`ಸಲಗ’ ಚಿತ್ರದ ಮಳೆಯೇ ಮಳೆಯೇ ಸಾಂಗ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ಕೊರೊನಾ ಮಹಾ ಮಳೆಯಲ್ಲಿ ಸಲಗ ಚಿತ್ರ ತಂಡ ಮಲೆನಾಡ ರಮಣೀಯ ತಾಣಗಳಲ್ಲಿ ಮಧುರ ಸುಮಧುರ ಡ್ಯುಯೆಟ್ ಹಾಡನ್ನು ನಯನ ಮನೋಹರವಾಗಿ ಚಿತ್ರಿಸಿ, ಮತ್ತೊಮ್ಮೆ ಜೋರಾಗಿ ಸದ್ದು ಸುದ್ದಿ ಮಾಡಿತ್ತು. ಇಧೀಗ ಆ ಹಾಡನ್ನ ಪ್ರೇಕ್ಷಕರಿಗೆ ತೋರಿ ಸೋದಕ್ಕೆ ಚಿತ್ರತಂಡ ಸಜ್ಜಾಗಿದೆ. ದುನಿಯಾ ವಿಜಯ್ ನಿರ್ದೇಶಿಸಿ ನಟಿಸ್ತಿರೋ ಈ ಚಿತ್ರದಲ್ಲಿ ಡಾಲಿ ಧನಂಜಯ ಪ್ರಮುಖ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದು, ಸಂಜನಾ ಆನಂದ್ ನಾಯಕಿಯಾಗಿ ಕಾಣಿಸಿ ಕೊಂಡಿದ್ದಾರೆ.

ಟಗರು ಕೆ.ಪಿ.ಶ್ರೀಕಾಂತ್ ನಿರ್ಮಾಣದಲ್ಲಿ ತಯಾರಾಗ್ತಿರೋ ಈ ಚಿತ್ರ ಈಗಾಗ್ಲೇ ಹತ್ತು ಹಲವು ವಿಶೇಷಗಳಿಂದುದ್ಯಮದಲ್ಲಿ ಹಾಗೂ ಅಭಿಮಾನಿಗಳಲ್ಲಿ ದೊಡ್ಡ ನಿರೀಕ್ಷೆ ಹುಟ್ಟಿಸಿದೆ.
ಈ ನಡುವೆ ಕೋವಿಡ್ ಹಾವಳಿಯಿಂದ ಎಲ್ಲಾ ಲಾಕ್ ಆಗಿದ್ರೂ ಸಲಗ ಮಾತ್ರ ಮತ್ತೊಂದು ವಿಶೇಷ ವಿಚಾರದಿಂದ ಸಖತ್ತಾಗೇ ಘರ್ಜಿಸುತ್ತಿದೆ.

ಕೋವಿಡ್ ನಡುವೆ ಸರ್ಕಾರ ನೀಡಿರೋ ಎಲ್ಲಾ ಸೂಚನೆಗಳನ್ನು ಪಾಲಿಸಿ, ನಾಯಕ ನಾಯಕಿ ಸೇರಿ ಕೇವಲ 12 ಮಂದಿ ತಂತ್ರಜ್ಞಾನ ದೊಂದಿಗೆ ಸಲಗದ ಈ ಬ್ಯೂಟಿಫುಲ್ ಹಾಡನ್ನ ಚಿತ್ರಿಸಿರೋದು ವಿಶೇಷ. ಸಲಗ ಚಿತ್ರಕ್ಕಾಗಿ ಚರಣ್ ರಾಜ್ ಸಂಯೋನೆಯ ಮಳೆಯೇ ಮಳೆಯೇ ಅಂಬೆಗಾ ಲೊಡುತ್ತಾ ಸುರಿಯೇ…ಅನ್ನೋ ರೊಮ್ಯಾಂಟಿಕ್ ಹಾಡನ್ನ ಸಾಹಿತ್ಯಕ್ಕೆ ತಕ್ಕಂತೆ ಜಡಿಮಳೆಯಲ್ಲೇ ಹೀಗೆ ಸದ್ದಿಲ್ಲದೇ ಚಿತ್ರಿಸಿಕೊಂಡು ಬಂದಿದೆ.

ದುನಿಯಾ ವಿಜಯ್ ಸಂಜನಾ ಆನಂದ್ ನಡುವಿನ ಈ ಪ್ರಣಯ ಗೀತೆಯನ್ನ ಮಳೆ,ಚಳಿ ನಡುವೆ ಯಾವುದನ್ನು ಲೆಕ್ಕಿಸದೆ ಚಿತ್ರೀಕರಿಸಲಾಗಿದೆ. ಅದ್ರಲ್ಲೂ ಛಾಯಾಗ್ರಹಕ ಶಿವಸೇನ ಕೆಲ ಸೀಕ್ವೆ£್ಸïಗಳನ್ನ ಒರಿಜಿನಲ್ ಮಳೆಯಲ್ಲೇ ಚಿತ್ರಿಸಿರೋದು ಮತ್ತೊಂದು ವಿಶೇಷ. ಇದೇ ಕಾರಣಕ್ಕೆ ಜಡಿ ಮಳೆಯ ಒಂದು ಶಾಟ್‍ಗಾಗಿ ಚಿತ್ರ ತಂಡ ನಾಲ್ಕೈದು ಗಂಟೆ ಕಾದು 12 ಜನರೂ ಕೂಡಿ ಮಳೆಯ ಕೆಸರಿನಲ್ಲಿ ನಾಲ್ಕು ದಿನ ಎದ್ದು ಬಿದ್ದು ಅದ್ಭುತ ಹಾಡಿನ ಚಿತ್ರೀಕರಣ ಮಾಡಿದ್ದಾರೆ. ಅದ್ಭುತ ಹಾಡೊಂದನ್ನ ಸದ್ದಿಲ್ಲದೆ ಚಿತ್ರೀಕರಿಸಿಕೊಂಡು ಬಂದಿದೆ.

ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ಹಾಸನದ ಸಕಲೇಶಪುರ ಸೇರಿ ಪಶ್ಚಿಮ ಘಟ್ಟಗಳ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಸಲಗ ಚಿತ್ರದಲ್ಲಿ ಈ ಹಾಡು ಮತ್ತೊಂದು ಸ್ಪೆಷಲ್ ಮತ್ತುಹೈಲೈಟ್ ಗಳಲ್ಲೇ ದಾಗಲಿದೆಯಂತೆ. ಈ ಹಾಡು ಇದೇ ಸೆ.5ರಂದು ಬೆಳಿಗ್ಗೆ 11ಕ್ಕೆ ಅ2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗ್ತಿದೆ.

Facebook Comments