ಶಬರಿಮಲೆಗೆ ತೆರಳುವ ಭಕ್ತರಿಗೆ ಇಲ್ಲಿದೆ ಮಾಹಿತಿ

ಈ ಸುದ್ದಿಯನ್ನು ಶೇರ್ ಮಾಡಿ

ಶಬರಿಮಲೆ, ಡಿ.2- ಪವಿತ್ರ ಮಾಸ ಹಾಗೂ ಮಂಡಲ ಪೂಜೆಗಾಗಿ ಇಲ್ಲಿನ ಪ್ರಸಿದ್ಧ ಅಯ್ಯಪ್ಪ ಸ್ವಾಮಿ ದೇಗುಲವನ್ನು ತೆರೆಯಲಾಗಿದೆ.  ಕೋವಿಡ್ ಸಂದರ್ಭದಲ್ಲಿ ಭಕ್ತರ ಭೇಟಿಗೆ ಕೆಲವು ನಿರ್ಬಂಧಗಳನ್ನು ಹೇರಿದ್ದ ಕೇರಳ ಸರ್ಕಾರ ಈಗ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಸುರಕ್ಷಿತವಾಗಿ ಭಕ್ತರು ಆಗಮಿಸಲು ಎಲ್ಲ ರೀತಿಯ ಸಿದ್ಧತೆ ಮಾಡಲಾಗಿದೆ.

ಮಕರ ಸಂಕ್ರಮಣದ ವಿಶೇಷ ಜ್ಯೋತಿ ದರ್ಶನಕ್ಕಾಗಿ ಲಕ್ಷಾಂತರ ಭಕ್ತರು ಪ್ರತಿ ವರ್ಷ ಅಯ್ಯಪ್ಪ ದೇಗುಲಕ್ಕೆ ಬರುತ್ತಿದ್ದರು. ಆದರೆ, ಈ ಬಾರಿ ಹೆಚ್ಚಿನ ಭಕ್ತರಿಗೆ ಅವಕಾಶ ನೀಡಿದರೂ ಸಹ ಕೆಲವೊಂದು ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ ಎಂದು ಸರ್ಕಾರ ಹೇಳಿದೆ.

ಹೊಸ ನಿರ್ಧಾರದ ಪ್ರಕಾರ, ವಾರದಲ್ಲಿ ಪ್ರತಿದಿನ ಎರಡು ಸಾವಿರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುವುದು. ಇನ್ನು ಶನಿವಾರ ಮತ್ತು ಭಾನುವಾರ ಮೂರು ಸಾವಿರ ಮಂದಿಗೆ ಅವಕಾಶ ನೀಡಲಾಗುವುದು ಎಂದು ಸಚಿವ ಕಡಕೆಂಪಲ್ಲಿ ಸುರೇಂದ್ರನ್ ತಿಳಿಸಿದ್ದಾರೆ. ಆನ್‍ಲೈನ್ ಮೂಲಕವೂ ಕೂಡ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. ಶಬರಿಮಲೆಗೆ ಬರುವ ಭಕ್ತರು ಕೋವಿಡ್ ಪರೀಕ್ಷೆಯ ಪ್ರಮಾಣ ಪತ್ರ ಕೂಡ ಹೊಂದಿರಬೇಕು ಎಂದು ತಿಳಿಸಲಾಗಿದೆ.

ಶಬರಿಮಲೆ ಬೆಟ್ಟದ ತಟದಲ್ಲಿ ಆರೋಗ್ಯ ಇಲಾಖೆ ಕೋವಿಡ್ ಪರೀಕ್ಷೆಗೂ ಕೂಡ ವ್ಯಾಪಕ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.  ಒಟ್ಟಾರೆ ಲಕ್ಷಾಂತರ ಭಕ್ತರು ಶಬರಿ ಮಲೆಗೆ ಬರುವುದರಿಂದ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುವುದು ಎಂಬುದು ಕೇರಳ ಸರ್ಕಾರಕ್ಕೆ ಸವಾಲಾಗಿದೆ.

Facebook Comments