ಡ್ರಗ್ ಮಾಫಿಯಾ ಬಗ್ಗೆ ಸ್ಯಾಂಡಲ್‍ವುಡ್ ನಟ-ನಟಿಯರ ಪ್ರತಿಕ್ರಿಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.31- ಸ್ಯಾಂಡಲ್‍ವುಡ್‍ನ ಡ್ರಗ್ ಮಾಫಿಯಾ ಬಗ್ಗೆ ಪತ್ರಕರ್ತ ಇಂದ್ರಜಿತ್ ಲಂಕೇಶ್ ಹೇಳಿಕೆ ಹಿನ್ನೆಲೆಯಲ್ಲಿ ಹಲವು ಪ್ರಖ್ಯಾತ ನಟನಟಿಯರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಡ್ರಗ್ಸ್ ವಿಚಾರ ಸೂಕ್ಷ್ಮವಾಗಿದೆ. ಇಂಡಸ್ಟ್ರಿಯಲ್ಲಿ ಇಂತಹ ವಿಚಾರಗಳ ಬಗ್ಗೆ ತಮಗೆ ಗೊತ್ತಿಲ್ಲ. ಈಗಾಗಲೇ ಕೊರೊನಾ ಹಿನ್ನೆಲೆಯಲ್ಲಿ ಚಿತ್ರರಂಗ ಸಾಕಷ್ಟು ಸಂಕಷ್ಟದಲ್ಲಿದೆ.  ವಿನಾಕಾರಣ ಇಂತಹ ವಿಚಾರಗಳು ಸರಿಯಲ್ಲ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಹೇಳಿದ್ದಾರೆ.

ಇನ್ನು ತನಿಖೆಯಾಗಿಲ್ಲ. ತಪ್ಪಿತಸ್ಥರಿದ್ದಾರೆ. ಪತ್ತೆ ಮಾಡಲಿ. ನನಗೆ ಆ ವಿಷಯ ಗೊತ್ತಿಲ್ಲ. ಅದನ್ನು ನಾನು ಪ್ರಸ್ತಾಪಿಸುವುದಿಲ್ಲ ಎಂದರು.ದಾವಣಗೆರೆಯಲ್ಲಿ ನಟ ದರ್ಶನ್ ಈ ಬಗ್ಗೆ ಪ್ರತಿಕ್ರಿಯಿಸಿ 27 ವರ್ಷಗಳಿಂದ ನಾನು ಚಿತ್ರರಂಗದಲ್ಲಿದ್ದೇನೆ. ಈ ವಿಷಯ ಗೊತ್ತಿಲ್ಲ ಎಂದಿದ್ದಾರೆ.

ಆದರೆ ಚಿರು ಸತ್ತು 3 ತಿಂಗಳಾಗಿದೆ. ಪ್ರೂವ್ ಆದರೆ ಕರೆದುಕೊಂಡು ಬಂದು ಶಿಕ್ಷೆ ಕೊಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಇದು ಚಿತ್ರರಂಗದಲ್ಲಿ ಮಾತ್ರವೇ ಅಲ್ಲ ಎಲ್ಲಾ ಕಡೆ ಇದೆ. ಸುಮ್ಮನೆ ಏಕೆ ಹೀಗೆ ಮಾಡುತ್ತಿದ್ದಾರೆ ಎಂದರು. ನಟ-ನಿರ್ದೇಶಕ ಉಪೇಂದ್ರ ಮಾತನಾಡಿ, ನನಗೆ ಈ ವಿಚಾರದಲ್ಲಿ ಏನಾಗುತ್ತಿದೆ ಗೊತ್ತಾಗುತ್ತಿಲ್ಲ. ತನಿಖೆ ಮಾಡಲಿ . ಆದರೆ ಗೊತ್ತಿಲ್ಲದ ವಿಚಾರ ಕೆದಕುವುದರಲ್ಲಿ ಅರ್ಥವಿಲ್ಲ ಎಂದು ನುಡಿದುರ.

ನಟಿ ರಚಿತಾ ರಾಮ್ ಸಹ ಪ್ರತಿಕ್ರಿಯಿಸಿದ್ದು, ನನಗೂ ಇದಕ್ಕೂ ಸಂಬಂಧವಿಲ್ಲ. ಈ ವಿಚಾರದಲ್ಲಿ ಸಂಬಂಧಪಡವರೂ ಸಹ ಮಾತನಾಡುತ್ತಿದ್ದಾರೆ. ನನಗೆ ಈ ಬಗ್ಗೆ ಪ್ರಸ್ತಾಪ ಮಾಡಲು ಇಷ್ಟವಿಲ್ಲ ಎಂದರು.

ಹಿರಿಯ ನಟಿ ತಾರಾ ಅನುರಾಧ ಮಾತನಾಡಿ, ಈ ಮಟ್ಟದಲ್ಲಿ ಡ್ರಗ್ಸ್ ಚಿತ್ರರಂಗದಲ್ಲಿದೆ ಎಂಬುದು ಗೊತ್ತಿಲ್ಲ. ಯಾಕೆ ಇದನ್ನು ಇಷ್ಟು ದೊಡ್ಡದು ಮಾಡ್ತೀರಾ.. ನಾನು ಇಷ್ಟು ವರ್ಷದಿಂದ ಇಲ್ಲಿದ್ದೇವೆ. ಆದರೆ ತನಿಖೆಯಿಂದ ನಿಜಾಂಶ ಗೊತ್ತಾಗುತ್ತದೆ ಎಂದು ಹೇಳಿದರು.

Facebook Comments