ಸಚಿನ್ ಹುಟ್ಟುಹಬ್ಬಕ್ಕೆ ಶುಭಾಶಯಗಳ ಸುರಿಮಳೆ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಏ. 24- ಕ್ರಿಕೆಟ್ ದೇವರೆಂದೇ ಬಿಂಬಿತಗೊಂಡಿರುವ ಮಾಸ್ಟರ್ ಬಾಸ್ಟರ್ ಸಚಿನ್ ತೆಂಡೂಲ್ಕರ್ ಇಂದು ತಮ್ಮ 46ರ ಜನ್ಮ ದಿನ ಆಚರಿಸಿಕೊಳ್ಳುತ್ತಿದ್ದು ಶುಭಾಶಯಗಳ ಸುರಿಮಳೆಯೇ ಹರಿದು ಬಂದಿದೆ.

2011ರ ವಿಶ್ವಕಪ್‍ನ ವಿಜೇತ ಆಟಗಾರ, ಅತಿ ಹೆಚ್ಚು ವಿಶ್ವಕಪ್ ರನ್‍ಗಳ ಸರದಾರ, ಅತಿ ಹೆಚ್ಚು ಶತಕ ಹಾಗೂ ಅರ್ಧಶತಕಗಳ ಗಳಿಸಿರುವ ಸಚಿನ್‍ಗೆ ಅಭಿಮಾನಿಗಳು ಕೂಡ ತಮ್ಮ ದಾಟಿಯಲ್ಲೇ ಶುಭಾಶಯಗಳನ್ನು ಕೋರಿದ್ದಾರೆ.

ಐಸಿಸಿ ಟ್ವಿಟ್ಟರ್ ಮೂಲಕ ಶುಭಾಶಯ ಕೋರಿದ್ದು 200 ಟೆಸ್ಟ್ ಹಾಗೂ 463 ಏಕದಿನ ಪಂದ್ಯಗಳಿಂದ 34,357 ರನ್À ಗಳಿಸಿರುವ ಸಚಿನ್‍ರ ಕೊಡುಗೆ ಅಪಾರ ಎಂದು ಬಣ್ಣಿಸಿದೆ.

ಬಿಸಿಸಿಐ ಕೂಡ ತಮ್ಮ ಶುಭಾಶಯಗಳನ್ನು ಕೋರಿದ್ದು, ಸಚಿನ್ ತಮ್ಮ ಹುಟ್ಟುಹಬ್ಬದ ದಿನದಂದೇ ದಕ್ಷಿಣ ಅಫ್ರಿಕಾದ ವಿರುದ್ಧದ ದ್ವಿಶತಕ ಬಾರಿಸಿದ್ದನ್ನು ಸ್ಮರಿಸಿದೆ.
ಕ್ರಿಕೆಟಿಗರಾದ ವಿರಾಟ್‍ಕೊಹ್ಲಿ, ಮಹೇಂದ್ರಸಿಂಗ್‍ಧೋನಿ, ರೋಹಿತ್‍ಶರ್ಮಾ, ಹರ್ಭಜನ್‍ಸಿಂಗ್, ಅಜೆಂಕ್ಯಾರಹಾನೆ ಸೇರಿದಂತೆ ಅನೇಕ ಕ್ರಿಕೆಟ್ ದಿಗ್ಗಜರು ಕೂಡ ಶುಭ ಕೋರಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ