ಶಬರಿಮಲೆ ದೇಗುಲ ಇಂದಿನಿಂದ ಆರಂಭ : ಕೋವಿಡ್ ನೆಗೆಟಿವ್ ಭಕ್ತರಿಗಷ್ಟೇ ಅವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

ಶಬರಿಮಲೆ(ಕೇರಳ), ಅ.17-ವಿಶ್ವವಿಖ್ಯಾತ ಶಬರಿಮಲೆ ದೇವಸ್ಥಾನ ಆರು ತಿಂಗಳ ಬಳಿಕ ಇಂದಿನಿಂದ ಮಾಸಿಕ ಪೂಜೆಗಾಗಿ ತೆರೆದಿದ್ದು, ಕೋವಿಡ್-19 ನೆಗೆಟಿವ್ ಭಕ್ತರಿಗಷ್ಟೇ ಸ್ವಾಮಿ ಅಯ್ಯಪ್ಪ ದರ್ಶನಕ್ಕೆ ಅವಕಾಶ ನೀಡಲಾಗಿದೆ.  ಮಲೆಯಾಳಂ ಮಾಸ ತುಲಂ ಅಂಗವಾಗಿ ನಿನ್ನೆ ಸಂಜೆ ಸಾಂಪ್ರದಾಯಿಕ ಪೂಜÁ ವಿಧಿ-ವಿಧಾನಗಳೊಂದಿಗೆ ದೇವಸ್ಥಾನದ ಬಾಗಿಲು ತೆರೆಯಲಾಯಿತು. ಆದರೆ ನಿನ್ನೆ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಿಲ್ಲ.

ಇಂದು ಮುಂಜÁನೆ 5 ಗಂಟೆಯಿಂದ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮಾಸ್ಕ್‍ಗಳನ್ನು ಧರಿಸಿ ಕೊರೊನಾ ವೈರಸ್ ಸೋಂಕು ನೆಗೆಟಿವ್ ಪ್ರಮಾಣ ಪತ್ರ ಹೊಂದಿದ್ದ ಭಕ್ತರಿಗಷ್ಟೇ ಸ್ವಾಮಿ ಅಯ್ಯಪ್ಪ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.  ಕೋವಿಡ್-19 ವೈರಾಣು ಪಿಡುಗಿನಿಂದಾಗಿ ಪ್ರತಿ ದಿನ 250 ಭಕ್ತರಿಗೆ ಮಾತ್ರ ನಿಯಮಗಳಿಗೆ ಒಳಪಟ್ಟು ದರ್ಶನ ಕಲ್ಪಿಸಲಾಗುತ್ತದೆ.

ಇಂದು ದರ್ಶನಕ್ಕಾಗಿ 246 ಮಂದಿ ಅವಕಾಶ ಕಾಯ್ದಿರಿಸಿಕೊಂಡಿದ್ದಾರೆ. ಈ ತಿಂಗಳ 21ರವರೆಗೆ ಭಕ್ತರು ದರ್ಶನ ಪಡೆಯಬಹುದು. ಟ್ರಾವಂಕೂರ್ ದೇವಸ್ಥಾನಂ ಬೋರ್ಡ್(ಟಿಡಿಬಿ) ತಿಳಿಸಿದೆ.  ಕೋವಿಡ್-19 ನೆಗೆಟಿವ್ ಪ್ರಮಾಣ ಪತ್ರ ಪಡೆಯದ ಭಕ್ತರು ನೀಲಕಳ್‍ನ ಕೇಂದ್ರದಲ್ಲಿ ಸೋಂಕು ಪರೀಕ್ಷೆಗೆ ಒಳಪಟ್ಟು ನಂತರ ದರ್ಶನ ಪಡೆಯಬಹುದು.

10 ವರ್ಷದಿಂದ 60 ವರ್ಷ ವಯೋಮಾನದವರು ಪರ್ವತ ಏರಲು ಸಾಮಥ್ರ್ಯ ಹೊಂದಿದ್ದರೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿ ಭಕ್ತರ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. ಭಕ್ತರಿಗೆ ಸನ್ನಿಧಾನಂ, ನೀಲಕ್ಕಳ್ ಮತ್ತು ಪಂಪಾದಲ್ಲಿ ವಾಸ್ತವ್ಯ ಹೂಡಲು ಅವಕಾಶ ನೀಡಿಲ್ಲ.

ದೇಶಾದ್ಯಂತ ಕೊರೊನಾ ಸೋಂಕು ಉಲ್ಬಣಗೊಂಡ ನಂತರ ಮಾರ್ಚ್ 25ರಿಂದ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಾಗಿಲು ಬಂದ್ ಮಾಡಲಾಗಿತ್ತು.

Facebook Comments