ಕೃಷ್ಣಮೃಗ ಬೇಟೆ ಪ್ರಕರಣ : ಕೋರ್ಟ್‍ಗೆ ಸಲ್ಲು ಚಕ್ಕರ್

ಈ ಸುದ್ದಿಯನ್ನು ಶೇರ್ ಮಾಡಿ

ಜೋಧ್‍ಪುರ್, ಸೆ.27- ಕೃಷ್ಣಮೃಗ ಕೊಂದ ಸಂಬಂಧ ಇಂದು ಇಲ್ಲಿನ ಸೆಷನ್ ಕೋರ್ಟ್‍ನಲ್ಲಿ ನಡೆದ ವಿಚಾರಣೆಗೆ ಬಾಲಿವುಡ್‍ನ ಸ್ಟಾರ್ ಸಲ್ಮಾನ್‍ಖಾನ್ ಚಕ್ಕರ್ ಹಾಕಿದ್ದಾರೆ.
ಸಲ್ಮಾನ್‍ಖಾನ್‍ಗೆ ಇತ್ತೀಚೆಗೆ ಭಿಸ್‍ನೋಯ್ ಕಮಿಟಿಯಿಂದ ಕೊಲೆ ಬೆದರಿಕೆಯ ಸಂದೇಶಗಳು ಬಂದಿದ್ದರಿಂದ ಸೂಕ್ತ ಬಂದೋ ಬಸ್ತ್ ಇಲ್ಲದ ಕಾರಣ ಕೋರ್ಟ್ ಗೆ ಗೈರಾಗಿ ದ್ದಾರೆಂದು ಸಲ್ಮಾನ್‍ಖಾನ್ ಪರ ವಕೀಲರು ಕೋರ್ಟ್‍ಗೆ ವರದಿ ಸಲ್ಲಿಸಿರುವುದರಿಂದ ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್ 19ಕ್ಕೆ ಮುಂದೂಡಲಾಗಿದೆ.

ಬಾಲಿವುಡ್‍ನ ಸೂಪರ್ ಹಿಟ್ ಚಿತ್ರ ಹಮ್ ಸಾಥ್ ಸಾಥ್ ಹೈ ಚಿತ್ರೀಕರಣದ ಸಂದರ್ಭದ ವೇಳೆ ಸಲ್ಮಾನ್‍ಖಾನ್ ಸೇರಿದಂತೆ ಸಹನಟರು ಕೃಷ್ಣಮೃಗವನ್ನು ಬೇಟೆಯಾಡಿದ ವಿಚಾರದಲ್ಲಿ ಸಲ್ಲುಗೆ 5 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿಲಾಗಿತ್ತು. ನಂತರ ಸೆಷನ್ ಕೋರ್ಟ್‍ನಲ್ಲಿ ಮೇನಲ್ಲಿ ಬೇಲ್ ಪಡೆದಿದ್ದರು.

ಸೆಷನ್ ಕೋರ್ಟ್‍ನ ಜಡ್ಜ್ ಚಂದ್ರಕುಮಾರ್ ಸೋನ್‍ಗರಾ ಅವರು ಸೆಪ್ಟೆಂಬರ್ 27 ರಂದು ವಿಚಾರಣೆಗೆ ಹಾಜರಾಗಬೇಕೆಂದು ಆದೇಶಿಸಿದ್ದರಾದರೂ ಇಂದಿನ ವಿಚಾರಣೆಗೆ ಬಾಲಿವುಡ್‍ನ ಬ್ಯಾಡ್‍ಬಾಯ್ ಗೈರಾಗಿದ್ದರು.

Facebook Comments