ಮ್ಯಾಗ್ಸೆಸ್ಸೆ ಪ್ರಶಸ್ತಿ ವಿಜೇತ ಸಂದೀಪ್ ಬಂಧನ..!

ಈ ಸುದ್ದಿಯನ್ನು ಶೇರ್ ಮಾಡಿ

ಅಯೋಧ್ಯೆ, ಆ.20- ಕಾನೂನು ಮತ್ತು ಸುವ್ಯವಸ್ಥೆ ನಿಯಮಗಳನ್ನು ಉಲ್ಲಂಘಿಸಿ ಶಾಂತಿಗೆ ಭಂಗ ತರುವ ಆತಂಕದಿಂದ ಸಮಾಜ ಸೇವಕ ಮತ್ತು ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕøತ ಸಂದೀಪ್ ಪಾಂಡೆ ಅವರನ್ನು ಉತ್ತರಪ್ರದೇಶದ ಅಯೋಧ್ಯೆಯ ಸ್ಥಳೀಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆ.17 ಮತ್ತು 18 ರಂದು ವಿವಾದಿತ ಸ್ಥಳದ ಬಳಿ ಆಯೋಜಿಸಲಾಗಿದ್ದ ಸದ್ಭಾವನಾ ಸಮ್ಮೇಳನದ ಮುಖ್ಯ ಅತಿಥಿಯಾಗಿ ಸಂದೀಪ್ ಪಾಂಡೆ ಭಾಗವಹಿಸಿದ್ದರು.

ಭದ್ರತಾ ಕಾರಣಗಳಿಂದಾಗಿ ಜಿಲ್ಲಾಡಳಿತ ಸಮ್ಮೇಳನಕ್ಕೆ ಅನುಮತಿಯನ್ನು ನಿರಾಕರಿಸಿ ಪಾಂಡೆ ಅವರನ್ನು ಮತ್ತೆ ಲಖನೌಗೆ ಕಳುಹಿಸಲಾಗಿತ್ತು. ಪಾಂಡೆ ಮತ್ತು ಅವರ ಸಹಚರರು ಪೊಲೀಸರಿಗೆ ಮಾಹಿತಿ ನೀಡದೆ ರಹಸ್ಯವಾಗಿ ಸಮ್ಮೇಳನವನ್ನು ಆಯೋಜಿಸಲು ಪ್ರಯತ್ನಿಸಿದ್ದರು.

ಆದರೆ ಪೊಲೀಸರು ಮಾಹಿತಿ ಪಡೆದು ಪಾಂಡೆ ಅವರನ್ನು ವಶಕ್ಕೆ ತೆಗೆದುಕೊಂಡು ಲಖನೌಗೆ ವಾಪಸ್ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Facebook Comments