ಇಡೀ ಸಮಾಜದಿಂದ ಆಗುತ್ತಿದೆ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ : ಸಂತೋಷ್ ಹೆಗ್ಡೆ ಕಳವಳ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.10- ಮಾನವ ಹಕ್ಕುಗಳ ಉಲ್ಲಂಘನೆ ವ್ಯಕ್ತಿಗಳಿಂದ ಆಗುತ್ತಿಲ್ಲ. ಇಡೀ ಸಮಾಜದಿಂದ ಆಗುತ್ತಿದೆ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು. ಪ್ರೆಸ್ ಕ್ಲಬ್‍ನಲ್ಲಿ ಕರ್ನಾಟಕ ಮಾನವ ಹಕ್ಕುಗಳ ಜನ ಜಾಗೃತಿ ವೇದಿಕೆ ಹಮ್ಮಿಕೊಂಡಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಹಾಗೂ ರಾಜ್ಯ ಸಾರಿಗೆ ನೌಕರರ ಮಾನವ ಹಕ್ಕುಗಳ ಜಾಗೃತಿ ವೇದಿಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾನವನಿಗೆ ಮೂಲಭೂತ ಹಕ್ಕು ಕಾನೂನಿನಿಂದ ಬರಬೇಕಾಗಿಲ್ಲ. ಅದನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ. ನಾವೆಲ್ಲ ನಮ್ಮ ನಮ್ಮ ಜೀವನದಲ್ಲಿ ಸಾಮಾಜಿಕ ಮೌಲ್ಯಗಳನ್ನು ಅಳವಡಿಸಿಕೊಂಡರೆ ಸಾಕು ಮಾನವ ಹಕ್ಕುಗಳ ಪಾಲನೆ ಆಗಲು ಸಾಧ್ಯವಿದೆ ಎಂದರು.

ಪ್ರಸ್ತುತ ಸಮಾಜ ಸಾಕಷ್ಟು ಬದಲಾಗಿದೆ. ಜೈಲಿನಿಂದ ಬಂದವರನ್ನು ಹಾರ ತುರಾಯಿ ಹಾಕಿ ಸಂಭ್ರಮಿಸುವ ಕಾಲ ಇದಾಗಿದೆ. ಶ್ರೀಮಂತಿಕೆಯನ್ನು ಮತ್ತು ಅಧಿಕಾರವನ್ನು ಪೂಜಿಸುವವರು ಹೆಚ್ಚಾಗಿದ್ದಾರೆ. ಇದು ಬದಲಾಗಬೇಕು. ಇನ್ನೊಬ್ಬರಿಗೆ ಸಹಾಯ ಮಾಡುವವನು ನಿಜವಾದ ಮಾನವ ಎಂದರು.

ಇಂದಿನ ಫೋಷಕರು ಮಕ್ಕಳಿಗೆ ಸಮಯವನ್ನು ಮೀಸಲಿಡುತ್ತಿಲ್ಲ. ಮಕ್ಕಳು ಏನು ಮಾಡುತ್ತಿದ್ದಾರೆ ಎಂದು ಕೂಡ ಅವರಿಗೆ ತಿಳಿಯುವುದಿಲ್ಲ. ಗಂಡ ಹೆಂಡತಿ ಕೆಲಸದಲ್ಲಿ ಮುಳುಗಿದ್ದಾರೆ. ವೃದ್ಧರು ಆಶ್ರಮಗಳಲ್ಲಿ ಇರುವಂತಾಗಿದೆ. ಮಕ್ಕಳಿಗೆ ಸಂಸ್ಕøತಿ ಹೇಳಿಕೊಡವಲ್ಲಿ ಫೋಷಕರು ಮುಂದಾಗುತ್ತಿಲ್ಲ ಎಂದರು.

ಕಾರ್ಯಕ್ರಮದಲ್ಲಿ ವೇದಿಕೆಯ ರಾಜ್ಯಾಧ್ಯಕ್ಷ ಡಾ. ಭಾಸ್ಕರ್, ಪತ್ರಕರ್ತ ಬಿ.ಎಸ್. ಮಂಜುನಾಥ್, ಉದ್ಯಮಿ ಡಾ. ಗೋಪಾಲರಡ್ಡಿ, ಸಮಾಜ ಸೇವಕ ಡಾ.ಕೆ. ಚಂದ್ರಶೇಖರ ರೆಡ್ಡಿ, ಡಾ. ಎಲï.ಎಸ್. ನಾರಾಯಣ ರೆಡ್ಡಿ ಮತ್ತಿತರರಿದ್ದರು.

Facebook Comments