ಡಬಲ್ಸ್‌ನಲ್ಲಿ ಟ್ರೋಫಿ ಗೆದ್ದು ಎರಡನೇ ಇನ್ಸಿಂಗ್ಸ್ ಆರಂಭಿಸಿದ ಸಾನಿಯಾ

ಈ ಸುದ್ದಿಯನ್ನು ಶೇರ್ ಮಾಡಿ

ಹೋಬರ್ಟ್, ಜ.18-ಗ್ಲಾಮರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿಜರ್ ಟ್ರೋಫಿಯೊಂದನ್ನು ಗೆಲ್ಲುವ ಮೂಲಕ ತಮ್ಮ ಕ್ರೀಡಾ ವೃತ್ತಿಯ ಎರಡನೇ ಇನ್ಸಿಂಗ್ಸ್ ಅನ್ನು ಭರ್ಜರಿಯಾಗಿ ಆರಂಬಿಸಿದ್ದಾರೆ. ತಸ್ಮೇನಿಯಾ ರಾಜಧಾನಿ ಹೋಬರ್ಟ್‍ನಲ್ಲಿ ನಡೆದ ಅಂತಾರಾಷ್ಟ್ರೀಯ ಪಂದ್ಯಾವಳಿಯ ಮಹಿಳೆಯರ ಡಬಲ್ಸ್‍ನಲ್ಲಿ ಉಕ್ರೇನ್‍ನ ನಾಡಿಯಾ ಕಿಚೆನೋಕ್ ಜೊತೆಗೂಡಿ ಪೈನಲ್‍ನಲ್ಲಿ ಗೆಲುವು ಸಾಧಿಸಿ ಸಾನಿಯಾ ಡಬ್ಲ್ಯುಟಿಎ ಸಕ್ರ್ಯೂಟ್‍ನಲ್ಲಿ ಮತ್ತೆ ಗಲುವಿನ ಅಭಿಯಾನದ ಶುಭಾರಂಭ ಮಾಡಿದರು.

ಸಾನಿಯಾ-ನಾಡಿಯಾ ಜೋಡಿ ಚೀನಾದ ಶೌಯಿ ಪೆಂಗ್ ಮತ್ತು ಶೌಯಿ ಚಾಂಗ್ ಅವರನ್ನು 6-4, 6-4 ರಲ್ಲಿ ಮಣಿಸಿ ಟ್ರೋಪಿಗೆ ಮುತ್ತಿಟ್ಟರು. ಇದು ಮುತ್ತಿನ ನಗರಿಯ 33 ವರ್ಷದ ಗ್ಲಾಮರ್ ಕ್ರೀಡಾ ತಾರೆಗೆ ಎರಡು ವರ್ಷದ ಬಳಿಕ ಲಭಿಸಿದ ದೊಡ್ಡ ಗೆಲುವು.

Facebook Comments