ಕೊರೊನಾ ವಾರಿಯರ್ಸ್‍ಗೆ ಬೇರೆ ಆಸ್ಪತ್ರೆ ಇದ್ದರೆ ಒಳಿತು : ಸಂಪತ್‍ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.6- ಕೊರೊನಾ ವಾರಿಯರ್ಸ್‍ಗೆ ಬೇರೊಂದು ಆಸ್ಪತ್ರೆ ಇದ್ದರೆ ಉತ್ತಮ ಎಂದು ಮಾಜಿ ಮೇಯರ್ ಸಂಪತ್‍ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಪಾಲಿಕೆ ವಿಶೇಷ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜೆಸಿಗಳಿಗೆ ನೂರು ಸಲ ಕರೆ ಮಾಡಬೇಕು. ಅಧಿಕಾರಿಗಳು ಸುಸ್ತಾಗಿದ್ದಾರೆ, ಜನ ಕೂಡ ಒತ್ತಡ ಹಾಕುತ್ತಿದ್ದಾರೆ. ರಿಪೋರ್ಟ್ ಬರುವ ಒಳಗೆ ಉಸಿರಾಟದ ತೊಂದರೆಯಾಗುತ್ತಿದೆ. ಟೆಸ್ಟಿಂಗ್ ಆದ ತಕ್ಷಣ ರಿಪೋರ್ಟ್ ನೀಡಿದರೆ ಚಿಕಿತ್ಸೆ ಸಿಗುತ್ತದೆ ಎಂದು ಹೇಳಿದರು.

ಸ್ಮಶಾನದಲ್ಲಿ ಗುಂಡಿ ಅಗೆಯಲು ಯಾರೂ ಬರುತ್ತಿಲ್ಲ. ಟ್ಯಾನಿ ರಸ್ತೆಯಲ್ಲಿರುವ ಸ್ಮಶಾನದಲ್ಲಿ ನಿನ್ನೆ ಮೂರು ಶವ ಬಂದಿತ್ತು. ಆದರೆ, ಯಾರೊಬ್ಬರೂ ಗುಂಡಿ ಅಗೆಯಲು ಬರಲಿಲ್ಲ ಎಂದು ವಿಷಾದಿಸಿದ ಅವರು, ಈ ರೀತಿಯ ಸಮಸ್ಯೆ ತುಂಬಾ ಕಡೆ ಆಗುತ್ತಿದೆ. ಇದರ ಬಗ್ಗೆ ಗಮನ ಹರಿಸಬೇಕೆಂದು ಮನವಿ ಮಾಡಿದರು.

ಒಬ್ಬ ವ್ಯಕ್ತಿ ಕಳೆದ 10 ದಿನಗಳ ಹಿಂದೆ ಕೋವಿಡ್‍ನಿಂದ ಸಾವನ್ನಪ್ಪಿದ್ದರು. ಆ ವ್ಯಕ್ತಿಯ ಕುಟುಂಬವನ್ನು ಕ್ವಾರಂಟೈನ್ ಮಾಡಲಾಗಿತ್ತು. ಕಳೆದ 10 ದಿನಗಳಿಂದಲೂ ಯಾರೂ ಹೋಗಿ ಟೆ¸್ಟï ಮಾಡಿಲ್ಲ. ಇದರ ಬಗ್ಗೆಯೂ ಗಮನ ಹರಿಸಿ ಎಂದು ಮೇಯರ್‍ಗೆ ಸಲಹೆ ನೀಡಿದರು.

Facebook Comments