ಕೊರೊನಾ ಸೋಂಕು : ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರ ಆಸ್ಪತ್ರೆಯಿಂದ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.9- ಕೊರೊನಾ ಸೋಂಕು ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿಜೆಪಿ ನಾಯಕ ಹಾಗೂ ಪಕ್ಷದ ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.  ದೆ

ಹಲಿ ಆಸ್ಪತ್ರೆಯಿಂದ ಬಿಡುಗಡೆಗೊಂಡ ನಂತರ ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇಂದು ಬೆಳಗ್ಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದೇನೆ.

ಆದರೆ ಸಂಪೂರ್ಣವಾಗಿ ಗುಣಮುಖವಾಗಿಲ್ಲ. ಇನ್ನು ಕೆಲವು ದಿನಗಳ ಕಾಲ ಮನೆಯಲ್ಲಿಯೇ ಇರಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಮನೆಗೆ ಮರಳಿದ್ದೇನೆ. ಎಲ್ಲರ ಹಾರೈಕೆಗೆ ಧನ್ಯಾವಾದಗಳು. ಸಂಪೂರ್ಣ ಗುಣಮುಖವಾಗಲು ಸ್ವಲ್ಪ ಸಮಯ ಬೇಕಾಗಿದೆ ಎಂದು ಟ್ವಿಟ್‍ನಲ್ಲಿ ಹೇಳಿದ್ದಾರೆ.

ಕೊರೊನಾ ಸೋಂಕು ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಸಂಬೀತ್ ಪಾತ್ರ ಅವರನ್ನು ಚಿಕಿತ್ಸೆಗೊಳಪಡುವಂತೆ ವೈದ್ಯರು ಸೂಚಿಸಿದ ಮೇರೆಗೆ ಕಳೆದ ಎರಡುವಾರಗಳ ಹಿಂದೆ ಗುರುಗಾಂವ್‍ನ ಮೆದಂತ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಬೇಗ ಗುಣಮುಖರಾಗಲಿ ಎಂದು ಜ್ಯೋತಿರಾಧಿತ್ಯ ಸಿಂಧೆ ಸೇರಿದಂತೆ ಬಿಜೆಪಿಯ ಹಲವು ನಾಯಕರು ಹಾರೈಸಿದ್ದರು.

Facebook Comments