ಶಾರೂಕ್‍ ಮನೆಗೆ ನಟ ಸಲ್ಮಾನ್ ಭೇಟಿ, ವಿಚಾರಣೆ ವೇಳೆ ಆರ್ಯನ್ ಕಣ್ಣೀರು..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಅ.4- ಅಚ್ಚರಿಯ ಬೆಳವಣಿಗೆಯಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಸೂಪರ್‍ ಸ್ಟಾರ್ ಶಾರೂಕ್‍ಖಾನ್ ಅವರ ಮನೆಗೆ ಭೇಟಿ ನೀಡಿ ಬೆಂಬಲ ವ್ಯಕ್ತ ಪಡಿಸಿದ್ದಾರೆ. ಈ ನಡುವೆ ಎನ್‍ಸಿಬಿ ಅಧಿಕಾರಿಗಳ ವಿಚಾರಣೆ ವೇಳೆ ಆರ್ಯನ್ ಕಣ್ಣೀರು ಸುರಿಸಿದ್ದಾನೆ. ಸಮುದ್ರದ ನಡುವಿನ ರೇವ್ ಪಾರ್ಟಿ ಮತ್ತು ಅಲ್ಲಿ ಬಳಕೆ ಮಾಡಲು ಸಂಗ್ರಹಿಸಲಾಗಿದ್ದ ಮಾದಕ ವಸ್ತುಗಳ ಕಾರಣಕ್ಕೆ ರಾಷ್ಟ್ರೀಯ ಮಾದಕ ವಸ್ತುಗಳ ನಿಗ್ರಹ ಸಂಸ್ಥೆ ಎನ್‍ಸಿಬಿ ನಿನ್ನೆ ಶಾರೂಕ್ ಖಾನ್ ಅವರ ಪುತ್ರ ಆರ್ಯನ್‍ಖಾನ್‍ನನ್ನು ಬಂಧಿಸಿದೆ.

ಈ ಹಿನ್ನೆಲೆಯಲ್ಲಿ ಇಂದು ಸಲ್ಮಾನ್ ಖಾನ್ ಬೆಳಗ್ಗೆ ಶಾರೂಕ್ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಟೈಗರ್ 3 ಚಿತ್ರದ ಚಿತ್ರಿಕರಣಕ್ಕಾಗಿ ಸುದೀರ್ಘ ಕಾಲ ಆಸ್ಟ್ರೇಲಿಯಾದಲ್ಲಿದ್ದ ಸಲ್ಮಾನ್ ಖಾನ್ ಭಾರತಕ್ಕೆ ಮರಳಿ ತಕ್ಷಣವೇ ಶಾರೂಕ್ ಮನೆಗೆ ಭೇಟಿ ನೀಡಿದ್ದಾರೆ. ನಿನ್ನೆ ಎನ್‍ಸಿಬಿ ಅಧಿಕಾರಿಗಳು ಆರ್ಯನ್ ಖಾನ್ ಸೇರಿದಂತೆ 8 ಮಂದಿಯನ್ನು ಬಂಧಿಸಿದ್ದರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಅವರನ್ನು ಅಕ್ಟೋಬರ್ 4ರವರೆಗೂ ಹೆಚ್ಚಿನ ವಿಚಾರಣೆಗಾಗಿ ಎನ್‍ಸಿವಿ ವಶಕ್ಕೆ ನೀಡಲಾಗಿದೆ.

ಈ ನಡುವೆ ವಿಚಾರಣೆ ವೇಳೆ ಆರ್ಯನ್ ಕಣ್ಣೀರು ಸುರಿಸಿದ್ದಾನೆ. ನಾನು ಯಾವುದೇ ಮಾದಕ ವಸ್ತುಗಳನ್ನು ಖರೀದಿ ಮಾಡಿಲ್ಲ ಮತ್ತು ಹಗಡಿನಲ್ಲಿ ಪ್ರಯಾಣ ಮಾಡಲು ಹಣ ಪಾವತಿ ಮಾಡಿಲ್ಲ. ನನ್ನನ್ನು ಅತಿಥಿಯನ್ನಾಗಿ ಆಹ್ವಾನ ಮಾಡಲಾಗಿತ್ತು. ನಾನು ಅತಿಥಿಯಾಗಿ ಭಾಗವಹಿಸಿದ್ದೆ ಅಷ್ಟೆ ಎಂದು ಲಿಖಿತ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.

ಆದರೆ ಹೆಚ್ಚಿನ ಮಾಹಿತಿ ಕೆದಕಿರುವ ಎನ್‍ಸಿಬಿ ಅಧಿಕಾರಿಗಳು ಮಹತ್ವದ ವಿಷಯಗಳನ್ನು ಕಲೆ ಹಾಕಿದ್ದಾರೆ ಎನ್ನಲಾಗಿದೆ. ಆರ್ಯನ್ ಕಳೆದ ನಾಲ್ಕು ವರ್ಷಗಳಿಂದಲೂ ಮಾದಕ ವ್ಯಸನಿಯಾಗಿದ್ದ. ಮಾದಕ ವಸ್ತುಗಳನ್ನು ತೆಗೆದುಕೊಳ್ಳಲಿಕ್ಕಾಗಿಯೇ ಆತ ಇಂಗ್ಲೆಂಡ್, ದುಬೈ ಮತ್ತು ಇತರ ದೇಶಗಳಿಗೆ ಪ್ರಯಾಣ ಮಾಡಿದ್ದ ಎಂದು ಹೇಳಲಾಗಿದೆ.

Facebook Comments