ಚೀನಾ ಓಪನ್ ಬ್ಯಾಡ್ಮಿಂಟನ್ : ಸೈನಾ ಔಟ್, 2ನೆ ಸುತ್ತಿಗೆ ಕಶ್ಯಪ್

ಈ ಸುದ್ದಿಯನ್ನು ಶೇರ್ ಮಾಡಿ

ಫುಜೌವು(ಚೀನಾ), ನ.6- ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ತಾರೆ ಮತ್ತು ಒಲಿಂಪಿಕ್ ಕಂಚು ಪದಕ ವಿಜೇತೆ ಸೈನಾ ನೆಹ್ವಾಲ್‍ಗೆ ನೀರಸ ಪ್ರದರ್ಶನ ಮುಂದುವರಿದಿದ್ದು, ಚೀನಾ ಓಪನ್ ಪಂದ್ಯಾವಳಿಯಲ್ಲಿ ಮಹಿಳೆಯರ ಸಿಂಗಲ್ಸ್‍ನ ಆರಂಭಿಕ ಸುತ್ತಿನಲ್ಲೇ ಪರಾಭವಗೊಂಡು ಟೂರ್ನಿಯಿಂದ ನಿರ್ಗಮಿಸಿದ್ದಾರೆ.

ಸೈನಾ ಅವರ ಪತಿ ಮತ್ತು ಅವರ ವೈಯಕ್ತಿಕ ತರಬೇತುದಾರ ಪರುಪಳ್ಳಿ ಕಶ್ಯಪ್ ಎರಡನೆ ಸುತ್ತು ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಶ್ವದ 9ನೆ ಶ್ರೇಯಾಂಕದ ಸೈನಾ ಚೀನಾದ ಕಾಯಿ ಯಾನ್‍ಯಾನ್ ಅವರ ವಿರುದ್ಧ 9-21 , 12-21 ನೇರ ಸೆಟ್‍ಗಳಿಂದ ಪರಾಭವಗೊಂಡು ಪಂದ್ಯಾವಳಿಯಿಂದ ನಿರ್ಗಮಿಸ ಬೇಕಾಯಿತು.

7 ಲಕ್ಷ ಅಮೆರಿಕನ್ ಡಾಲರ್ ಬಹುಮಾನ ಮೊತ್ತದ ಈ ಪಂದ್ಯಾವಳಿಯ ಪುರುಷರ ಸಿಂಗಲ್ಸ್‍ನಲ್ಲಿ ಕಶ್ಯಪ್ ಥೈಲ್ಯಾಂಡ್‍ನ ಸಿಟ್ಟಿಕೋಮ್ ಥಮಾಸಿನ್ ಅವರ ವಿರುದ್ಧ ಗೆಲುವು ಸಾಧಿಸಿ ಎರಡನೆ ಸುತ್ತು ಪ್ರವೇಶಿಸಿದ್ದಾರೆ.

Facebook Comments