ಒಂದೇ ವಾರದಲ್ಲಿ 2 ಟೂರ್ನಿ ಸೋತ ಸೈನಾ ನೆಹವಾಲ್

ಈ ಸುದ್ದಿಯನ್ನು ಶೇರ್ ಮಾಡಿ

ಹಾಂಗ್‍ಕಾಂಗ್, ನ.13- ಬ್ಯಾಡ್ಮಿಂಟನ್ ಲೋಕದ ಶ್ರೇಷ್ಠ ಆಟಗಾರ್ತಿ, ಭಾರತದ ಸೈನಾ ನೆಹ್ವಾಲ್ ಅವರು ಒಂದೇ ವಾರದಲ್ಲಿ ಎರಡು ಪ್ರಮುಖ ಟೂರ್ನಿಗಳ ಮೊದಲ ಸುತ್ತಿನಲ್ಲೇ ಹೊರಬೀಳುವ ಮೂಲಕ ನಿರಾಸೆ ಅನುಭವಿಸಿದ್ದಾರೆ.

ನವೆಂಬರ್ 6 ರಂದು ನಡೆದ ಚೈನಾ ಓಪನ್ನ ಆರಂಭಿಕ ಪಂದ್ಯದಲ್ಲೇ ಕೈ ವಿರುದ್ಧ 9-21, 12-21 ನೇರ ಸೆಟ್‍ನಿಂದ ಸೋತು ಪಂದ್ಯಾವಳಿಯಿಂದಲೇ ಹೊರ ನಡೆದರೆ, ಇಂದಿಲ್ಲಿ ನಡೆದ ಹಾಂಗ್‍ಕಾಂಗ್ ಓಪನ್‍ನಲ್ಲೂ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ.

ಬ್ಯಾಡ್ಮಿಂಟನ್ ಲೋಕದಲ್ಲಿ 9ನೆ ಶ್ರೇಯಾಂಕಿತೆಯಾಗಿರುವ ಸೈನಾರನ್ನು ಎದುರಿಸಿದ 22ನೆ ಶ್ರೇಣಿಯ ಚೀನಾದ ಯುವ ಆಟಗಾರ್ತಿ ಕೈ ಯಾನ್ ಯಾನ್ ವಿರುದ್ಧ 13-21, 20-22 ನೇರಾ ಸೆಟ್‍ಗಳಿಂದ ಸೋತು ಟೂರ್ನಿಯಿಂದ ಹೊರ ಬಿದ್ದಿದ್ದಾರೆ.

ಮೊದಲ ಸುತ್ತಿನಲ್ಲಿ ಪ್ರತಿರೋಧ ತೋರದೆ ಸೋಲನ್ನಪ್ಪಿಕೊಂಡರೆ, ಎರಡನೇ ಸುತ್ತಿನಲ್ಲಿ ಸೈನಾ ಹೋರಾಟ ತೋರಿ ಸೆಟ್ ಗೆಲ್ಲುವ ಭರವಸೆ ಮೂಡಿಸಿದರು. 4-4 ಪಾಯಿಂಟ್ಸ್‍ಗಳಾಗಿದ್ದ ಮಿಂಚಿನ ಹೊಡೆತದಿಂದಾಗಿ ಕೈ 18-14 ಪಾಯಿಂಟ್ಸ್‍ಘಳ ಮುನ್ನಡೆ ಸಾಧಿಸಿದರೂ, ನಂತರ ನಿರಂತರ 5 ಸೆಟ್ ಗಳಿಸಿದ ಸೈನಾ 20-19ಕ್ಕೇರಿದರು, ಅಂತಿಮ ಕ್ಷಣದಲ್ಲಿ ಮತ್ತೆ ತಮ್ಮ ಮಿಂಚಿನ ಆಟ ಪ್ರದರ್ಶಿಸಿದ ಯಾನ್À 3 ನಿರಂತರ ಪಾಯಿಂಟ್ಸ್‍ಗಳನ್ನು ಗಳಿಸಿ 22-20 ಪಾಯಿಂಟ್‍ಗಳಿಂದ ಪಂದ್ಯವನ್ನು ತಮ್ಮದಾಗಿಸಿಕೊಂಡರು.

Facebook Comments