ಒಂದೇ ವೇದಿಕೆಯಲ್ಲಿ ಸಿದ್ದರಾಮಯ್ಯ, ಈಶ್ವರಪ್ಪ , ಎಚ್.ವಿಶ್ವನಾಥ್

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಜ.19-ಸದಾ ರಾಜಕೀಯವಾಗಿ ಆರೋಪ-ಪ್ರತ್ಯಾರೋಪ ಮಾಡುತ್ತಿದ್ದ ಸಿದ್ದರಾಮಯ್ಯ, ಈಶ್ವರಪ್ಪ , ಎಚ್.ವಿಶ್ವನಾಥ್ ಮೂವರು ನಾಯಕರು ಒಂದೇ ವೇದಿಕೆಯಲ್ಲಿ ಕುಳಿತು ನಗು ನಗುತ್ತಾ ಸಮಯ ಕಳೆದಿದ್ದು ಗಮನ ಸೆಳೆಯಿತು. ಕೆ.ಆರ್.ನಗರ ತಾಲೂಕಿನ ದೊಡ್ಡಕೊಪ್ಪಲಿನಲ್ಲಿ ನಡೆದ ಸಂಗೊಳ್ಳಿರಾಯಣ್ಣ ಪ್ರತಿಮೆ ಅನಾವರಣ ಸಮಾರಂಭಕ್ಕೆ ಮೂವರು ನಾಯಕರು ಆಗಮಿಸಿದ್ದರು. ಸಿದ್ದರಾಮಯ್ಯ ಅವರ ಎಡ ಮತ್ತು ಬಲಭಾಗದಲ್ಲಿ ಈಶ್ವರಪ್ಪ-ವಿಶ್ವನಾಥ್ ಆಸೀನರಾಗಿದ್ದರು.

ರಾಜಕೀಯವಾಗಿ ಬದ್ಧ ವೈರಿಗಳಾಗಿದ್ದರು. ಅದ್ಯಾವುದನ್ನೂ ತೋರ್ಪಡಿಸಿಕೊಳ್ಳದೆ ಉಭಯ ಕುಶಲೋಪರಿ ವಿಚಾರಿಸಿಕೊಂಡು ಪರಸ್ಪರ ನಗುತ್ತಾ ಮಾತನಾಡಿದರು.  ಮೊದಲು ಈಶ್ವರಪ್ಪನವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಂತರ ವಿಶ್ವನಾಥ್ ಅವರಿಗೆ ಬಿಸ್ಕಟ್ ಕೊಟ್ಟು ಮಾತುಕತೆ ನಡೆಸಿದರು. ಈ ಮೂವರು ಒಂದೇ ವೇದಿಕೆಯಲ್ಲಿ ಒಂದೇ ಕಡೆ ಕುಳಿತಿರುವುದನ್ನು ಕಂಡು ಸಮುದಾಯದವರು ಸಂತಸ ವ್ಯಕ್ತಪಡಿಸಿದರು.

ಇಷ್ಟೇ ಅಲ್ಲ ಸಮಾರಂಭ ಮುಗಿದ ಮೇಲೆ ಸಿದ್ದರಾಮಯ್ಯ, ಈಶ್ವರಪ್ಪ ಒಂದೇ ಕಾರಿನಲ್ಲಿ ತೆರಳಿದಾಗ ಸಮಾರಂಭಕ್ಕೆ ಬಂದಿದ್ದವರೆಲ್ಲ ನಾಯಕರತ್ತ ಕೈಬೀಸಿ ಸಂತಸ ವ್ಯಕ್ತಪಡಿಸಿದರು.
ಮೂವರು ನಾಯಕರು ಆತ್ಮೀಯವಾಗಿ ಸಮಾರಂಭದಲ್ಲಿ ಪಾಲ್ಗೊಂಡಿದ್ದು, ಪರಸ್ಪರ ನಗುನಗುತ್ತಾ ಮಾತನಾಡಿದ್ದು, ಜೊತೆ ಜೊತೆಯಲ್ಲಿಯೇ ತೆರಳಿದ್ದು, ಸಮುದಾಯದವರ ಮೆಚ್ಚುಗೆಗೆ ಪಾತ್ರವಾಯಿತು.

Facebook Comments