ಮರಳಿನಲ್ಲಿ ಅರಳಿತು ಧೂಮಪಾನದ ‘ದುಷ್ಟ ಲೀಲೆ’..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 31- ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಖ್ಯಾತ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಸೃಷ್ಟಿಸಿರುವ ಕಲಾಕೃತಿಯು ಎಲ್ಲರ ಗಮನ ಸೆಳೆದಿದೆ.

ಪ್ರತಿಯೊಂದು ವಿಶಿಷ್ಟ ದಿನಗಳಲ್ಲಿ ಅದಕ್ಕೆ ಸಂಬಂಧಿಸಿದಂತೆ ಮರಳಿನಲ್ಲಿ ತನ್ನದೇ ಆದ ವಿಶಿಷ್ಟ ರೂಪವನ್ನು ನಿರ್ಮಿಸುವ ಒಡಿಸ್ಸಾದ ಸುದರ್ಶನ್, ಧೂಮಪಾನದ ದುಷ್ಪರಿಣಾಮಗಳನ್ನು ಮರಳಿನಲ್ಲಿ ಮನಮುಟ್ಟುವಂತೆ ಬಿಂಬಿಸಿದ್ದಾರೆ.

ಧೂಮಪಾನ ಮತ್ತು ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ಅಪಾಯಕಾರಿ ದುಷ್ಪರಿಣಾಮವನ್ನು ಅವರು ಮರಳಿನಲ್ಲಿ ಸೃಷ್ಟಿಸಿ ಸಿಗರೇಟ್‍ನಿಂದ ಶ್ವಾಸಕೋಶಗಳ ಮೇಲೆ ಆಗುವ ಗಂಭೀರ ಹಾನಿಯನ್ನು ಸಚಿತ್ರವಾಗಿ ಬಿಂಬಿಸಿದ್ದಾರೆ.

ಪ್ರಧಾನಿ ನರೇಂದ್ರಮೋದಿ ಅವರು 2ನೆ ಬಾರಿ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ಮುನ್ನ ಒಡಿಸ್ಸಾದ ಕಡಲ ಕಿನಾರೆ ಯಲ್ಲಿ ಅವರು ನಮೋಗೆ ಶುಭ ಕೋರುವ ಉಸುಕು (ಮರಳು) ಕಲಾಕೃತಿ ಎಲ್ಲರ ಗಮನ ಸೆಳೆದಿತ್ತು.

Facebook Comments

Sri Raghav

Admin