ದಿನಗೂಲಿ ನೌಕರರಿಗೆ ಸಂಕ್ರಾಂತಿ ಗಿಫ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.10- ದಿನಗೂಲಿ ನೌಕರರ ತುಟಿಭತ್ಯೆ ಹಾಗೂ ಮನೆ ಬಾಡಿಗ ಭತ್ಯೆಯನ್ನು ಶೇ.75ರಿಂದ ಶೇ.90ಕ್ಕೆ ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಕಳೆದ ಡಿಸೆಂಬರ್1ರಿಂದ ಪೂರ್ವಾನ್ವಯ ಆಗುವಂತೆ ತುಟಿಭತ್ಯೆ ಹಾಗೂ ಮನೆಬಾಡಿಗೆ ಭತ್ಯೆಯನ್ನು ಪರಿಷ್ಕರಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿದೆ.

ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ 2012ರಡಿ ಅಧಿಸೂಚಿಸಲ್ಪಟ್ಟ ಅರ್ಹ ದಿನಗೂಲಿ ನೌಕರರಿಗೆ 2014ರ ಸೆಪ್ಟಂಬರ್ 19ರ ಸರ್ಕಾರಿ ಆದೇಶದಲ್ಲಿ ನಿಗದಿಪಡಿಸಿರುವ ಮಾನದಂಡಗಳಿಗೆ ಒಳಪಟ್ಟು ಪ್ರಸ್ತುತ ನೀಡಲಾಗುತ್ತಿರುವ ಶೇ.75ರಷ್ಟು ತುಟಿಭತ್ಯೆಯನ್ನು ಶೇ.90ಕ್ಕೆ ಪರಿಷ್ಕರಿಸಿದೆ.

ದಿನಗೂಲಿ ನೌಕರರಿಗೆ ಸೇವೆಯಲ್ಲಿ ಮುಂದುವರೆಸಿದ ಹುದ್ದೆಯ ಕಾಲಿಕ ವೇತನಶ್ರೇಣಿಯ ಕನಿಷ್ಟ ವೇತನಕ್ಕೆ ರಾಜ್ಯ ಸರ್ಕಾರಿ ನೌಕರರಿಗೆ ಕಾಲಕಾಲಕ್ಕೆ ನೀಡಲಾಗುವ ತುಟ್ಟಿಭತ್ಯೆ ಹಾಗೂ ಮನೆ ಬಾಡಿಗೆ ಭತ್ಯೆಯ ಶೇ.75ರಷ್ಟನ್ನು ಈ ಹಿಂದೆ ಮಂಜೂರು ಮಾಡಲಾಗಿತ್ತು.

Facebook Comments

Sri Raghav

Admin