ಸಂಕ್ರಾಂತಿ ಹಬ್ಬದ ಪ್ರಯುಕ್ತ ನಾಳೆ ಸಾಂಸ್ಕøತಿಕ ಸ್ಪರ್ಧೆಗಳು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.14- ನಾಳೆ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಸಂಕ್ರಾಂತಿ ಸೇವಾ ಸಮಿತಿ ವತಿಯಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬನಶಂಕರಿ 3ನೇ ಹಂತದ ಕತ್ರಿಗುಪ್ಪೆ ಬಿಗ್‍ಬಜಾರ್ ರಸ್ತೆಯ ಶ್ರೀ ಮಹಾಲಕ್ಷ್ಮಿ ದೇವಸ್ಥಾನ, 80 ಅಡಿರಸ್ತೆ ಭುವನೇಶ್ವರಿ ನಗರದಲ್ಲಿ ಸಂಕ್ರಾಂತಿ ಹಬ್ಬದ ಹಿನ್ನೆಲೆ ಸಾರ್ವಜನಿಕರಿಗಾಗಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ನಾಳೆ ಬೆಳಗ್ಗೆ 10.30ರಿಂದ 12 ಗಂಟೆಯೊಳಗೆ ಮಕ್ಕಳಿಗಾಗಿ ಚಿತ್ರಕಲಾ ಸ್ಫರ್ಧೆ, ಮಧ್ಯಾಹ್ನ 3.30ರಿಂದ 5 ಗಂಟೆಯೊಳಗೆ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ,5.30ಕ್ಕೆ ಮೊಸರುಗಡಿಗೆ ಹೊಡೆಯುವ ಸ್ಪರ್ಧೆ, 6.30ಕ್ಕೆ ಗಣೇಶ ಎಂಟರ್‍ಟ್ರೈನರ್ಸ್ ವತಿಯಿಂದ ಚಲನಚಿತ್ರ ಹಿನ್ನೆಲೆ ಗಾಯಕರಿಂದ ಸಂಗೀತ ಸಂಜೆ ಹಾಗೂ ರಾತ್ರಿ 8 ಗಂಟೆಗೆ ಎತ್ತುಗಳ ಕಿಚ್ಚು ಹಾಯಿಸುವ ಸಂಕ್ರಾಂತಿ ವೈಶಿಷ್ಟ್ಯ ನಡೆಯಲಿದೆ ಎಂದು ಸಂಕ್ರಾಂತಿ ಸೇವಾ ಸಮಿತಿ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಸಮಿತಿ ಮುಖಂಡರಾದ ಬಾಬು ಮೊ:9886606599 ಸಂಪರ್ಕಿಸಬಹುದಾಗಿದೆ.

Facebook Comments