ಸುಶಾಂತ್ ಜೊತೆ ಡೇಟಿಂಗ್, ಹೊಸ ವಿಷಯ ಬಾಯ್ಬಿಟ್ಟ ಸಾರಾ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.28- ಬಾಲಿವುಡ್‍ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್‍ಸಾವು ಪ್ರಕರಣ ಮತ್ತು ಮಾದಕ ವಸ್ತು ಜಾಲಕ್ಕೆ ಸಂಬಂಸಿದಂತೆ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿರುವ ಮಾದಕ ವಸ್ತು ನಿಯಂತ್ರಣ ಮಂಡಳಿ (ಎನ್‍ಸಿಬಿ) ಗೆಬಿ-ಟೌನ್ ಬೆಡಗಿಯರ ತೆರೆಮರೆ ಪ್ರಸಂಗಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಎನ್‍ಸಿಬಿ ಮುಂದೆ ವಿಚಾರಣೆ ಒಳಪಟ್ಟ ನಟಿ ಸಾರಾ ಅಲಿ ಖಾನ್ (ತಾರಾದಂಪತಿ ಸೈಫ್ ಅಲಿ ಖಾನ್ ಮತ್ತುಅಮೃತಾ ಸಿಂಗ್ ಪುತ್ರಿ) ತನಗೆ ಸುಶಾಂತ್ ಜೊತೆ ಅತ್ಯಂತ ನಿಕಟ ಸಂಬಂಧವಿತ್ತು. ನಾವಿಬ್ಬರು ಜೊತೆ ಜೊತೆಯಾಗಿ ಅನೇಕ ಕಡೆಡೇಟಿಂಗ್ (ಸುತ್ತಾಟ) ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಅಲ್ಲದೇ ಸುಶಾಂತ್ ಮತ್ತು ನಾನು ಥೈಲೆಂಡ್ ಪ್ರವಾಸಕ್ಕೂ ಹೋಗಿ ಬಂದ ಸಂಗತಿಯನ್ನು ಬಾಯ್ಬಿಟ್ಟಿದ್ದಾರೆ. ಕೇದಾರ್ ನಾಥ್‍ಚಿತ್ರದ ಸಂದರ್ಭದಲ್ಲಿ ಸುಶಾಂತ್ ಮತ್ತು ಸಾರಾ ಗೆಳೆತನ ಬೆಳೆದಿತ್ತು ಎಂಬ ಸುದ್ದಿಗೆ ಈ ಹೇಳಿಕೆ ಪುಷ್ಠಿ ನೀಡಿದೆ.

ಇದೇ ವೇಳೆ ಶ್ರದ್ಧಾಕಫೂರ್ ಮತ್ತುರಾಕುಲ್ ಪ್ರೀತ್ ಸಿಂಗ್ ತಾವು ಸುಶಾಂತ್‍ತೋಟದ ಮನೆಯಲ್ಲಿ ಏರ್ಪಡಿಸಿದ್ದ ಪಾರ್ಟಿಗಳಲ್ಲಿ ಭಾಗವಹಿಸಿದ್ದು ನಿಜ ಆದರೆ ನಾವು ಡ್ರಗ್ಸ್ ಸೇವಿಸಿಲ್ಲ. ನಮಗೆ ಸಿಗರೇಟ್ ಸೇದುವ ಅಭ್ಯಾಸಕೂಡ ಇಲ್ಲ ಎಂದು ಹೇಳಿದ್ದಾರೆ.

ಪದ್ಮಾವತ್‍ಖ್ಯಾತಿಯ ದೀಪಿಕಾ ಪಡುಕೋಣೆ ವಾಟ್ಸಾಪ್ ಗ್ರೂಪ್ ಚಾಟ್ ಬಗ್ಗೆ ವಿಚಾರಣೆ ವೇಳೆ ಒಪ್ಪಿಕೊಂಡರೂ. ತಮಗೆ ಸಿಗರೇಟ್ ಅಭ್ಯಾಸವಿಲ್ಲ ಎಂದು ಪ್ರಶ್ನೆಗಳ ಸುರಿಮಳೆ ವೇಳೆ ಮೂರು ಬಾರಿ ಗಳಗಳನೇ ಕಣ್ಣೀರು ಹಾಕಿದರು ಎಂದರು.

ಖ್ಯಾತ ನಟಿಮಣಿಯರಾದ ದೀಪಿಕಾ ಪಡುಕೋಣೆ, ಶ್ರದ್ಧಾಕಪೂರ್, ರಾಕುಲ್ ಪ್ರೀತ್ ಮತ್ತು ಸಾರಾ ಅಲಿ ಖಾನ್‍ಅವರ ಮೊಬೈಲ್ ಫೆÇೀನ್‍ಗಳನ್ನು ಜಪ್ತಿ ಮಾಡಿದ್ದು, ಹೆಚ್ಚಿನ ಪರಿಶೀಲನೆಗಾಗಿ ವಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದೆ.

ಸುದೀರ್ಘ ವಿಚಾರಣೆ ವೇಳೆ ಕೆಲವು ಮಹತ್ವದ ಸಂಗತಿಗಳು ಬೆಳಕಿಗೆ ಬಂದಿದ್ದು, ಈ ಹಿನ್ನೆಲೆಯಲ್ಲಿಅವರ ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡು ಫೋರೆನ್ಸಿಕ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಎನ್‍ಸಿಪಿ ಉನ್ನತ ಮೂಲಗಳು ತಿಳಿಸಿವೆ.

ನಟಿಮಣಿಯರಲ್ಲದೇ, ದೀಪಿಕಾ ವಹಿವಾಟು ನೋಡಿಕೊಳ್ಳುವ ವ್ಯವಸ್ಥಾಪಕಿ ಕರಿಷ್ಮಾ ಪ್ರಕಾಶ್ ಮತ್ತುಟ್ಯಾಲೆಂಟ್ ಮ್ಯಾನೇಜರ್ ಜಯಾ ಸಹ ಅವರ ಫೆÇೀನ್‍ಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.

ದೀಪಿಕಾ ಪಡುಕೋಣೆ ವಾಟ್ಸಾಪ್ ಮೂಲಕ ಡ್ರಗ್ಸ್‍ಗೆ ಸಂಬಂಸಿದಂತೆ ಗೋಪ್ಯವಾಗಿ ನಡೆಸಿದರೆಂದು ಹೇಳಲಾದ ಸಂದೇಶಗಳು ಬೆಳಕಿಗೆ ಬಂದಿರುವ ಹಿನ್ನಲೆಯಲ್ಲಿ ಈ ಬೆಳವಣಿಗೆ ಭಾರೀ ಪ್ರಾಮುಖ್ಯತೆ ಪಡೆದುಕೊಂಡಿದೆ.

Facebook Comments

Sri Raghav

Admin