ವಾಯುವಿಹಾರದ ವೇಳೆ ಉತ್ತರಪ್ರದೇಶ ಬಿಜೆಪಿ ನಾಯಕನಿಗೆ ಗುಂಡಿಟ್ಟು ಹತ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ಭಾಗ್ಪತ್‍ಪುರ್ (ಉ.ಪ್ರ.), ಆ.11- ಬೆಳಗಿನ ವಾಯುವಿಹಾರದಲ್ಲಿದ್ದ ಉತ್ತರಪ್ರದೇಶದ ಬಿಜೆಪಿ ನಾಯಕ ಸಂಜಯ್ ಖೋಖರ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿರುವ ಘಟನೆ ಇಂದು ಬೆಳಗ್ಗೆ ಭಾಗ್ಪತ್‍ಪುರ್‍ನಲ್ಲಿ ನಡೆದಿದೆ.

ಭಾಗ್ಪತ್‍ನ ಚಾಪ್ರೌಲಿ ಪ್ರದೇಶದಲ್ಲಿರುವ ತಮ್ಮ ತೋಟದ ಮನೆಯಲ್ಲಿ ವಾಯುವಿಹಾರದಲ್ಲಿದ್ದ ಸಂಜಯ್ ಅವರ ಮೇಲೆ ವಾಹನದಲ್ಲಿದ್ದ ಮೂವರು ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾದರು.

ರಕ್ತದ ಮಡುವಿನಲ್ಲಿದ್ದ ಅವರನ್ನು ಆಸ್ಪತ್ರೆಗೆ ಸಾಗಿರುವ ಮಾರ್ಗದಲ್ಲಿ ಕೊನೆಯುಸಿರೆಳೆದರು.  ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿದ್ದ ಅವರು ಪಕ್ಷದ ಸ್ಥಳೀಯ ಪ್ರಭಾವಿ ಮುಖಂಡರಾಗಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಉನ್ನತ ಪೊಲೀಸ್ ಆಧಿಕಾರಿಗಳು ಮತ್ತು ಬಿಜೆಪಿ ಮುಖಂಡರು-ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿದರು.

ದುಷ್ಕರ್ಮಿಗಳ ಪತ್ತೆಗಾಗಿ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ. ಜಮ್ಮು-ಕಾಶ್ಮೀರದ ಬದ್ಗಾಮ್‍ನಲ್ಲಿ ಉಗ್ರಗಾಮಿಗಳ ಗುಂಡೇಟಿನಿಂದ ತೀವ್ರ ಗಾಯಗೊಂಡಿದ್ದ ಸ್ಥಳೀಯ ಬಿಜೆಪಿ ಮುಖಂಡ ಅಬ್ದುಲ್ ಹಮೀದ್ ನಜರ್ ನಿನ್ನೆಯಷ್ಟೇ ಕೊನೆಯುಸಿರೆಳೆದಿದ್ದರು.

ಕಳೆದ ಒಂದು ತಿಂಗಳಲ್ಲಿ ಉಗ್ರಗಾಮಿಗಳ ದಾಳಿಯಲ್ಲಿ ಹತರಾದ ನಾಲ್ಕನೆ ಬಿಜೆಪಿ ಮುಖಂಡರು ಇವರಾಗಿದ್ದಾರೆ. ಅಬ್ದುಲ್ ಹಮೀದ್ ಬಂಡಿಪೋರಾ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿದ್ದರು. ಇವರ ತಂದೆ ಮತ್ತು ಸಹೋದರನನ್ನು ಕಳೆದ ತಿಂಗಳು ಉಗ್ರರು ಗುಂಡಿಟ್ಟು ಹತ್ಯೆ ಮಾಡಿದ್ದರು.

ಆ.4ರಂದು ಬಿಜೆಪಿ ಸರ್‍ಪಂಚ್‍ನನ್ನು ಆತಂಕವಾದಿಗಳು ಹತ್ಯೆ ಮಾಡಿದ್ದರು. ಇದಾದ ಎರಡು ದಿನಗಳ ಬಳಿಕ ದಕ್ಷಿಣ ಕಾಶ್ಮೀರದಲ್ಲಿ ಕುಲ್ಗಂ ಜಿಲ್ಲೆಯಲ್ಲಿ ಮತ್ತೊಂದು ಸರ್‍ಪಂಚ್ ಮೇಲೆ ಗುಂಡು ಹಾರಿಸಿ ಕೊಲ್ಲಲಾಗಿತ್ತು.

Facebook Comments

Sri Raghav

Admin