‘ನನ್ನ ಮಗ ದೇಶಕ್ಕಾಗಿ ತನ್ನ ಪ್ರಾಣಾರ್ಪಣೆ ಮಾಡಿದ್ದಕ್ಕೆ ಹೆಮ್ಮೆ ಇದೆ’

ಈ ಸುದ್ದಿಯನ್ನು ಶೇರ್ ಮಾಡಿ

ಹೈದರಾಬಾದ್, ಜೂ.17- ನಮಗೆ ಇದ್ದದ್ದು ಒಬ್ಬನೇ ಮಗ. ಆತನನ್ನು ಕಳೆದುಕೊಂಡಿರುವುದಕ್ಕೆ ದುಃಖವಾಗುತ್ತಿದೆ. ಆದರೆ ನನ್ನ ಮಗ ದೇಶಕ್ಕಾಗಿ ತನ್ನ ಪ್ರಾಣಾರ್ಪಣೆ ಮಾಡಿದ್ದಕ್ಕೆ ಹೆಮ್ಮೆ ಇದೆ ಎಂದು ಗಲ್ವಾನ್‍ನಲ್ಲಿ ಚೀನಾ ಯೋಧರ ದಾಳಿಗೆ ಬಲಿಯಾದ ಕರ್ನಲ್ ಸಂತೋಷ್ ಬಾಬಿ ಪೋಷಕರು ಹೇಳಿದ್ದಾರೆ.

ತೆಲಂಗಾಣ ಕರ್ನಲ್ ಸಂತೋಷ್ ಬಾಬು ಎಂಬ ಯೋಧ ಹುತಾತ್ಮರಾಗಿದ್ದು ನನ್ನ ಷಕರ ಆಕ್ರಂದನ ಮುಗಿಲು ಮುಟ್ಟಿದೆ. ಪೂರ್ವ ಲಡಾಖ್‍ನ ಗಾಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ಬಾಬು ಮತ್ತು ಇಬ್ಬರು ಸೈನಿಕರು ಚೀನಾದ ಸೈನಿಕರೊಂದಿಗಿನ ಘರ್ಷಣೆಯಲ್ಲಿ ಹುತಾತ್ಮರಾಗಿದ್ದು ದೇಶಕ್ಕೆ ಸೇವೆ ಸಲ್ಲಿಸಿ ಹುತಾತ್ಮರಾದ ಮಗನ ಕಳೆದುಕೊಂಡ ನನ್ನ ಷಕರು ಕಣ್ಣೀರಿನ ಜೊತೆಗೆ ಕೆಚ್ಚೆದೆಯ ಮಾತುಗಳನ್ನು ಆಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಹುತಾತ್ಮ ಯೋಧ ಸಂತೋಷ ತಂದೆ ಮತ್ತು ನಿವೃತ್ತ ಬ್ಯಾಂಕರ್ ಬಿ.ಉಪೇಂದರ್, ದೇಶಕ್ಕೆ ಸೇವೆ ಸಲ್ಲಿಸಲು ನನಗೆ ಅವಕಾಶ ಕೂಡಿ ಬರಲಿಲ್ಲ. ಹಾಗಾಗಿ ನನ್ನ ಮಗನನ್ನು ಸೇರಿಸಿದ್ದೆ. ಆದರೆ, ಆ ವೇಳೆ ನನ್ನ ಸಂಬಂಕರು ಈ ವಿಚಾರವನ್ನು ವಿರೋಸಿದ್ದರು.

ನನ್ನ ಕನಸು ಈಡೇರಿಸುವ ಸಲುವಾಗಿ ನನ್ನ ಮಗನನ್ನು ದೇಶ ಸೇವೆಗೆ ಕಳುಹಿಸಿದ್ದೆ. ಅಂದುಕೊಂಡಂತೆ ಡಿಗ್ರಿ ಬಳಿಕ ಭಾರತೀಯ ಸೇನೆಗೆ ಮಗ ಆಯ್ಕೆಯಾದ. ಜಮ್ಮು ಮತ್ತು ಕಾಶ್ಮೀರದಲ್ಲಿ ಅವನ ಮೊದಲ ದೇಶಸೇವೆ ಆರಂಭವಾಯಿತು. ಇತ್ತೀಚೆಗೆ ಹೈದರಾಬಾದ್ಗೆ ವರ್ಗಾವಣೆಯ ನಿರೀಕ್ಷೆಯಲ್ಲಿದ್ದ ಎಂದು ದುಃಖ ತಂದುಕೊಂಡರು.

ಭಾನುವಾರವಷ್ಟೇ ನನ್ನ ಜೊತೆಗೆ ಫೋನ್ ನಲ್ಲಿ ಮಾತನಾಡಿದ್ದ. ಗಡಿ ವಿವಾದ ಕುರಿತು ಮಾಧ್ಯಮದಲ್ಲಿ ಬರುವುದಕ್ಕೂ ವಾಸ್ತವಕ್ಕೂ ವ್ಯತ್ಯಾಸವಿದೆ ಎಂದಿದ್ದ. ಹೈದರಾಬಾದ್‍ಗೆ ಆತ ವರ್ಗವಾಗಿದ್ದ. ಆದರೆ, ಲಾಕ್‍ಡೌನ್ ಕಾರಣ ವರ್ಗ ತಡವಾಯಿತು. ಮುಂದಿನ ತಿಂಗಳು ಬರುವುದಾಗಿ ಹೇಳಿದ್ದ ಎಂದು ಕಣ್ಣೀರಿಟ್ಟರು.

ನಾನು ಯೋಧ ಆಗಬೇಕುಎಂದುಕೊಂಡಿದ್ದೆ. ಆದರೆ, ಆಗಲಿಲ್ಲ. ನಮ್ಮಮಗ ಸೇನೆ ಸೇರುವ ತನ್ನ ಕನಸು ಈಡೇರಿಸಿಕೊಂಡಿದ್ದ. ಆತ ಯಾವಾಗಲೂ ಚಿನ್ನದ ಪದಕ ಗೆಲ್ಲುತ್ತಿದ್ದ. ತನಗೆ ಏನಾದರೂ ಆದರೆ, ಅದನ್ನು ಅರಗಿಸಿಕೊಳ್ಳುವ ಶಕ್ತಿ ತಂದುಕೊಳ್ಳಿ ಎಂದು ಮಗ ಹೇಳುತ್ತಿದ್ದ ಎಂದು ತಿಳಿಸಿದ್ದಾರೆ.

Facebook Comments

Sri Raghav

Admin