ಶಿವಾಜಿನಗರದಲ್ಲಿ ಸರವಣ ಪರ ಜಗ್ಗೇಶ್ ಮತಯಾಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.30-ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ. ಸರವಣ ಪರವಾಗಿ ಚಲನಚಿತ್ರ ನಟ ನವರಸ ನಾಯಕ ಜಗ್ಗೇಶ್ ಇಂದು ಕ್ಷೇತ್ರದಲ್ಲಿ ಕಮಾಲ್ ಮೂಡಿಸಿದರು.  ಬೆಳಗ್ಗೆ 8 ಗಂಟೆಯಿಂದ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಜಯಮಾಲ್ ವಾರ್ಡ್‍ನಲ್ಲಿ ವಸತಿ ಸಚಿವ ವಿ.ಸೋಮಣ್ಣ ಹಾಗೂ ಪಕ್ಷದ ಅಪಾರ ಸಂಖ್ಯೆಯ ಕಾರ್ಯಕರ್ತರೊಂದಿಗೆ ಮನೆ ಮನೆಗೆ ತೆರಳಿ ಅಭ್ಯರ್ಥಿ ಪರ ಮತಯಾಚನೆ ಮಾಡಿದರು.

ಜಯಮಾಲ್ ವಾರ್ಡ್ ಮತದಾರರ ಮನೆಗೆ ತೆರಳಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಆಡಳಿತದಲ್ಲಿದೆ. ಹೀಗಾಗಿ ಸರವಣ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ ಶಿವಾಜಿನಗರ ಕ್ಷೇತ್ರದ ಅಭಿವೃದ್ದಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.

ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗಳು ಗೆದ್ದರೆ ಒಂದು ಸಂಖ್ಯೆ ಹೆಚ್ಚಳವಾಗಬಹುದೇ ಹೊರತು ಹೆಚ್ಚೇನೂ ಲಾಭವಿಲ್ಲ. ಅದೇ ಸರವಣ ಗೆದ್ದರೆ ನಿಮ್ಮ ಕ್ಷೇತ್ರಕ್ಕೆ ಏನೇನು ಮೂಲಭೂತ ಸೌಕರ್ಯಗಳ ಅಗತ್ಯವಿದೆಯೋ ಅದೆಲ್ಲವನ್ನು ಮಾಡಿಕೊಡುತ್ತಾರೆ. ಇಂತಹ ಅವಕಾಶ ಕಳೆದುಕೊಳ್ಳಬೇಡಿ ಎಂದು ಕೈ ಮುಗಿದು ಪ್ರಾರ್ಥಿಸಿದರು.

ಅಭ್ಯರ್ಥಿ ಸರವಣ ಮಾತನಾಡಿ, ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ರಾಜ್ಯದ ಏಳ್ಗೆಗೆ ಶ್ರಮಿಸುತ್ತಿದೆ. ಶಿವಾಜಿನಗರದಲ್ಲಿ ಸಾಕಷ್ಟು ಬೇಡಿಕೆಗಳನ್ನು ಜನರು ಮುಂದಿಟ್ಟಿದ್ದಾರೆ. ಇದರೊಟ್ಟಿಗೆ ಖುದ್ದು ಮನೆಮನೆಗೆ ಭೇಟಿ ನೀಡಿ ಜನರ ಆಶೀರ್ವಾದ ಬೇಡಿದ್ದೇನೆ. ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ ಎಂದರು.

2001ರಿಂದ 2006ರವರೆಗೆ ಹಲಸೂರು ವಾರ್ಡ್‍ನ ಪಾಲಿಕೆ ಸದಸ್ಯನಾಗಿ ಸೇವೆ ಮಾಡಿದ್ದೇನೆ. ಜನರ ಕಷ್ಟ, ತಳಮಟ್ಟದ ಸಮಸ್ಯೆ ಒಬ್ಬ ಪಾಲಿಕೆ ಸದಸ್ಯನಿಗೆ ಮಾತ್ರ ತಿಳಿಯಲು ಸಾಧ್ಯ. ನಾನು ಆ ಸಮಸ್ಯೆಗಳನ್ನು ಅರಿತಿದ್ದೇನೆ. ಹೀಗಾಗಿ ಜನರಿಗೆ ವೇಗವಾಗಿ ಸ್ಪಂದಿಸುವ ಶಕ್ತಿ ನನ್ನಲ್ಲಿದೆ ಎಂದು ತಿಳಿಸಿದರು.

ಬೆಳಗ್ಗೆಯಿಂದಲೇ ಪ್ರಾರಂಭಗೊಂಡ ಬಿರುಸಿನ ಪ್ರಚಾರದಲ್ಲಿ ಕಾಪೆರ್Çೀರೇಟರ್ ಹಾಗೂ ಸರವಣ ಅವರ ಪತ್ನಿ ಮಮತ ಸರವಣ, ಬಿಬಿರಂಪಿ ಸದಸ್ಯರು, ಬಿಜೆಪಿ ಕಾರ್ಯಕರ್ತರು ಸೇರಿದಂತೆ ಮತ್ತಿತರು ಪ್ರಚಾರ ನಡೆಸಿದರು. ಮಧ್ಯಾಹ್ನದ ನಂತರ ಕ್ಷೇತ್ರದ ವಿವಿಧೆಡೆ ಪ್ರಚಾರದಲ್ಲಿ ತೊಡಗಿಕೊಂಡರು. ಇಡೀ ದಿನದ ಪ್ರಚಾರದಲ್ಲಿ ಬಿಜೆಪಿಯ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡು ಮತಯಾಚನೆ ಮಾಡಿದರು.

Facebook Comments