ಶೂಟಿಂಗ್‍ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಮಾ.26-ಐಎಸ್‍ಎಸ್‍ಎಫ್ ವಿಶ್ವಕಪ್ ಶೂಟಿಂಗ್ ಪಂದ್ಯಾವಳಿಯಲ್ಲಿ ಭಾರತದ ಸಂಜೀವ್ ರಜಪೂತ್ ಹಾಗೂ ತೇಜಸ್ವಿನಿ ಸಾವಂತ್ ಚಿನ್ನ ಗೆದ್ದಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ 50 ಮೀ ರೇಂಜ್‍ನ ಮಿಶ್ರ ಪಂದ್ಯದಲ್ಲಿ ಈ ಜೋಡಿ ಉಕ್ರೇನ್‍ನ ಸೆರಿಯ್ ಕುಲಿಷ್ ಹಾಗೂ ಅನ್ನಲೀನಾ ಅವರನ್ನು ಮಣಿಸಿ ಚಿನ್ನ ಗೆದ್ದುಕೊಂಡಿದ್ದಾರೆ.

ಸಂಜೀವ್ ಮತ್ತು ತೇಜಸ್ವಿನಿ ಅವರ ಈ ಸಾಧನೆಯಿಂದ ಭಾರತ 11 ಚಿನ್ನದ ಪದಕಗಳನ್ನು ಗೆದ್ದುಕೊಂಡಂತಾಗಿದೆ. ಇದರೊಂದಿಗೆ ಐಶ್ವರ್ಯ್ ಪ್ರತಾಪ್‍ಸಿಂಗ್ ಹಾಗೂ ಸುನಿಧಿ ಚೌಹಾಣ್ ಮಿಶ್ರ ತಂಡ ಕಂಚು ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.

Facebook Comments