ರಾಯಣ್ಣ ಪ್ರತಿಮೆಗೆ ಸಿಎಂ ಮಾಲಾರ್ಪಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.25- ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ 189ನೆ ಸ್ಮರಣೋತ್ಸವದ ಅಂಗವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಾಳೆ ಕೋಡೆ ವೃತ್ತದಲ್ಲಿರುವ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಚಳವಳಿ ಪಕ್ಷದ ನಾಯಕರಾದ ವಾಟಾಳ್ ನಾಗರಾಜ್, ಮೇಯರ್ ಗೌತಮ್‍ಕುಮಾರ್, ಉಪಮೇಯರ್ ಮೋಹನ್‍ರಾಜ್, ಶಾಸಕರಾದ ದಿನೇಶ್ ಗುಂಡೂರಾವ್, ಎಚ್.ಎಂ.ರೇವಣ್ಣ, ಮಾಜಿ ಮೇಯರ್ ಹುಚ್ಚಪ್ಪ, ಬಿಬಿಎಂಪಿ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್, ಆಡಳಿತ ಪಕ್ಷದ ನಾಯಕ ಮುನೀಂದ್ರಕುಮಾರ್, ಬಿಬಿಎಂಪಿ ಸದಸ್ಯೆ ಲತಾ ಕುವರ್ ರಾಥೋಡ್, ಕಮಿಷನರ್ ಅನಿಲ್‍ಕುಮಾರ್, ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮೃತ್‍ರಾಜ್, ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಗೊಳ್ಳಿ ಕೃಷ್ಣಮೂರ್ತಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಇದೇ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘಕ್ಕೆ ಹೊಸದಾಗಿ ಆಯ್ಕೆಯಾಗಿರುವ ನೂತನ ನಿರ್ದೇಶಕರಾದ ಬಳಗಾವಿ, ದೇವರಾಜ್ ಸುಬ್ಬರಾಯಪ್ಪ, ಪರಮೇಶ್ ಕೃಷ್ಣಪ್ಪ, ಕೃಷ್ಣಕುಮಾರ್, ಆಂಜನಪ್ಪ, ಎನ್.ಮಲ್ಲೇಶ್, ಕೆ.ಪಿ.ನಾಗೇಶ್, ಕೆ.ಎಂ.ರಾಮಚಂದ್ರಪ್ಪ, ಡಿ.ವೆಂಕಟೇಶಮೂರ್ತಿ, ಕೆ.ಟಿ.ನಾಗರಾಜ್, ಎಂ.ಎಚ್.ಪ್ರೇಮಲತಾ, ಎಂ.ಶೋಭಾ, ಲಕ್ಷ್ಮಿ ಮತ್ತಿತರರು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದ ಕಾರ್ಯದರ್ಶಿ ಎನ್.ವೆಂಕಟೇಶ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Facebook Comments