ಹಿರಿಯ ಸ್ಯಾಂಡಲ್ವುಡ್ ನಟ ಹುಲಿವಾನ ಗಂಗಾಧರಯ್ಯ ಕೊರೊನಾಗೆ ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.18- ಮಾರಕ ಕೊರೊನಾ ವೈರಾಣುವಿಗೆ ರಂಗಭೂಮಿ ಹಾಗೂ ಖ್ಯಾತ ಹಿರಿಯ ಚಿತ್ರನಟ ಹುಲಿವಾನ ಗಂಗಾಧರಯ್ಯ ಬಲಿಯಾಗಿದ್ದಾರೆ.

ಕಿರುತೆರೆ, ಸಿನಿಮಾ, ರಂಗಭೂಮಿಯಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದ ಗಂಗಾಧರಯ್ಯ ಅವರು ಕೃಷಿಕರಾಗಿಯೂ ಗಮನ ಸೆಳೆದಿದ್ದರು.

70 ವರ್ಷದವರಾದ ಗಂಗಾಧರಯ್ಯ ಅವರಿಗೆ ಇತ್ತಿಚೆಗೆ ಕೊರೊನಾ ವೈರಸ್ ಕಾಣಿಸಿಕೊಂಡಿತ್ತು. ಚಿಕಿತ್ಸೆಗಾಗಿ ಬಿಜಿಎಸ್ ಆಸ್ಪತ್ರೆಗೆ ಸೇರಿದ್ದ ಅವರು ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಕುಣಿಗಲ್ ಸಮೀಪದ ಹುಲಿವಾನದ ತಮ್ಮ ತೋಟದಲ್ಲಿ ತೆಂಗು ಬೆಳೆಯುತ್ತಿದ್ದರೂ ನಾಟಕ, ಚಿತ್ರರಂಗ ಹಾಗೂ ಕಿರುತೆರೆಯಲ್ಲೂ ನಟಿಸುತ್ತಿದ್ದರು.

ಖಾಸಗೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪ್ರೇಮಲೋಕ ಧಾರವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದರು.

ಹಿರಿಯ ಕಲಾವಿದನ ಅಗಲಿಕೆಗೆ ಚಿತ್ರರಂಗ, ದೂರದರ್ಶನ ಹಾಗೂ ರಂಗಭೂಮಿಯ ಪ್ರಮುಖರು ಸಂತಾಪ ವ್ಯಕ್ತಪಡಿಸಿದ್ದಾರೆ

Facebook Comments

Sri Raghav

Admin