ಸಂಗಾಕ್ಕಾರ ಸಲಹೆ ಪಡೆದು ತಂಡ ಮುನ್ನಡೆಸುವೆ : ಸಂಜು ಸಮ್ಸನ್

ಈ ಸುದ್ದಿಯನ್ನು ಶೇರ್ ಮಾಡಿ

ಜೈಪುರ, ಮಾ.30- ಇದೇ ಮೊದಲ ಬಾರಿಗೆ ಐಪಿಎಲ್‍ನಲ್ಲಿ ತಂಡವನ್ನು ಮುನ್ನಡೆಸುತ್ತಿರುವು ದಕ್ಕೆ ನನಗೆ ಸಂತೋಷವಾಗುತ್ತಿದೆ ಎಂದು ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜುಸಮ್ಸನ್ ಅವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ನಾನು ನಾಯಕನಾಗಿರುವಾಗಲೇ ಶ್ರೀಲಂಕಾ ತಂಡದ ಮಾಜಿ ನಾಯಕ ಹಾಗೂ ಸ್ಫೋಟಕ ಆಟಗಾರ ಅವರು ನಮ್ಮ ತಂಡದ ನಿರ್ದೇಶಕರಾಗಿರುವುದು ನನ್ನ ಜವಾಬ್ದಾರಿಯನ್ನು ಸುಲಭವಾಗಿಸಲಿದೆ ಎಂದು ಅವರು ಹೇಳಿದ್ದಾರೆ.

ಕುಮಾರಸಂಗಾಕ್ಕಾರ ಅವರು ತಂಡದ ನಿರ್ದೇಶಕರಾಗಿರುವುದರಿಂದ ಎಲ್ಲಾ ವಿಭಾಗಗಳಲ್ಲೂ ಅವರು ನಮಗೆ ನೆರವಾಗಲಿದ್ದಾರೆ, ಅವರೊಂದಿಗೆ ಕೆಲಸ ಮಾಡಲು ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದು ಸಂಜು ಸುದ್ದಿಗಾರರಿಗೆ ತಿಳಿಸಿದ್ದಾರೆ. ಸಂಗಾಕಾರ ಅವರು ನಮ್ಮ ತಂಡದ ನಿರ್ದೇಶಕರಾಗಿ ಆಯ್ಕೆಯಾದ ಸುದ್ದಿ ಕೇಳಿಯೇ ನಾನು ತುಂಬಾ ಸಂತಸಗೊಂಡೆ. ಅವರು ಇನ್ನೂ ಹಲವು ವರ್ಷ ತಮ್ಮ ತಂಡಕ್ಕೆ ಮಾರ್ಗದರ್ಶಕರಾಗಿ ಮುಂದುವರೆಯುತ್ತಾರೆ.

ಅವರನ್ನು ಭೇಟಿ ಮಾಡಲು ಅವರಿಂದ ಕ್ರಿಕೆಟ್‍ನ ಕೆಲವು ಟಿಪ್ಸ್ ಪಡೆಯಲು, ತಂಡವನ್ನು ಮುನ್ನೆಡಸಲು ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದು ಕೂಡ ಸಮ್ಸನ್ ಹೇಳಿದ್ದಾರೆ. ಕಳೆದ ಬಾರಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿದ್ದ ಸ್ಟೀವ್‍ಸ್ಮಿತ್ ಅನುಪಸ್ಥಿತಿಯಲ್ಲಿ ಸಂಜು ಸಮ್ಸನ್ ತಂಡವನ್ನು ಮುನ್ನಡೆಸುತ್ತಿದ್ದಾರೆ.

Facebook Comments