ತುಮಕೂರಲ್ಲಿ ವಿಶ್ವದ ಮೊದಲ ಸೆನ್ಸಾರ್ ಸ್ಯಾನಿಟೈಸರ್ ಎಟಿಎಂ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಮೇ 30- ಕೊರೊನಾ ಮಹಾಮಾರಿಗೆ ಹೆದರಿ ಬ್ಯಾಂಕ್‍ಗಳಿಗೆ ಬರುವ ಜನರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಹಾಗಾಗಿ ಜನರಿಗೆ ಯಾವುದೇ ತೊಂದರೆಯಾಗಬಾರದೆಂಬ ಉದ್ದೇಶದಿಂದ ತುಮಕೂರ ಮರ್ಚೆಂಟ್ಸ್ ಕ್ರೆಡಿಟ್ ಕೋ-ಆಪರೇಟಿವ್ ಮೊಟ್ಟ ಮೊದಲನೇ ಬಾರಿಗೆ ವರ್ಲ್ಡ್ ಫಸ್ಟ್ ಸೆನ್ಸಾರ್ ಸ್ಯಾನಿಟೈಸರ್ ಎಟಿಎಂ ಆರಂಭಿಸಿದೆ.

ನಗರದ ಜೆ.ಸಿ.ರಸ್ತೆಯಲ್ಲಿರುವ ಟಿಎಂಸಿಸಿ ಬ್ಯಾಂಕ್‍ನ ಕೇಂದ್ರ ಕಚೇರಿಯಲ್ಲಿ ಈ ಸೆನ್ಸಾರ್ ಸ್ಯಾನಿಟೈಸರ್ ಎಟಿಎಂ ಕೇಂದ್ರವನ್ನು ಜಿಲ್ಲಾ ಉಸುತಿವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಉದ್ಘಾಟಿಸಿದರು.  ನಂತರ ಮಾತನಾಡಿದ ಅವರು, ಟಿಎಂಸಿಸಿ ಬ್ಯಾಂಕ್ ಹಲವು ತಂತ್ರಜ್ಞಾನಗಳನ್ನು ಬಳಸಿಕೊಂಡು ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುತಿತಿದೆ.

ಕೊರೊನಾ ಸಂಕಷ್ಟದ ಕಾಲದಲ್ಲೂ ಗ್ರಾಹಕರ ಆರೋಗ್ಯ ದೃಷ್ಠಿಯಿಂದ ಸೆನ್ಸಾರ್ ಸ್ಯಾನಿಟೈಸರ್ ಎಟಿಎಂ ಕೇಂದ್ರವನ್ನು ಆರಂಭಿಸುವ ಮೂಲಕ ಮತೊತಿಂದು ಹೊಸ ಹೆಜ್ಜೆ ಇಟ್ಟಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಟಿಎಂಸಿಸಿ ಬ್ಯಾಂಕ್ ಅಧ್ಯಕ್ಷ ಎನ್.ಎಸ್. ಜಯಕುಮಾರ್ ಮಾತನಾಡಿ, ಪ್ರಸುತ್ತ ಕೊರೊನಾ ಸೋಂಕು ಹರಡುವ ಭೀತಿ ಎಲ್ಲೆಡೆ ಆವರಿಸಿರುವುದರಿಂದ ಬ್ಯಾಂಕ್‍ಗಳಿಗೆ ಗ್ರಾಹಕರು ಬರಲು ಬಹಳ ಯೋಚನೆ ಮಾಡುತ್ತಿದ್ದಾರೆ. ಹಾಗಾಗಿ ನಾವು ಹೊಸ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಯಾವುದೇ ಆತಂಕ ಇಲ್ಲದೆ ಗ್ರಾಹಕರು ಎಟಿಎಂಗೆ ಬಂದು ಹಣ ಡ್ರಾ ಮಾಡಿಕೊಂಡು ಹೋಗುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ್ದೇವೆ ಎಂದರು.

ತುಮಕೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಸೆನ್ಸಾರ್ ಸ್ಯಾನಿಟೈಸರ್ ಎಟಿಎಂ ಕೇಂದ್ರವನ್ನು ಟಿಎಂಸಿಸಿ ಆರಂಭಿಸಿದ್ದು, ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

# 27 ಕೋಟಿ ನಿವ್ವಳ ಲಾಭ:
ಕೇವಲ 12 ವರ್ಷದಲ್ಲಿ ಹಲವು ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಗ್ರಾಹಕರಿಗೆ ಬ್ಯಾಂಕ್ ಉತ್ತಮ ಸೇವೆ ಒದಗಿಸುತ್ತಿದೆ. ಮಾರ್ಚ್‍ವರೆಗೆ 15 ಸಾವಿರ ಕೋಟಿ ರೂ. ವರೆಗೆ ವಹಿವಾಟು ನಡೆಸಿದ್ದು, 27 ಕೋಟಿ 62 ಲಕ್ಷ ರೂ. ಬ್ಯಾಂಕ್‍ಗೆ ನಿವ್ವಳ ಲಾಭ ಬಂದಿದೆ ಎಂದರು. ಶಾಸಕ ಜಿ.ಬಿ. ಜ್ಯೋತಿಗಣೇಶ್, ಬ್ಯಾಂಕ್ ಉಪಾಧ್ಯಕ್ಷ ಶ್ರೀಕರ, ನಿರ್ದೇಶಕರು, ಸಿಇಒ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

Facebook Comments