ಜೂ.29 ರಂದು ಸಾಲುಮರದ ತಿಮ್ಮಕ್ಕ ಗ್ರೀನರಿ ಅವಾರ್ಡ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.26-ಸಾಲುಮರದ ತಿಮ್ಮಕ್ಕ ಇಂಟರ್‍ನ್ಯಾಷನಲ್ ಫೌಂಡೇಶನ್ ವತಿಯಿಂದ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಅವಾರ್ಡ್ 2018-19 ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜೂ.29 ರಂದು ವಸಂತನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಫೌಂಡೇಶನ್‍ನ ಉಮೇಶ್ ಮಾತನಾಡಿ, ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಅವಾರ್ಡ್ 2018-19 ಪ್ರಶಸ್ತಿಯ ನಾಮನಿರ್ದೇಶನಗಳ ಅರ್ಜಿದಾರರ ಸೇವೆ ಸಾಧನೆಗಳನ್ನು ಪರಿಶೀಲಿಸಿ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರಾಗಿರುವ ಡಾ.ಜಿ.ಪರಮೇಶ್ವರವರು ಚಿಫೋ ಚಳುವಳಿಯ ನೇತಾರ ಸುಂದರ್‍ಲಾಲ್ ಬಹುಗುಣ, ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ,

ಆಧ್ಯಾತ್ಮ ಕ್ಷೇತ್ರದಲ್ಲಿ ಶಿವಾಜಿ ಸದಾಶಿವ್ ಮೋರೆ, ಸಮಾಜ ಸೇವೆಯಲ್ಲಿ ಸಿ.ಗೌತಮ ಸಾಮಾಜಿಕ ಕಳಕಳಿಗಾಗಿ ಆರ್.ನಾರಾಯಣಸ್ವಾಮಿ, ಐಎಎಸï ಅಧಿಕಾರಿ ಡಾ.ಎನ್.ಶಿವಶಂಕರ್ ಸೇರಿದಂತೆ ಒಟ್ಟು 15 ಮಂದಿ ಸಾಧಕರಿಗೆ ಡಾ.ಸಾಲುಮರದ ತಿಮ್ಮಕ್ಕನವರಿಗೆ ಅಭಿನಂದನಾ ಸಮಾರಂಭ ಹಾಗೂ ಪರಿಸರಜಾತ್ರೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು ಪ್ರಶಸ್ತಿಯು ಹತ್ತು ಸಾವಿರ ನಗದು ಬೆಳ್ಳಿ ಪದಕ ಪ್ರಶಸ್ತಿ ಫಲಕ ಪ್ರಶಸ್ತಿ ಪತ್ರ ಸ್ಮರಣಿಕೆ ಒಳಗೊಂಡಿರುತ್ತದೆ ಎಂದರು.

Facebook Comments