ರಾಯಣ್ಣ ಪ್ರತಿಮೆ ವಿಚಾರ : ಕನ್ನಡಿಗರ ಮೇಲೆ ಚಪ್ಪಲಿ ಎಸೆದ ಮರಾಠಿಗರು, ಪೀರನವಾಡಿ ಉದ್ವಿಗ್ನ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.28- ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿಚಾರಕ್ಕೆ ಸಂಬಂಸಿದಂತೆ ಕಿಡಿಗೇಡಿ ಮರಾಠಿಗರು ಕನ್ನಡ ಹೋರಾಟಗಾರರ ಮೇಲೆ ಚಪ್ಪಲಿ ಎಸೆದು ದಾಂಧಲೆ ನಡೆಸಿದ ಹಿನ್ನೆಲೆಯಲ್ಲಿ ಬೆಳಗಾವಿ ತಾಲೂಕಿನ ಪೀರನವಾಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಗೊಂಡಿದ್ದು, ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.

ಪೀರನವಾಡಿಯಲ್ಲಿ ತಡರಾತ್ರಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪಿಸಲಾಗಿದ್ದು; ಇದನ್ನು ವಿರೋಸಿ ಮರಾಠಿ ಯುವಕರು ಬೀದಿಗಿಳಿದು ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆಗೆ ಮುಂದಾದರು. ಈ ವೇಳೆ ಪೊಲೀಸರು ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಕಾರಣ ಲಾಠಿ ಪ್ರಹಾರ ನಡೆಸಿದರು.

# ನಡೆದದ್ದೇನು?:
ಪೀರನವಾಡಿ ವೃತ್ತದಲ್ಲಿ ತೆರವಾಗಿದ್ದ ಸ್ಥಳದಲ್ಲಿಯೇ ಕನ್ನಡಪರ ಸಂಘಟನೆಯವರು ರಾಯಣ್ಣನ ನಿಂತ ಭಂಗಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿದರು. ಈ ವಿಷಯ ತಿಳಿಯುತ್ತಿದ್ದಂತೆ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪಿಸಲು ಕೆಲ ಮರಾಠಿ ಯುವಕರು ಯತ್ನಿಸಿದರು. ಇದಕ್ಕೆ ಪೊಲೀಸರು ವಿರೋಧ ವ್ಯಕ್ತಪಡಿಸಿದರು.

ನಮಗೂ ಶಿವಾಜಿ ಮೂರ್ತಿ ಸ್ಥಾಪಿಸಲು ಅವಕಾಶ ಮಾಡಿ ಕೊಡಿ ಎಂದು ಕ್ಯಾತೆ ತೆಗೆಯುತ್ತ ಸ್ಥಳದಲ್ಲಿ ನೂರಾರು ಮರಾಠಿ ಯುವಕರು ಜಮಾಯಿಸಿದ್ದರು. ರಾಯಣ್ಣರ ಪ್ರತಿಮೆ ನಿರ್ಮಿಸಿದ್ದಕ್ಕೆ ಸ್ಥಳೀಯ ಮರಾಠಿಗರೂ ವಿರೋಸುತ್ತ ಘೋಷಣೆ ಕೂಗುತ್ತಿದ್ದರು.

ರಾಯಣ್ಣ ಪ್ರತಿಮೆ ಬಳಿ ಕನ್ನಡ ಹೋರಾಟಗಾರರೂ ಸೇರಿದ್ದರು. ಈ ವೇಳೆ ಎರಡೂ ಗುಂಪಿನ ನಡುವೆ ವಾಗ್ದಾದ ನಡೆಯಿತು. ಇದೇ ವೇಳೆ ಮರಾಠಿ ಯುವಕರು ಗುಂಪು ಕಟ್ಟಿಕೊಂಡು ಕನ್ನಡಿಗರ ಮೇಲೆ ಚಪ್ಪಲಿ ಎಸೆದು; ದಾಂಧಲೆ ನಡೆಸಿದರು. ಮರಾಠಿ ಪುಂಡರ ಅಟ್ಟಹಾಸ ಮಿತಿ ಮೀರುತ್ತಿದ್ದಂತೆ ಪರಿಸ್ಥಿತಿ ನಿಯಂತ್ರಿಸಲು ಲಾಠಿ ಬೀಸಿದ ಪೊಲೀಸರು ಗುಂಪುಗಳನ್ನು ಚದುರಿಸಿದರು.

# ಭರವಸೆಯ ನಡುವೆಯೂ ಪ್ರತಿಷ್ಠಾಪನೆ:
ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆದಿತ್ತು. ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಆ. 29ರಂದು ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ, ಮಧ್ಯರಾತ್ರಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ.

ಆ. 15ರಂದು ಮೂರ್ತಿ ಪ್ರತಿಷ್ಠಾಪನೆ ಮಾಡಿದಾಗ ಪೊಲೀಸರು ಅದನ್ನು ತೆರವುಗೊಳಿಸಿದ್ದರು. ಹೀಗಾಗಿ ವಿವಾದ ತಾರಕಕ್ಕೇರಿ ರಾಜ್ಯದಲ್ಲಿಯೇ ಚರ್ಚೆಯ ವಿಷಯವಾಗಿತ್ತು. ನಿನ್ನೆಯಷ್ಟೇ ಬೃಹತ್ ಪ್ರತಿಭಟನೆ ನಡೆಸಿ ಪ್ರತಿಭಟನಾಕಾರರು ಗಡುವು ನೀಡಿದ್ದರು. ಆದರೆ, ಗಡುವು ನೀಡಿದ್ದ ಮುಂಚೆಯೇ ಮೂರ್ತಿ ಪ್ರತಿಷ್ಠಾಪಿಸಿ ವಿವಾದ ಮತ್ತಷ್ಟು ತಾರಕ್ಕೇರುವ ಸಾಧ್ಯತೆ ಇದೆ.

# ಬಿಗಿ ಬಂದೋಬಸ್ತ್:
ಪೀರನವಾಡಿಯಲ್ಲಿ ಬಿಗುವಿನ ವಾತಾವರಣವಿದ್ದು, ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಬೆಳಗಾವಿ ಕಮಿಷನರ್ ತ್ಯಾಗರಾಜನ್ ಭೇಟಿ ನೀಡಿದ್ದಾರೆ.

ನಿಮ್ಮ ಬೇಡಿಕೆ ಏನೇ ಇದ್ದರೂ ಕಮಿಷನರ್ ಮತ್ತು ಜಿಲ್ಲಾಕಾರಿಗೆ ಕೇವಲ 5 ಜನರು ಮಾತ್ರ ಬಂದು ಮನವಿ ಸಲ್ಲಿಸಿ. ಇಷ್ಟು ಜನರು ಗುಂಪು ಸೇರುವ ಅವಶ್ಯಕತೆ ಇಲ್ಲ. ಶಾಂತವಾಗಿರಿ ಎಂದು ಹಿರಿಯ ಅಕಾರಿಗಳು ತಿಳಿಸಿದ್ದಾರೆ.

Facebook Comments

Sri Raghav

Admin