ತಲೆಮರೆಸಿಕೊಂಡ ಸಂಪತ್ ರಾಜ್ ವಿರುದ್ದ ಲುಕ್ ಔಟ್ ನೋಟಿಸ್ ಜಾರಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.13- ರಾಜಧಾನಿ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ಕೆ.ಜಿ. ಹಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿಯಾಗಿ ಪೊಲೀಸರಿಗೆ ಶರಣಾಗದೆ ಸದ್ಯ ತಲೆಮರೆಸಿಕೊಂಡಿರುವ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ವಿರುದ್ದ ರಾಜ್ಯ ಸರ್ಕಾರ  ಲುಕ್ ಔಟ್ ನೋಟಿಸ್ ಜಾರಿ ಮಾಡಿದೆ. ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆಯಿರುವ ಕಾರಣ ಸರ್ಕಾರ ಲುಕ್ ಔಟ್ ನೋಟೀಸ್ ಜಾರಿ ಮಾಡಿ ಗೃಹ ಇಲಾಖೆ ಆದೇಶ ಹೊರಡಿಸಿದೆ.

ಇದೀಹ ಲುಕ್ ಔಟ್ ನೋಟೀಸ್ ಜಾರಿಯಾಗಿರುವ ಕಾರಣ,ವಿಮಾನ ನಿಲ್ದಾಣ, ಬಂದರು ಸೇರಿದಂತೆ ಯಾವುದೇ ಸ್ಥಳದಲ್ಲಿ ಪತ್ತೆಯಾದರೆ ಅವರನ್ನು ತಕ್ಷಣವೇ ಬಂಧಿಸಲು ಕಾನೂನಿನಲ್ಲಿ ಅವಕಾಶವಿದೆ. ಈ ನಡುವೆ ಮೈಸೂರು, ನಾಗರಹೊಳೆ, ತಮಿಳುನಾಡು, ಕೇರಳ ಸೇರಿ ಮುಂಬೈನಲ್ಲೂ ಸಿಸಿಬಿ ಹುಡುಕಾಡುತ್ತಿದೆ. ಆದರೆ ಪೊಲೀಸರಿಗೆ ಇನ್ನೂ ಸಂಪತ್ ರಾಜ್ ಎಲ್ಲಿದ್ದಾರೆ ಅನ್ನೋ ಮಾಹಿತಿ ಸಿಕ್ಕಿಲ್ಲ.

ಸಂಪತ್ ರಾಜ್ ಜವಾಬ್ದಾರಿಯುತ ನಾಗರಿಕನಾಗಿ ಬಂದು ಶರಣಾಗಬೇಕೆಂದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ. ಅವರಿಂದ ಸಾಕಷ್ಟು ಜನರಿಗೆ ತೊಂದರೆ ಉಂಟಾಗಿದೆ. ಸಾರ್ವಜನಿಕರ ಆಸ್ತಿಪಾಸ್ತಿ ಹಾಳಾಗಿದೆ. ಸಂಪತ್ ರಾಜ್ ವಿದೇಶಕ್ಕೆ ಹೋಗಲು ಸಾಧ್ಯವಿಲ್ಲ. ಅವರ ವಿರುದ್ದ ಲುಕ್ ಔಟ್ ನೊಟೀಸ್ ಹೊರಡಿಸಲಾಗಿದೆ ಇನ್ನು ಟೆಕ್ನಿಕಲ್ ಜಾಣ ನಡೆ ಇಟ್ಟಿರುವ ಸಂಪತ್ ರಾಜ್ ಫೋನ್ ಬಳಸದೆ, ಯಾರನ್ನೂ ಸಂಪರ್ಕಿಸದೆ ಅಜ್ಞಾತವಾಗಿದ್ದುಕೊಂಡು ಪೊಲೀಸರಿಗೆ ಚಳ್ಳೆಹಣ್ಷು ತಿನ್ನಿಸುತ್ತಿದ್ದಾರೆ.

ಅವರನ್ನು ಪತ್ತೆ ಹಚ್ಚಲು ನಾಲ್ಕೈದು ವಿಶೇಷ ತಂಡ ರಚಿಸಲಾಗಿದೆ. ಇನ್ನು ಟೆಕ್ನಿಕಲ್ ಜಾಣ ನಡೆ ಇಟ್ಟಿರುವ ಸಂಪತ್ ರಾಜ್ ಫೋನ್ ಬಳಸದೆ, ಯಾರನ್ನೂ ಸಂಪರ್ಕಿಸದೆ ಅಜ್ಞಾತವಾಗಿದ್ದುಕೊಂಡು ಪೊಲೀಸರಿಗೆ ಚೆಳ್ಳೆಹಣ್ಷು ತಿನ್ನಿಸುತ್ತಿದ್ದಾರೆ. ಪತ್ನಿ ಹಾಗು ಕುಟುಂಬಸ್ಥರ ಮೊಬೈಲ್ ಗಳೇ ಸ್ವಿಚ್ಡ್ ಆಪ್ ಆಗಿದ್ದು, ಸಂಪತ್ ರಾಜ್ ಅಲ್ಲದೆ ಸಂಬಂಧಿಕರ ಫೋನ್ಗೂ ಕರೆ ಬಂದಿಲ್ಲ.

ಅತ್ತ ಮಾಜಿ ಕಾಪೆರ್ರೇಟರ್ ಝಾಕೀರ್ ಮತ್ತು ಸಹೋದರನು ಸಹ ಎಸ್ಕೇಪ್ ಆಗಿದ್ದು, ಅವರನ್ನು ಹುಡುಕಲಾಗುತ್ತಿದೆ. ಅವರೂ ಸಹ ಫೋನ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾರೆ. ಸಂಬಂಧಿಕರ ಕೆಲ ಫೋನ್ ಟ್ರ್ಯಾಕ್ ಮಾಡಲಾಗುತ್ತಿದೆ. ಏನೇ ಆಗಲಿ ಶತಾಯ ಗತಾಯ ಬಂಧಿಸಲೇಬೇಕು ಎಂದು ಪೊಲೀಸರು ಸಾಕಷ್ಟು ಪ್ರಯತ್ನ ಮಾಡುತ್ತಿದ್ದರೂ ನಿರೀಕ್ಷಣಾ ಜಾಮೀನು ಸಿಕ್ಕರೆ ಸಾಕು ಎಂದು ಸಂಪತ್ ರಾಜ್ ತಲೆಮರೆಸಿಕೊಂಡಿದ್ದಾರೆ.

ಸಂಪತ್ ರಾಜ್ ಸಿಸಿಬಿ ಬಲೆಗೆ ಬೀಳದೇ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದ್ದಾರೆ. ಮತ್ತೊಂದೆಡೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೂಡ ಸಂಪತ್ ರಾಜ್ನನ್ನು ಆದಷ್ಟು ಬೇಗ ಬಂಧಿಸುವಂತೆ ತನಿಖಾ ತಂಡಕ್ಕೆ ಸೂಚಿಸಿದ್ದಾರೆ.

ಸಿಸಿಬಿ ಪೊಲೀಸರು ಟೆಕ್ನಿಕಲ್ ಆಧಾರದ ಮೇರೆಗೆ ತನಿಖೆಗೆ ಮುಂದಾಗಿದ್ರು ಕೂಡ ಯಾವುದೇ ಪ್ರಯೋಜನವಾಗುತ್ತಿಲ್ಲ. ಕಾರಣ, ಸಂಪತ್ ಯಾವುದೇ ಮೊಬೈಲ್ ಬಳಸುತ್ತಿಲ್ಲ ಮತ್ತು ತನ್ನ ಬ್ಯಾಂಕ್ ಖಾತೆಯಿಂದ ಹಣ ಪಡೆಯುವುದಾಗಲಿ ಅಥವಾ ಇನ್ಯಾವುದೇ ವ್ಯವಹಾರ ಕೂಡ ಮಾಡದೇ ಇರುವುದು ಪತ್ತೆ ಕಾರ್ಯಕ್ಕೆ ಅಡ್ಡಿಯಾಗಿದೆ ಎನ್ನಲಾಗ್ತಿದೆ.

ಈಗಾಗಲೇ ಗಲಭೆ ಪ್ರಕರಣ ಸಂಬಂಧ ಪ್ರಾಥಮಿಕ ದೋಷಾರೋಪ ಪಟ್ಟಿ ಸಲ್ಲಿಸಿರುವ, ಅದರಲ್ಲಿ ಸ್ಪಷ್ಟವಾಗಿ ಸಂಪತ್ ರಾಜ್ ಪಾತ್ರದ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಹೀಗಾಗಿ ಸಂಪತ್ನನ್ನು ಬಂಧಿಸಿ ವಿಚಾರಣೆ ನಡೆಸೋದು ಅನಿವಾರ್ಯವಾಗಿದೆ.

Facebook Comments