ವಿಶ್ವದ ಅಪರೂಪದ ಬೃಹತ್ ಸಾಲಿಗ್ರಾಮಗಳ ಸಂಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ಹಿಂದುಗಳ ಪಾಲಿಗೆ ಅತ್ಯಂತ ಪವಿತ್ರವಾದ ಸಾಲಿಗ್ರಾಮ ಶಿಲೆಗಳನ್ನು ಸಂಗ್ರಹಿಸಿ ಅಧ್ಯಯನ ನಡೆಸುತ್ತಿರುವ ವೇದಿಕ್ ಸೈನ್ಸ್ ರಿಸರ್ಚ್ ಕೌನ್ಸಿಲ್ ಸಂಸ್ಥೆ. ದೇಶದ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿದೆ. ಈ ಸಂಸ್ಥೆ 50 ಕೆಜಿ ತೂಕದ ಭೂವರಹ ಸಾಲಿಗ್ರಾಮ, 56 ಕೆಜಿ ತೂಕದ ಆನಂತೇಶ್ವರ ಶಿವ ಸಾಲಿಗ್ರಾಮ, 30 ಕೆಜಿಯ ಸುದರ್ಶನ ಸಾಲಿಗ್ರಾಮ, 39 ಕೆಜಿ ತೂಕದ ಹಯಗ್ರಿವ ಸಾಲಿಗ್ರಾಮ ಹಾಗೂ 36 ಕೆಜಿ ತೂಕದ ನಾಗ ಸಾಲಿಗ್ರಾಮ ಸೇರಿ ಸಾವಿರಾರು ವಿಶೇಷ ಸಾಲಿಗ್ರಾಮಗಳನ್ನು ಸಂಗ್ರಹಿಸಿದೆ.

ವಿಶ್ವದಲ್ಲೇ ವಿಶಿಷ್ಟವಾದ ಸಾಲಿಗ್ರಾಮಗಳನ್ನು ಸಂಗ್ರಹಿಸಿರುವ ಈ ಸಂಸ್ಥೆ ಬರುವ ದಿನಗಳಲ್ಲಿ ಮ್ಯೂಸಿಯಂ ಸ್ಥಾಪಿಸಿ ಅದರಲ್ಲಿ ಸಾಲಿಗ್ರಾಮಗಳನ್ನು ಇಡುವ ಆಲೋಚನೆವಿದೆ. ಇದರಿಂದ ಜನರಿಗೆ ಮ್ಯೂಸಿಯಂಗೆ ಭೇಟಿ ನೀಡಿ ಸಾಲಿಗ್ರಾಮಗಳನ್ನು ನೋಡಲು ಅನುಕೂಲವಾಗಲಿದೆ. ಸಾಮಾನ್ಯವಾಗಿ ಸಾಲಿಗ್ರಾಮಗಳ ತೂಕ ಕನಿಷ್ಟ 10 ಗ್ರಾಂನಿಂದ ಗರಿಷ್ಟ 1ಕೆಜಿವರೆಗೆ ಇರುತ್ತದೆ. ಈ ತೂಕದ ಸಾಲಿಗ್ರಾಮಗಳು ಎಲ್ಲ ಕಡೆ ಲಭ್ಯವಿರುತ್ತದೆ. ಆದರೆ, ಹತ್ತಾರು ಕೆಜಿ ತೂಕದ ಸಾಲಿಗ್ರಾಮಗಳು ಪ್ರಪಂಚದ ಯಾವುದೇ ವಸ್ತು ಸಂಗ್ರಹಾಲಯದಲ್ಲಿ ಇಟ್ಟಿಲ್ಲ.  ಆದ್ದರಿಂದ, ನಾವು ಹಿಂದೂಗಳ ಪಾಲಿಗೆ ಪವಿತ್ರವಾದ ಸಾಲಿಗ್ರಾಮ ಶಿಲೆಗಳನ್ನು ಸಂಗ್ರಹಿಸಿ ಸಂಶೋಧನೆಗಳನ್ನು ನಡೆಸಲಾಗುತ್ತಿದೆ ಎನ್ನುತ್ತಾರೆ ಸಂಸ್ಥೆ ಅಧ್ಯಕ್ಷ ಬಿ.ರಾಮಾಚಾರಿ.

ಸಾಕ್ಷಾತ್ ವಿಷ್ಣುರೂಪ: ಸಾಲಿಗ್ರಾಮ ಶಿಲೆಗಳು ಸಾಕ್ಷಾತ್ ವಿಷ್ಣು ರೂಪದ ಶಿಲೆಗಳಾಗಿವೆ. ಸಾವಿರಾರು ವರ್ಷಗಳಿಂದಲೂ ಪ್ರಾಚೀನ ಭಾರತ ಪರಂಪರೆಯಲ್ಲಿ ಸಾಲಿಗ್ರಾಮ ಶಿಲೆಗೆ ವಿಶೇಷ ದೈವಿಕ ಸ್ಥಾನಮಾನ ನೀಡಲಾಗಿದೆ. ವೇದಗಳು, ಉಪನಿಸತ್ತುಗಳು, ಸ್ಮತಿಗಳು, ಶೃತಿಗಳು, ಅರಣ್ಯಕಗಳು ಸೇರಿ ಅನೇಕ ಪ್ರಾಚೀನ ಭಾರತದ ದಾಖಲೆಗಳಲ್ಲಿ ಸಾಲಿಗ್ರಾಮ ಶಿಲೆಯ ವಿವಿಧ ರೂಪಗಳನ್ನು ಅದರ ಶಕ್ತಿ ವಿಶೇಷಗಳನ್ನು ವರ್ಣಿಸಲಾಗಿದೆ. ಅದರಲ್ಲೂ ಗರುಡ ಪುರಾಣ, ವಿಷ್ಣು ಪುರಾಣ, ಶಿವಪುರಾಣಗಳಲ್ಲಿ ಸಾಲಿಗ್ರಾಮದ ಬಗ್ಗೆ ಅನೇಕ ಮಾಹಿತಿಗಳು ತಿಳಿಯುತ್ತದೆ.

ಹಿಮಾಲಯ ತಪ್ಪನಲ್ಲಿರುವ ಗಂಡಕ್ಕಿ ನದಿಯ ಅಸುಪಾಸಿನಲ್ಲಿ ಈ ಸಾಲಿಗ್ರಾಮಗಳು ಸಿಗಲಿವೆ. ಯುನೆಸ್ಕೊ ಈ ಸಾಲಿಗ್ರಾಮಗಳನ್ನು ಗಂಡಕಿ ನದಿಯಿಂದ ತೆಗೆಯುವುದನ್ನು ನಿಷೇಧಿಸಿದೆ. ವೈಜ್ಞಾನಿಕವಾಗಿ ಸಾಲಿಗ್ರಾಮಗಳನ್ನು ಅಮೋನೈಟ್ ರಾಜಿಲ್ ಎಂದು ಕರೆಯುತ್ತಾರೆ. ವಿಜ್ಞಾನಿಗಳು ಪ್ರಕಾರ ಇದು ಒಂದೂವರೆ ಲಕ್ಷ ವರ್ಷಗಳ ಹಿಂದೆ ಭೂಮಿಯಲ್ಲಿ ಜೀವಿಸಿದ್ದ ಜೀವಿಗಳ ಪಳೆಯುಳಿಕೆ. ಔಷಧ ವಿಜ್ಞಾನದ ಪ್ರಕಾರ ಈ ಸಾಲಿಗ್ರಾಮ ಶಿಲೆಗಳಲ್ಲಿ ಅಂದಾಜು 108 ಔಷಧೀಯ ಗುಣಗಳಿವೆ. ಈ ಕಾರಣದಿಂದಲೇ ನಮ್ಮ ಪೂರ್ವಜರು ಈ ಸಾಲಿಗ್ರಾಮ ಶಿಲೆಗಳಲ್ಲಿ ದೇವರ ಮೂರ್ತಿಗಳನ್ನು ಕೆತ್ತಿ ಪೂಜೆ ಮಾಡುತ್ತಿದ್ದರು. ಈ ಮೂರ್ತಿಗಳಿಗೆ ಅಭಿಷೇಕ ಮಾಡಿರುವ ನೀರನ್ನು ತೀರ್ಥ ರೂಪದಲ್ಲಿ ಸೇವಿಸುತ್ತಿದ್ದರು. ಅಲ್ಲದೆ, ಇದರಲ್ಲಿ ಅನೇಕ ಔಷಧೀಯ ಗುಣಗಳಿವೆ ಎನ್ನುತ್ತಾರೆ ವಿಧ್ವಾಂಸರು.

ದೈವ ಶಕ್ತಿಯಿದೆ: ಗಾಢವಾದ ಕಪ್ಪು ಬಣ್ಣ ಹಾಗೂ ನುಣಾಪದ ಕಲ್ಲಿನ ರೂಪದಲ್ಲಿ ಸಾಲಿಗ್ರಾಮ ಇರುತ್ತದೆ. ಇದರಲ್ಲಿ ದೈವಿಶಕ್ತಿ ಹೊಂದಿರುವ ಸಾಲಿಗ್ರಾಮವನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡಿದರೆ ಒಳ್ಳಯದು ಆಗಲಿದೆ ಎಂಬ ನಂಬಿಕೆಯಿದೆ. ಕೇರಳದ ಅನಂತಪದ್ಮನಾಭಸ್ವಾಮಿ ವಿಗ್ರಹವು ಅಂದಾಜು 10,008 ಸಣ್ಣ ಸಾಲಿಗ್ರಾಮಗಳಿಂದ ಶರ್ಕರ ಪಾಕ ವಿಧಾನದಿಂದ ಒಂದಕ್ಕೊಂದು ಜೋಡಿಸಿ ತಯಾರಿಸಿರುವ ವಿಗ್ರಹವಾಗಿದೆ. ತಿರುಪತಿಯ ವೆಂಕಟೇಶ್ವರ ಸ್ವಾಮಿಯ ಮೂಲ ವಿಗ್ರಹವು ಸಾಲಿಗ್ರಾಮ ಶಿಲೆಯದೇ ಎಂದು ಹೇಳಲಾಗುತ್ತಿದೆ.

ಪುರಿ ಜಗನ್ನಾಥ ದೇವರ ಮರದ ಮೂರ್ತಿಯಲ್ಲಿ ಸಣ್ಣ ಸಾಲಿಗ್ರಾಮವನ್ನು ಪ್ರತಿಷ್ಠಾಪಿಸದಾಗಲೇ ಆ ಜಗನ್ನಾತ ಮೂರ್ತಿಯಲ್ಲಿ ದೇವರ ಶಕ್ತಿ ಉಂಟಾಗುತ್ತದೆ ಎಂಬ ನಂಬಿಕೆ ಇದೆ. ಭಾರತದ ಹಲವಾರು ಪ್ರಾಚೀನ ದೇವಾಲಯಗಳಲ್ಲಿ ಮೂಲ ವಿಗ್ರಹಗಳು ಸಾಲಿಗ್ರಾಮ ಶಿಲೆಯಿಂದಲೇ ತಯಾರಾಗಿದೆ.

ಹಿಂದೂ ಧರ್ಮದ ಪ್ರಕಾರ ಯಾವುದೇ ಮೂಲ ದೇವರ ದೇವಸ್ಥಾನದಲ್ಲೂ ಅದು ಶಿವ, ವಿಷ್ಣುವಿನ ದೇವಸ್ಥಾನ, ಇತರ ದೇವಿಯ ದೇವಸ್ಥಾನಗಳಾದರೂ 12 ಸಾಲಿಗ್ರಾಮಗಳು ಆ ದೇವಸ್ಥಾನದಲ್ಲಿ ಪೂಜಿಸಲ್ಪಡಬೇಕೆಂಬ ಪದ್ಧತಿ ಜಾರಿಯಲ್ಲಿದೆ. ಆದರೆ, ಶಿವ ಸಾಲಿಗ್ರಾಮ ಮತ್ತು ನಾಗ ಸಾಲಿಗ್ರಾಮ ಅತ್ಯಂತ ಅಪರೂಪದ ಸಾಲಿಗ್ರಾಮಗಳೆಂದು ಧಾರ್ಮಿಕ ಗ್ರಂಥಗಳಲ್ಲಿ ಹೇಳಲ್ಪಟ್ಟಿವೆ.

Facebook Comments