‘ನೆಹರು ದೊಡ್ಡ ರೇಪಿಸ್ಟ್’ : ಸಾದ್ವಿ ಪ್ರಾಚಿ ವಿವಾದಿತ ಹೇಳಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಮೀರತ್, ಡಿ.9- ದೇಶದ ಮೊದಲ ಪ್ರಧಾನಿ ಜವಾಹರ್‍ಲಾಲ್ ನೆಹರು ದೇಶದ ಅತಿ ದೊಡ್ಡ ಅತ್ಯಾಚಾರಿ ಎಂದು ವಿಶ್ವ ಹಿಂದೂ ಪರಿಷತ್ ನಾಯಕಿ ಸಾದ್ವಿ ಪ್ರಾಚಿ ನೀಡಿರುವ ಹೇಳಿಕೆಯೊಂದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.

ಪ್ರಾಚಿ ಹೇಳಿಕೆ ಬಗ್ಗೆ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಭಾರತವು ಅತ್ಯಾಚಾರಗಳ ರಾಜಧಾನಿ ಆಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಸಾಧ್ವಿ ಪ್ರಾಚಿ, ರಾಮ, ಕೃಷ್ಣ ಇದ್ದ ದೇಶ ನಮ್ಮದು. ರಾಹುಲ್ ಗಾಂಧಿ ಹೇಳಿರುವುದಾದರೂ ಏನು, ರಾಮ ಮತ್ತು ಕೃಷ್ಣನ ಪರಮಾತ್ಮ ಇದ್ದ ದೇಶದ ಸಂಸ್ಕøತಿ ಹಾಳು ಮಾಡಿದ್ದೇ ನೆಹರು.

ನೆಹರು ದೇಶದ ಅತಿ ದೊಡ್ಡ ರೇಪಿಸ್ಟ್ ಎಂದು ವಿವಾದಾತ್ಮಕ ಹೇಳಿಕೆ ಹೇಳಿದ್ದಾರೆ. ಭಯೋತ್ಪಾದನೆ, ನಕ್ಸಲಿಸಂ, ಭ್ರಷ್ಟಾಚಾರ ಹಾಗೂ ಅತ್ಯಾಚಾರ ನೆಹರು ಕುಟುಂಬದಿಂದ ಬಂದ ಉಡುಗೊರೆಯಾಗಿದೆ ಎಂದು ಲೇವಡಿ ಮಾಡಿದ್ದಾರೆ.

Facebook Comments