ಮೋದಿ ಟೀಮ್‌ಗೆ ಶುಭಾಶಯ ಕೋರಿದ ಭಾಯಿಜಾನ್

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಜೂ.3 – ಪ್ರಧಾನಿ ನರೇಂದ್ರ ಮೋದಿಯ ಸಂಪುಟವು ಸದೃಢವಾಗಿದ್ದು ದೇಶವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಭರವಸೆ ಇದೆ ಎಂದು ಬಾಲಿವುಡ್‍ನ ಖ್ಯಾತ ನಟ ಸಲ್ಮಾನ್ ಖಾನ್ ತಿಳಿಸಿದ್ದಾರೆ.

ಎರಡನೆ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದ ನರೇಂದ್ರ ಮೋದಿಯನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ ನಂತರ, ಸಲ್ಮಾನ್‍ಖಾನ್ ನಂತರ ತಮ್ಮ ಟ್ವಿಟ್ಟರ್‍ನಲ್ಲಿ ಮೋದಿ ಸಂಪುಟದ ಎಲ್ಲ ಸಚಿವರಿಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಪ್ರಧಾನಿಯಾಗಿ ಮೋದಿ ಅವರು ಅಧಿಕಾರ ಸ್ವೀಕರಿಸಿದ ಸಮಾರಂಭದಲ್ಲಿ ಬಾಲಿವುಡ್ ಕಲಾವಿದರಾದ ಶಾಹಿದ್ ಕಪೂರ್, ಕಂಗನಾ ರನಾವತ್, ಕರಣ್ ಜೋಹಾರ್ ಅವರು ಪಾಲ್ಗೊಂಡಿದ್ದರು. ಮೋದಿಯ ಆದರ್ಶಗಳನ್ನು ಮೆಚ್ಚಿ ಕೊಂಡಾಡಿರುವ ಸಲ್ಮಾನ್‍ಖಾನ್ ಲೋಕಸಭೆ ಫಲಿತಾಂಶ ಬಂದ ವೇಳೆಯು ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ್ದರು.

ಚುನಾವಣೆಯ ವೇಳೆ ನರೇಂದ್ರ ಮೋದಿ ಕೂಡ ಟ್ವಿಟ್ ಮಾಡಿ, ಮತದಾನ ಮಾಡುವುದು ಎಲ್ಲರ ಹಕ್ಕು, ಪ್ರೀತಿಯ ಸಲ್ಮಾನ್ ಹಾಗೂ ಅಮೀರ್‍ಖಾನ್ ಅವರು ಮತದಾರರಲ್ಲಿ ತಮ್ಮ ಆದ ಶೈಲಿಯಲ್ಲಿ (ಅಂದಾಜ್) ಮತದಾನದ ಜಾಗೃತಿ ಮೂಡಿಸುವ ಮೂಲಕ ನಮ್ಮ (ಅಪ್ನಾ) ದೇಶದ ಪ್ರಜಾಪ್ರಭುತ್ವವನ್ನು ಬಲಿಷ್ಠಗೊಳಿಸಿ ಎಂದು ಹೇಳಿದ್ದರು.

2014 ರಿಂದಲೂ ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ಸಲ್ಮಾನ್‍ಖಾನ್ ಹಲವು ಬಿಜೆಪಿ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ