ಸೈನಾ ದಂಪತಿಗೆ ಕೊರೊನಾ ಪಾಸಿಟಿವ್

ಈ ಸುದ್ದಿಯನ್ನು ಶೇರ್ ಮಾಡಿ

ಬ್ಯಾಂಗ್‍ಕಾಂಗ್, ಜ.12- ಬ್ಯಾಡ್ಮಿಂಟನ್ ಲೋಕದ ಧ್ರುವತಾರೆ ಸೈನಾ ನೆಹ್ವಾಲ್ ಅವರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಥೈಲ್ಯಾಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಬ್ಯಾಂಕ್‍ಕಾಂಗ್‍ಗೆ ತೆರಳಿದ್ದ ಸೈನಾರನ್ನು ಪರೀಕ್ಷಿಸಿದಾಗ ಅವರಿಗೆ ಕೊರೊನಾ ಸೋಂಕು ತಗುಲಿರುವ ಲಕ್ಷಣಗಳು ಕಂಡು ಬಂದಿದ್ದರಿಂದ ಅವರನ್ನು ಪರೀಕ್ಷಿಸಲಾಗಿದೆ.

ಕೊರೊನಾ ಲಕ್ಷಣ ಕಾಣಿಸಿಕೊಂಡಿದ್ದರಿಂದ ಇಂದಿನಿಂದ ನಡೆಯಬೇಕಾಗಿದ್ದ ಬ್ಯಾಡ್ಮಿಂಟನ್ ಸರಣಿಯಿಂದ ಸೈನಾ ಹೊರಬಿದ್ದಿದ್ದಾರೆ. ಸೈನಾ ಪತಿ ಹಾಗೂ ಬ್ಯಾಡ್ಮಿಂಟನ್ ಆಟಗಾರ ಪರುಪಲ್ಲಿ ಕಶ್ಯಪ್ ಅವರನ್ನು ಕ್ವಾರಂಟೈನ್ ಮಾಡಿರುವುದರಿಂದ ಅವರು ಕೂಡ ಟೂರ್ನಿಯಿಂದ ಹೊರಗುಳಿಯುವಂತಾಗಿದೆ.

ಡಿಸೆಂಬರ್‍ನಲ್ಲಿಯೂ ನೈನಾ ಹಾಗೂ ಕಶ್ಯಪ್ ಜೋಡಿಗೆ ಕೊರೊನಾ ಕಾಣಿಸಿಕೊಂಡಿತ್ತು ನಂತರ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರಾದರೂ ಈಗ ಮತ್ತೆ ಕೊರೊನಾ ಲಕ್ಷಣಗಳು ಕಂಡುಬಂದಿರುವುದರಿಂದ 10 ದಿನಗಳ ಕಾಲ ಕ್ವಾರಂಟೈನ್‍ಗೆ ಒಳಪಟ್ಟಿದ್ದಾರೆ. ಮತ್ತೊಬ್ಬ ಬ್ಯಾಡ್ಮಿಂಟನ್ ತಾರೆ ಪ್ರಾಣೋಯ್‍ಗ ಕೊರೊನಾ ಲಕ್ಷಣಗಳಿದ್ದು ಅವರನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ ಎಂದು ಬ್ಯಾಡ್ಮಿಂಟನ್ ಅರ್ಥಾರಿಟಿ ಆಫ್ ಇಂಡಿಯಾ ತಿಳಿಸಿದೆ.

ಈ ಹಿಂದೆ ಕೊರೊನಾ ಕಾರಣದಿಂದಲೇ ಚೀನಾ ಟೂರ್ನಿಯಿಂದ ಹೊರಗುಳಿದರೆ, ಜಪಾನ್ ಕೂಡ ಅಂತಿಮ ಕ್ಷಣದಲ್ಲಿ ವಿಶ್ವದ ನಂಬರ್ 1 ಆಟಗಾರ್ತಿ ಕೆನ್‍ಟೋ ಮೊಮೊಟಾರ ಸೇವೆಯನ್ನು ಕಳೆದುಕೊಂಡಿತ್ತು.

Facebook Comments