ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಮತ್ತೊಂದು ಬಿಗ್ ಟ್ವಿಸ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.6- ಇತ್ತ ರಾಜ್ಯವನ್ನೇ ಬೆಚ್ಚಿ ಬೀಳಿಸಿರುವ ಡ್ರಗ್ಸ್ ಜಾಲ ಪ್ರಕರಣವನ್ನು ಭೇದಿಸುತ್ತಿರುವ ಸಿಸಿಬಿ ಪೊಲೀಸರು, ಅತ್ತ ಮುಂಬೈನ ಸುಶಾಂತ್ ಆತ್ಮಹತ್ಯೆ ಪ್ರಕರಣದಲ್ಲಿ ಡ್ರಗ್ಸ್ ಲಿಂಕ್ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಎನ್‍ಸಿಬಿ ತನಿಖಾ ತಂಡಕ್ಕೆ ಬಗೆದಷ್ಟೂ ಡ್ರಗ್ಸ್ ಜಾಲ ವಿಸ್ತಾರಗೊಳ್ಳುತ್ತಲೇ ಇದೆ. ಪ್ರಕರಣ ದಿನಕ್ಕೊಂದು, ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ.

ಡ್ರಗ್ಸ್ ಜಾಲದಲ್ಲಿ ಸ್ಯಾಂಡಲ್‍ವುಡ್ ಲಿಂಕ್‍ಗೆ ಸಂಬಂಸಿದಂತೆ ನಟಿಯೊಬ್ಬರನ್ನು ಬಂಸಿ ವಿಚಾರಣೆ ನಡೆಸಲಾಗುತ್ತಿದೆ. ಈ ಬೆನ್ನಲ್ಲೇ ಹಲವು ಪ್ರಭಾವಿಗಳ ಮಕ್ಕಳು, ರಾಜಕಾರಣಿಗಳ ಮಕ್ಕಳ ಹೆಸರು ಕೇಳಿಬರುತ್ತಿದ್ದು, ನೋಟಿಸ್ ನೀಡಲಾಗಿದೆ. ಕಾರ್ಪೊರೇಟರ್ , ಮಾಜಿ ಕಾರ್ಪೊರೇಟರ್ ಗಳು ಹಾಗೂ ಅವರ ಮಕ್ಕಳು ಡ್ರಗ್ಸ್ ಜಾಲದಲ್ಲಿರುವ ಸಂಬಂಧ ಎನ್‍ಸಿಬಿ ನೋಟಿಸ್ ಜಾರಿ ಮಾಡಿದೆ ಎಂದು ಹೇಳಲಾಗಿದ್ದು, ಈಗಾಗಲೇ ವಿಚಾರಣೆಗೆ ಬರುವಂತೆ ನೋಟಿಸ್ ಕೂಡ ನೀಡಿದೆ.

ಕಾರ್ಪೊರೇಟರ್ ಒಬ್ಬರ ಪುತ್ರನಿಗೆ ಮುಂಬೈನ ಎನ್‍ಸಿಬಿ ಕಚೇರಿಯಿಂದ ನೋಟಿಸ್ ಜಾರಿ ಮಾಡಲಾಗಿದೆ ಎನ್ನಲಾಗಿದ್ದು, ಮಾದಕ ದ್ರವ್ಯದ ಬಗ್ಗೆ ಮಾಹಿತಿ ಪಡೆಯುವ ಹಿನ್ನೆಲೆಯಲ್ಲಿ ಎನ್‍ಡಿಪಿಎಸ್ ಕಾಯ್ದೆಯಡಿ ವಿಚಾರಣೆ ನಡೆಸುವ ಸಂಬಂಧ ಈ ನೋಟಿಸ್ ಜಾರಿಗೊಳಿಸಲಾಗಿದೆ ಎನ್ನಲಾಗಿದೆ. ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಎನ್‍ಸಿಬಿ ಮುಂದಾಗಿದೆ ಎಂದು ತಿಳಿದುಬಂದಿದೆ.

ಈ ಪ್ರಕರಣಕ್ಕೆ ಸಂಬಂಸಿದಂತೆ ನಗರದ ಅಲ್ಪಸಂಖ್ಯಾತ ಸಮುದಾಯದ ಕಾರ್ಪೊರೇಟರ್ ಒಬ್ಬರಿಗೂ ಎನ್‍ಸಿಬಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. ಅಲ್ಲದೆ, ಕಾರ್ಪೊರೇಟರ್ ಒಬ್ಬರ ಪುತ್ರ ಕೂಡ ಡ್ರಗ್ಸ್ ದಂಧೆಯಲ್ಲಿ ಪಾಲ್ಗೊಂಡಿದ್ದು, ವಿಚಾರಣೆಗೆ ಹಾಜರಾಗುವಂತೆ ಎನ್‍ಸಿಬಿ ನೋಟಿಸ್ ನೀಡಿದೆ.

ಡ್ರಗ್ಸ್ ಪೆಡ್ಲರ್‍ಗಳ ಜತೆ ನಂಟು ಹೊಂದಿದ್ದ ಹಿನ್ನೆಲೆಯಲ್ಲಿ ಎನ್‍ಸಿಬಿ ನೋಟಿಸ್ ನೀಡಿದ್ದ ಬೆನ್ನಲ್ಲೇ ಕೆಲವೆಡೆ ದಾಳಿ ಕೂಡ ನಡೆಸಿದೆ ಎಂದು ತಿಳಿದುಬಂದಿದೆ. ದಾಳಿ ವೇಳೆ ಹಲವರು ಪರಾರಿಯಾಗಿದ್ದಾರೆ. ಒಟ್ಟಾರೆ ಡ್ರಗ್ಸ್ ಪ್ರಕರಣ ದಿನಕ್ಕೊಂದು, ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ಪ್ರಕರಣದ ಉರುಳು ಯಾರ್ಯಾರ ಕೊರಳಿಗೆ ಸುತ್ತಿಕೊಳ್ಳಲಿದೆಯೋ ಎಂಬ ಆತಂಕ ಎದುರಾಗಿದೆ.

ಚಲನಚಿತ್ರ ನಟ-ನಟಿಯರು, ರಾಜಕಾರಣಿಗಳು, ಸಿರಿವಂತರ ಮಕ್ಕಳು, ಹೈ-ಫೈ ಲೈಫ್ ನಡೆಸುತ್ತಿದ್ದವರು ಈಗ ಡ್ರಗ್ಸ್‍ನ ವಿಚಾರಣಾ ಆತಂಕದಲ್ಲಿದ್ದಾರೆ. ಇಂದು ನಟಿ ರಾಗಿಣಿ ಅವರನ್ನು ವಿಚಾರಣೆಗೊಳಪಡಿಸಿರುವ ಸಿಸಿಬಿ ಅಕಾರಿಗಳು ಪುನಃ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.

ಎನ್‍ಸಿಬಿಗೂ ಹಲವು ಮಾಹಿತಿ ನೀಡಿದ್ದು, ದೇಶವ್ಯಾಪಿ ಇದರ ಜಾಲ ಹರಡಿರುವ ಸಾಧ್ಯತೆಯನ್ನೂ ಕೂಡ ಅಲ್ಲಗಳೆಯುವಂತಿಲ್ಲ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ರಾಗಿಣಿ ಆಪ್ತ ರವಿ ಅವರ ಜತೆ ಗುರುತಿಸಿಕೊಂಡಿದ್ದ ವ್ಯಕ್ತಿಯೊಬ್ಬ ತಾನಾಗಿಯೇ ಸಿಸಿಬಿ ಕಚೇರಿಗೆ ಬಂದು ಹೈಡ್ರಾಮಾ ಸೃಷ್ಟಿಸಿದ್ದಾನೆ.

ಡ್ರಗ್ಸ್ ದಂಧೆಯಲ್ಲಿ ನಾನು ಕೂಡ ಇದ್ದೇನೆ. ನನ್ನನ್ನೂ ವಶಕ್ಕೆ ಪಡೆಯಿರಿ ಎಂದು ಕೆಲ ಹೊತ್ತು ಪೊಲೀಸರ ಮುಂದೆ ಹೇಳುತ್ತಿದ್ದುದು ಅಲ್ಲಿದ್ದವರನ್ನು ಚಕಿತಗೊಳಿಸಿತ್ತು. ಆತನನ್ನು ಸಮಾಧಾನಪಡಿಸಿದ ಕೆಲ ಸಿಬ್ಬಂದಿ ಕೂಲಂಕಶವಾಗಿ ವಿಚಾರಣೆ ನಡೆಸುತ್ತಿದ್ದಾರೆ.

Facebook Comments

Sri Raghav

Admin