ಹಾವು ಕಚ್ಚಿಸಿಕೊಂಡು ಆಸ್ಪತ್ರೆಗೆ ದಾಖಲಾದ ಸಲ್ಮಾನ್ ಖಾನ್‍..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಡಿ.26- ಬಾಲಿವುಡ್‍ನ ಆ್ಯಂಗ್ರಿ ಯಂಗ್‍ಮನ್ ಸಲ್ಮಾನ್ ಖಾನ್‍ಗೆ ಹಾವು ಕಚ್ಚಿ ಕೆಲ ಕಾಲ ಆತಂಕ ಸೃಷ್ಟಿಯಾದ ಘಟನೆ ನಡೆದಿದೆ.
ತಮ್ಮ ಫಾರ್ಮ್ ಹೌಸ್‍ನಲ್ಲಿ ಅವರಿಗೆ ಹಾವು ಕಚ್ಚಿತ್ತು. ತಕ್ಷಣ ಅವರ ನೆರವಿಗೆ ಕೂಗಿಕೊಂಡಾಗ ಅಲ್ಲಿದ್ದ ನೌಕರರು ಪ್ರಾಥಮಿಕ ಚಿಕಿತ್ಸೆ ನೀಡಿದ ಕೂಡಲೇ ಆಸ್ಪತ್ರೆಗೆ ಕರೆದೊಯ್ದುರು.

ಕಚ್ಚಿದ ಹಾವು ಹೆಚ್ಚು ವಿಷಕಾರಿಯಾಗದ ಕಾರಣ ಅಪಾಯದಿಂದ ಅವರು ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದು, ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಖಾನ್ ಆಪ್ತ ಮೂಲಗಳು ತಿಳಿಸಿವೆ.ವಿಷಯ ತಿಳಿದು ಬಾಲಿವುಡ್‍ನ ನಟ-ನಟಿಯರು ಗಾಬರಿಗೊಂಡಿದ್ದು, ಫೋನ್ ಕರೆ ಮಾಡಿ ಅವರ ಆರೋಗ್ಯ ವಿಚಾರಿಸಿದ್ದಾರೆ.

ಕೆಲ ದಿನ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚನೆ ನೀಡಿರುವುದರಿಂದ, ಒಂದು ವಾರದ ಕಾಲ ಚಿತ್ರೀಕರಣಕ್ಕೆ ಸಲ್ಮಾನ್ ಅವರು ಗೈರು ಹಾಜರಾಗಲಿದ್ದಾರೆ ಎಂದು ಹೇಳಲಾಗಿದೆ.

Facebook Comments

Sri Raghav

Admin