳಿಗೆಯಲ್ಲಿ ತನ್ವೀರ್ ಸೇಠ್ ಅವರು ಮೇಯರ್ ಸ್ಥಾನ ನಮಗೆ ಬಿಟ್ಟುಕೊಡಲು ತಿಳಿಸಿದ್ದರು. ಆದರೆ, ನಾವು ಅದಕ್ಕೆ ಬೆಂಬಲಿಸಲಿಲ್ಲ. ಕಳೆದ 20 ವರ್ಷಗಳ ಅವಯಲ್ಲಿ ನಗರ ಪಾಲಿಕೆಯಲ್ಲಿ ಬಿಜೆಪಿ ಅಕಾರಕ್ಕೆ ಬಂದಿಲ್ಲ. ಹಾಗಾಗಿ ಈ ಬಾರಿ ಅವರಿಗೆ ಅದಿಕಾರ ನೀಡುವುದು ಬೇಡ. ನಾವೇ ಮೇಯರ್ ಸ್ಥಾನ ಬಿಟ್ಟುಕೊಡುತ್ತೇವೆ. ನಮಗೆ ಉಪಮೇಯರ್ ಸ್ಥಾನ ಬಿಟ್ಟುಕೊಡುವಂತೆ ತನ್ವೀರ್ ಸೇಠ್ ಅವರು ಹೇಳಿದ್ದರು. ಆಗಲೂ ನಾವು ಒಪ್ಪಿರಲಿಲ್ಲ. ಸ್ಥಳೀಯ ಮುಖಂಡರಿಗೆ ಈ ವಿಚಾರ ಬಿಟ್ಟಿದ್ದೆವು.

ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‍ನವರು ನಮ್ಮ ಮೇಯರ್ ಅಭ್ಯರ್ಥಿ ರುಕ್ಮಿಣಿ ಮಾದೇಗೌಡ ಪರ ಮತ ಚಲಾಯಿಸಿದ್ದರಿಂದ ಅವರಿಗೆ ಉಪಮೇಯರ್ ಸ್ಥಾನ ಬಿಟ್ಟುಕೊಟ್ಟೆವು.ನಮ್ಮ ಲೆಕ್ಕಾಚಾರವೇ ಬೇರೆಯಾಗಿತ್ತು. ನಾವು ಮೂವರು ಸ್ವತಂತ್ರ ಅಭ್ಯರ್ಥಿಗಳ ಬೆಂಬಲದಿಂದ ಜೆಡಿಎಸ್ ಮೇಯರ್ ಗೆಲ್ಲಿಸಲು ಲೆಕ್ಕಾಚಾರ ಹಾಕಿದ್ದೆವು. ಚುನಾವಣೆಗೆ ಕೆಲ ಸಮಯ ಮುನ್ನ ಜಿ.ಟಿ.ದೇವೇಗೌಡ ಮತ್ತು ಸಂದೇಶ್ ನಾಗರಾಜ್ ಅವರು ಚುನಾವಣೆಗೆ ಭಾಗವಹಿಸುವುದಿಲ್ಲ ಎಂಬ ಮಾಹಿತಿಯನ್ನು ತನ್ವೀರ್ ಸೇಠ್ ಅವರೇ ನೀಡಿ ಅವರು ಬರದಿದ್ದರೂ ಪರವಾಗಿಲ್ಲ, ನಾವೇ ನಿಮಗೆ ಬೆಂಬಲಿಸುತ್ತೇವೆ ಎಂದಿದ್ದರು.

ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರು ದೂರವಾಣಿ ಕರೆ ಮಾಡಿ ನಾನು ಅಧ್ಯಕ್ಷರಾದ ಸಂದರ್ಭದಲ್ಲಿ ಮೇಯರ್ ಸ್ಥಾನ ಸಿಗದಿದ್ದರೆ ಅಷ್ಟು ಸರಿಯಿರಲ್ಲ. ಹಾಗಾಗಿ ಇದೊಂದು ಬಾರಿ ಮೇಯರ್ ಸ್ಥಾನ ಬಿಟ್ಟುಕೊಡಿ ಎಂದಿದ್ದರು. ಇದನ್ನು ಬಿಟ್ಟು ಬೇರೆ ಏನೂ ಮಾತನಾಡಿರಲಿಲ್ಲ. ಆವಾಗಲೂ ಸಹ ಯಾವುದೇ ಭರವಸೆ ನೀಡಿರಲಿಲ್ಲ.

ಅಂತಿಮವಾಗಿ ಚುನಾವಣೆ ವೇಳೆಯಲ್ಲಿ ತನ್ವೀರ್ ಸೇಠ್ ನಿರ್ಧಾರ ಕೈಗೊಂಡು ಮೇಯರ್‍ಗೆ ಬೆಂಬಲಿಸಿದ್ದಾರೆ. ನಾವು ಮುಂದಿನ ವರ್ಷ ಕಾಂಗ್ರೆಸ್‍ನವರಿಗೆ ಬಿಟ್ಟುಕೊಡುತ್ತೇವೆ. ಮುಂದಿನ ಎಲ್ಲ ಚುನಾವಣೆಯಲ್ಲೂ ಸ್ವತಂತ್ರವಾಗಿ ಸ್ರ್ಪಸುತ್ತೇವೆ. ಇದರಲ್ಲಿ ಕುಮಾರಸ್ವಾಮಿ ಅವರ ಯಾವುದೇ ಪಾತ್ರವಿಲ್ಲ ಎಂದು ಸಾ.ರಾ.ಮಹೇಶ್ ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ನೂತನ ಮೇಯರ್ ರುಕ್ಮಿಣಿ ಅವರು ತಮ್ಮ ಮೇಲಿನ ಸದಸ್ಯತ್ವ ವಿವಾದ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

Facebook Comments

Sri Raghav

Admin